ಯಡಿಯೂರಪ್ಪ ಪ್ರಮಾಣ ವಚನಕ್ಕೆ ‍ದಿನಾಂಕ ನಿಗದಿ !! ‍ಕಂಠೀರವ ‍ಸ್ಟೇಡಿಯಂನಲ್ಲೇ ಕಾರ್ಯಕ್ರಮ !! ‍ಕೂಸು ಹುಟ್ಟೊ ಮೊದಲೇ ಕುಲಾವಿ ಹೊಲಿಸಿದ ಬಿಎಸ್ ವೈ !!

2369

ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಹರಸಾಹಸಪಡುತ್ತಿದ್ದರೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದ ಗಡಿಬಿಡಿಯಲ್ಲಿದ್ದಾರೆ.

 ಹೌದು. ಮೇ 18 ಅಥವಾ 19 ರಂದು ಬಿ ಎಸ್ ವೈ ಮುಖ್ಯಮಂತ್ರಿ ಪದಗ್ರಹಣದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ. ಪ್ರಧಾನಿ ಸಹಿತ ದೇಶದ ಹಲವು ಗಣ್ಯರು ಸಾಕ್ಷಿಯಾಗಲಿರೋ ಈ ಕಾರ್ಯಕ್ರಮಕ್ಕೆ ಕಂಠೀರವ ಸ್ಟೇಡಿಯಂ ಅನ್ನು ಆಯ್ಕೆ ಮಾಡಲಾಗಿದೆ. ಹೀಗಂತ ಹೇಳಿರೋದು ಖುದ್ದು ಬಿ ಎಸ್ ಯಡಿಯೂರಪ್ಪ.! ಚುನಾವಣಾ ಪ್ರಚಾರಕ್ಕೆ ಗದಗ ಜಿಲ್ಲೆಗೆ ಆಗಮಿಸಿದ ಬಿಎಸ್ವೈ ಈ ಹೇಳಿಕೆ ನೀಡಿದ್ದಾರೆ. ಪ್ರಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಯಡಿಯೂರಪ್ಪ ಸಿಎಂ ಅವರನ್ನು ಏಕವಚನದಲ್ಲಿ ನಿಂದಿಸಿದರು. ಅವನದ್ದು ತಲೆತಿರುಕ ಮಾತು ಅವನ ಸುತ್ತಮುತ್ತ ಇರೋರು ಯಾರು ? ನನ್ನ ಮೇಲಿನ ಆರೋಪಗಳಿಂದ ಖುಲಾಸೆಯಾಗಿದ್ದೇನೆ. ನಾನು ಆರೋಪಗಳಿಂದ ಮುಕ್ತನಾದ ಮೇಲೂ ಈ ಬಗೆಯ ಬೇಜವಾಬ್ದಾರಿ ಹೇಳಿಕೆ ಕೊಡ್ತಾರೆ. ಅವರು ಸೋಲೋದು ಖಾತ್ರಿಯಾಗಿರೋದ್ರಿಂದ ಡೆಸ್ಪರೇಟಾಗಿ ಮನಬಂದಂತೆ ಮಾತಾಡ್ತಾರೆ ಎಂದರು.

ad

ಕಾಂಗ್ರೆಸ್ ನ ಪ್ರಣಾಳಿಕೆ ಹಾಸ್ಯಾಸ್ಪದ, ಜನ ವಿಶ್ವಾಸವಿಡೊಲ್ಲ. ಲೋಕಾಯುಕ್ತವನ್ನು ಬಲಪಡಿಸ್ತೀವಿ ಅಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಎಸಿಬಿ ದುರ್ಬಳಕೆ ಮಾಡಿಕೊಂಡು ಲೋಕಾಯುಕ್ತವನ್ನು ನಿಶ್ಕ್ರಿಯಗೊಳಿಸಿ ಲೂಟಿಕೋರರಿಗೆ ಬೆಂಬಲ ಕೊಟ್ಟಿದ್ದಾರೆ. ನೀರಾವರಿ ಯೋಜನೆಗೆ ಆದ್ಯತೆ ಎಂದಿದ್ದಾರೆ ಎಲ್ಲಿ ನಿಮ್ಮ ತಲೆ ? ಕೃಷ್ಣ ಬೇಸನ್ ಗೆ ೫ ವರ್ಷದಲ್ಲಿ ೫೦ ಸಾವಿರ ಕೋಟಿ ಖರ್ಚು ಮಾಡ್ತೀನಿ ಎಂದಿದ್ರು ೭ ಸಾವಿರ ಕೋಟಿನೂ ಖರ್ಚು ಮಾಡಿಲ್ಲ. ಕೆಲಸಕ್ಕೆ ಬಾರದವರ ಕೆಲಸಕ್ಕೆ ಬಾರದ ಮಾತುಗಳಿಗೆ ಅರ್ಥ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು. ಮೇ ೧೮ ಅಥವಾ ೧೯ ಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸ್ತೀನಿ ಎಂದೂ ಬಿಎಸ್ ವೈ ಇದೇ ಸಂಧರ್ಭದಲ್ಲಿ ಹೇಳಿದರು.

Sponsored :

Related Articles