ಮಾಜಿ ಸಚಿವ ಎಚ್​.ಡಿ.ರೇವಣ್ಣ ವಿರುದ್ಧ ಭ್ರಷ್ಟಾಚಾರ ಆರೋಪ…! ದೂರು ದಾಖಲಿಸಿದ ಬಿಜೆಪಿ ಮುಖಂಡ…!!

561

ಸಮ್ಮಿಶ್ರ ಸರ್ಕಾರ ಪತನದ ಬೆನ್ನಲ್ಲೇ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಒಂದೊಂದೆ ಹಗರಣಗಳು ಬೆಳಕಿಗೆ ಬರಲಾರಂಭಿಸಿದ್ದು, ಇದೀಗ ಮಾಜಿ ಲೋಕೋಪಯೋಗಿ ಸಚಿವ ಹೆಚ್​.ಡಿ.ರೇವಣ್ಣ ವಿರುದ್ಧ ಭಾರೀ ಅವ್ಯಹಾರದ ಆರೋಪ ಕೇಳಿ ಬಂದಿದೆ.


ರೇವಣ್ಣ ವಿರುದ್ಧ ಅವ್ಯವಹಾರದ ಆರೋಪದ ಜೊತೆಗೆ ಎಸಿಬಿ ಮತ್ತು ಬಿಎಂಟಿಎಫ್​​ನಲ್ಲಿ ರೇವಣ್ಣ ವಿರುದ್ಧ ಕೂಡ ದೂರು ದಾಖಲಾಗಿದೆ. ಎಲಿವೇಟೆಡ್​ ಕಾರಿಡಾರ್​​ ಯೋಜನೆಗೆ ಸಂಬಂಧಿಸಿದಂತೆ 9960 ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಐಎಎಸ್​ ಅಧಿಕಾರಿಗಳಾದ ರಜನೀಶ್​ ಗೋಯಲ್​​, ಪಿಸಿ ಜಾಫರ್​​​, ಕೃಷ್ಣಾ ರೆಡ್ಡಿ, ಕೆಆರ್​ಡಿಸಿಎಲ್​ ಎಂಡಿ ಬಿ.ಎಸ್​.ಶಿವಕುಮಾರ್​​​​ ವಿರುದ್ಧ ದೂರು ಬಿಜೆಪಿ ಮುಖಂಡ ಎನ್​.ಆರ್​​​.ರಮೇಶ್​ ದಾಖಲಿಸಿದ್ದಾರೆ.

ad


ಬೆಂಗಳೂರು ಸುತ್ತ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ವೃತ್ತಗಳನ್ನು ಸಂಪರ್ಕಿಸುವ ಉದ್ದೇಶದಿಂದ 87 ಕಿಲೋ ಮೀಟರ್​​ ಉದ್ದದ ಎಲಿವೇಟೆಡ್ ಕಾರಿಡಾರ್​ ಅನ್ನು 17000 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗಿತ್ತು. ಏಕಾಏಕಿ ಈ ಮೊತ್ತವನ್ನು 26960 ಕೋಟಿ ವೆಚ್ಚಕ್ಕೆ ಹೆಚ್​ಡಿ ರೇವಣ್ಣ ಸೂಚನೆ ಮೇರೆಗೆ ಹೆಚ್ಚಿಸಲಾಗಿದೆ ಎಂದು ರಮೇಶ್​ ಆರೋಪಿಸಿದ್ದಾರೆ.


ಭೂ ಸ್ವಾಧೀನಕ್ಕೆ ಆಗಲಿದ್ದ 193 ಕೋಟಿ ವೆಚ್ಚವನ್ನು ಸಚಿವರ ಸೂಚನೆ ಮೇರೆಗೆ 306 ಕೋಟಿಗೆ ಹೆಚ್ಚಳ ಮಾಡಿ ಗುತ್ತಿಗೆ ಸಂಸ್ಥೆಗಳಿಗೆ ಲಾಭ ಮಾಡುವ ಮೂಲಕ ಆ ಹಣವನ್ನು ರೇವಣ್ಣ ಚುನಾವಣೆಗೆ ಬಳಸಿದ್ದಾರೆ ಎಂದು ರಮೇಶ್​ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

Sponsored :

Related Articles