ಹಾಸ್ಯನಟ ಕೋಮಲ್​ ಮೇಲೆ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ! ಸಂಪಿಗೆ ಥಿಯೇಟರ್ ಬಳಿ ಘಟನೆ!!

3356
9900071610

ಕೆಂಪೆಗೌಡ್​-2 ಚಿತ್ರ ರಿಲೀಸ್​ನ ಸಂಭ್ರಮದಲ್ಲಿದ್ದ ಸ್ಯಾಂಡಲ್​ವುಡ್​ನ ಹಾಸ್ಯನಟ ಹಾಗೂ ನಾಯಕನಟ ಕೋಮಲ್​ ಮೇಲೆ ಹಾಡಹಗಲೇ ಹಲ್ಲೆ ನಡೆದಿದ್ದು, ಸ್ಯಾಂಡಲ್​ವುಡ್​ ಬೆಚ್ಚಿ ಬಿದ್ದಿದೆ.

ad


ಮಲ್ಲೆಶ್ವರದ ಸಂಪಿಗೆ ಥಿಯೇಟರ್​ ಬಳಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಬರುತ್ತಿದ್ದ ಕೋಮಲ್​ ಹಾಗೂ ವ್ಯಕ್ತಿಯೊಬ್ಬ ಬೈಕ್​ ನಡುವೆ ಡಿಕ್ಕಿಯಾಗಿದ್ದು, ಇದೇ ವಿಚಾರಕ್ಕೆ ಕೋಮಲ್​ ಹಾಗೂ ಬೈಕ್ ಸವಾರನ ನಡುವೆ ಗಲಾಟೆಯಾಗಿದೆ. ಬೈಕ್​ ಸವಾರ ಏಕಾಏಕಿ ಕೋಮಲ್​ ಮೇಲೆ ಹಲ್ಲೆ ನಡೆಸಿದ್ದು, ಮೂಗು ಹಾಗೂ ಮುಖದ ಮೇಲೆ ಹಲ್ಲೆ ಮಾಡಿದ್ದಾರೆ.


ಈ ಹಲ್ಲೆಯಿಂದ ಕೋಮಲ್​ ಗಾಯಗೊಂಡಿದ್ದು, ಮುಖ ಹಾಗೂ ಮೂಗಿನಲ್ಲಿ ರಕ್ತ ಸುರಿದಿದೆ. ತಕ್ಷಣ ಸ್ಥಳಕ್ಕೆ ಬಂದ ಮಲ್ಲೆಶ್ವರ ಪೊಲೀಸರು ಬೈಕ್​ ಸವಾರನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರೆಸಿದ್ದಾರೆ. ಪೊಲೀಸ್ ಠಾಣೆಗೆ ನಟ ಜಗ್ಗೇಶ್ ಕೂಡ ಭೇಟಿ ನೀಡಿದ್ದು, ಗಲಾಟೆ ವಿವರಣೆ ಪಡೆದಿದ್ದಾರೆ. ಕೇವಲ ಗಾಡಿ ಡಿಕ್ಕಿ ವಿಚಾರಕ್ಕೆ ಮಾತ್ರ ಈ ಹಲ್ಲೆ ನಡೆದಿದ್ಯಾ ಅಥವಾ ಯಾವುದಾದರೂ ವೈಯಕ್ತಿಕ ದ್ವೇಷಕ್ಕೆ ಈ ಹಲ್ಲೆ ನಡೆದಿದ್ಯಾ ಎಂಬುದರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

 

 

 

Sponsored :


9900071610