ಬ್ಯಾಡ್ಮಿಂಟನ್​​, ಕ್ರಿಕೆಟ್​ ತಾರೆಯರ ಬಯೋಪಿಕ್​ನಲ್ಲಿ ಬಾಲಿವುಡ್​ ಬೆಡಗಿಯರು! ದೀಪಿಕಾ,ತಾಪ್ಸಿ ಮಿಂಚೋದು ಯಾರ ಪಾತ್ರದಲ್ಲಿ ಗೊತ್ತಾ?!

195

ಕಳೆದೆರಡು ವರ್ಷಗಳಿಂದ ಬಾಲಿವುಡ್​​ನಲ್ಲಿ ಬಯೋಪಿಕ್​ಗಳದ್ದೇ ಹಾವಳಿ.  ಇದೀಗ ಈ ಸಾಲಿಗೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್  ಹೊಸ ಸೇರ್ಪಡೆ. ಹೌದು ಮಿಥಾಲಿ ರಾಜ್ ಹಾಗೂ ಪಿ.ವಿ.ಸಿಂಧು ಜೀವನಗಾಥೆ,  ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಯುತ್ತಿದ್ದು, ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಸಾಧಕಿಯರ ಪಾತ್ರದಲ್ಲಿ ಮಿಂಚಲಿದ್ದಾರೆ.

ad

ಹೌದು ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ  ಚಿತ್ರಗಳು ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿದ್ದು.ಪಿ.ವಿ. ಸಿಂಧೂ ಪಾತ್ರಕ್ಕೆ ದೀಪಿಕಾ ಹೇಳಿ ಮಾಡಿಸಿದ ಹಾಗಿದ್ದಾರೆ.ಮತ್ತು ಮಿಥಾಲಿ ರಾಜ್ ಪಾತ್ರಕ್ಕೆ ತಾಪ್ಸಿ ಪನ್ನು ಆಯ್ಕೆಯಾಗಿದ್ದಾರೆ. ಈ  ಎರಡು ಪಾತ್ರಕ್ಕೆ ದೀಪಿಕಾ , ತಾಪ್ಸಿಪನ್ನು  ಕಾಲ್‌ಶೀಟ್ ಗಾಗಿ ನಿರ್ದೆಕರು ಕಾಯುತ್ತಿದ್ದಾರೆ.

ಈ ಹಿಂದೆ ಕೂಡ ಧೋನಿ ಅವರ ಜೀವನ ಆಧಾರಿತ ಧೋನಿ ಸಿನಿಮಾ ಬಂದಿತ್ತು. ರಣವೀರ್ ಸಿಂಗ್ ಕಪಿಲ್ ದೇವ್ ಬಯೋಪಿಕ್‌ನ ‘83’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಮತ್ತು ಪರಿಣಿತಿ ಚೋಪ್ರಾ ಸೈನಾ ನೆಹ್ವಾಲ್ ಬಯೋಪಿಕ್‌ನಲ್ಲಿ ನಟಿಸುವುದಕ್ಕಾಗಿ ಬ್ಯಾಡ್ಮಿಂಟನ್ ಅಭ್ಯಾಸದಲ್ಲಿ ತೊಡಗಿದ್ದಾರೆ.

Sponsored :

Related Articles