ಹಳ್ಳಿ ಊಟ, ತೆರೆದ ಆಕಾಶದಡಿ‌ ನಿದ್ದೆ ದೇಸಿ ಲುಕ್ ನಲ್ಲಿ ಮಿಂಚಿದ ಡಿಸಿಎಂ! ಇದು ಉಪಮುಖ್ಯಮಂತ್ರಿ ಗ್ರಾಮವಾಸ್ತವ್ಯದ ಹೈಲೈಟ್ಸ್!!

12894
9900071610

ಸಿಎಂ ಕುಮಾರಸ್ವಾಮಿ ರಾಜ್ಯದಲ್ಲಿ ಗ್ರಾಮವಾಸ್ತವ್ಯಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿಯೊಬ್ಬರ ಗ್ರಾಮವಾಸ್ತವ್ಯ ದೇಶದ ಗಮನ ಸೆಳೆಯುತ್ತಿದೆ. ಯಾರು ಆ ಡಿಸಿಎಂ ಅನ್ನೋ ಕುತೂಹಲನಾ? ಇಲ್ಲಿದೆ ಮಾಹಿತಿ.

ad

ರಾಜಸ್ಥಾನ್ ಪ್ರದೇಶದ ಕಾಂಗ್ರೆಸ್ ಹಾಗೂ ಡಿಸಿಎಂ ಆಗಿರುವ  ಸಚಿನ್ ಪೈಲಟ್ ದೇಸಿ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಅವರ ನ್ಯೂ ದೇಸೀ ಲುಕ್ ಹಾಗೂ ಸರಳತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಹಳ್ಳಿಯಲ್ಲಿ ಸಚಿನ್ ಪೈಲಟ್ ತನ್ನ ಬೆಂಬಲಿಗರೊಂದಿಗೆ ಗ್ರಾಮಸ್ಥರು ತಯಾರಿಸಿದ್ದ ಅಡುಗೆ ಸೇವಿಸಿ, ಮಂಚದ ಮೇಲೆ ಹಳ್ಳಿ ಹೈದನಂತೆ ಕುಳಿತು ಹರಟೆ ಹೊಡೆಯುತ್ತಾ, ರಾತ್ರಿ ಹೊತ್ತು ಅದೇ ಮಂಚದಲ್ಲಿ ಚಂದ್ರನನ್ನು ನೋಡುತ್ತಾ ನಿದ್ದೆಗೆ ಜಾರಿರುವ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಜಸ್ಥಾನದ ಕಸೇಲಾ ಹಳ್ಳಿಯ ರೈತ ಜಯ್ ಕಿಶನ್ ಮನೆಯಲ್ಲಿ ತಂಗಿದ್ದು ಹಳ್ಳಿ ಸೊಬಗನ್ನು ಆನಂದಿಸುತ್ತಿರುವ ಡಿಸಿಎಂ ಫೋಟೋಗಳು ಈ ಕೆಳಗಿನಂತಿವೆ ನೋಡಿ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ದಿಲ್ಲಿಗೆ ಹಾರಿ, ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವುದರಲ್ಲಿ ಒಂದೆಡೆ ಬ್ಯೂಸಿಯಾಗಿದ್ದಾರೆ ಮತ್ತೊಂದೆಡೆ ಯುವ ನಾಯಕ, ಡಿಸಿಎಂ ಹಳ್ಳಿಗಳಿಗೆ ಭೇಟಿ ನೀಡಿ ಜನರ ನಡುವೆ ಸಮಯ ಕಳೆಯುತ್ತಿದ್ದಾರೆ.

ಭಾನುವಾರ ಕಸೇಲಾ ಹಳ್ಳಿಯ ಜನರನ್ನು ಭೇಟಿಯಾಗಿದ ಡಿಸಿಎಂ ಸಂಚೌರಾದ ಕಸೇಲಾ

ಕಳೆದ 2 ವರ್ಷಗಲ ಹಿಂದೆಯೂ ರೈತ ಜಯ್ ಕಿಶನ್ ಮನೆಯಲ್ಲಿ ಉಳಿದುಕೊಂಡ ಸಚಿನ್ ಪೈಲಟ್ ರನ್ನು ಹಳ್ಳಿಯ ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಸದ್ಯ ಇದೀಗಾ ಪುನಃ ಸಚಿನ್ ಈ ಹಳ್ಳಿಗೆ ಭೇಟಿ ನೀಡಿದ್ದಾರೆ.

ರೈತನ ಮನೆಯಲ್ಲಿಯೇ ಊಟ ಮಾಡಿದ ಸಚಿನ್ ಪೈಟಲ್, ಸೋಮವಾರದಂದು ಹಳ್ಳಿಯ ಜನರ ಬಳಿ ತೆರಳಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಾರ್ವಾಡಾ ಪ್ರವಾಸಕ್ಕೆಂದು ಬಂದಿದ್ದ ಸಚಿನ್ ಪೈಲಟ್ ಒಂದು ದಿನವನ್ನು ಸಂಚೌರಾದ ಸಮೀಪದಲ್ಲಿರುವ ಕಸೇಲಾ ಹಳ್ಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.

ಜನಸಾಮಾನ್ಯರನ್ನು ಭೇಟಿಯಾಗುವುದರೊಂದಿಗೆ ಅಧಿಕಾರಿಗಳನ್ನೂ ಕೂಡ ಭೇಟಿಯಾಗಿದ್ದಾರೆ.

ಜನಸಾಮಾನ್ಯರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದ ಡಿಸಿಎಂ ಸಚಿನ್ ಪೈಲಟ್ ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರಿಸುವಂತೆ ಆದೇಶಿಸಿದ್ದಾರೆ.

ಜನ ಸಾಮಾನ್ಯರಂತೆ ಕಾಂಗ್ರೆಸ್ ಅಧ್ಯಕ್ಷ ಸೋಮವಾರ ಮುಂಜಾನೆ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜಿದ್ದಾರೆ.

2 ವರ್ಷಗಳ ಹಿಂದೆ ಪೈಲಟ್ ತನ್ನ ಗೆಳೆಯ ಜಯ್ ಕಿಶನ್ ಗೆ ನೀಡಿದ ಮಾತಿನಂತೆ ಮತ್ತೆ ಹಳ್ಳಿಗೆ ಭೇಟಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ಕೇವಲ ಒಬ್ಬ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂದು ಕಸೇಲಾಗೆ ಭೇಟಿ ನೀಡಿದ್ದವರು ಇದೇ ಗದ್ದೆಯಲ್ಲಿ ರಾತ್ರಿ ಕಳೆದಿದ್ದರು. ಇಂದು ಡಿಸಿಎಂ ಆಗಿರುವ ಸಚಿನ್ ಹಳ್ಳಿಗೆ ಭೇಟಿ ನೀಡುವುದನ್ನು ಮಾತ್ರ ಮರೆತಿಲ್ಲ.

ಸ್ವಲ್ಪವೂ ವಿಶ್ರಾಂತಿ ಪಡೆಯದ ಸಚಿನ್ ಪೈಲಟ್ ಭಾನುವಾರ ಜನರನ್ನು ಭೇಟಿಯಾಗಿ ಮಾತುಕಥೆ ನಡೆಸಿ ಸಂಜೆಯಾಗುತ್ತಿದ್ದಂತೆಯೇ ಗದ್ದೆಗೆ ಮರಳಿದ ಅವರು ಹಳ್ಳಿ ಹೈದನಾಗಿದ್ದಾರೆ. ಈ ಮೂಲಕ ಹಳ್ಳಿ ಜನರು ಹಾಗೂ ಸರ್ಕಾರದ ನಡುವಿನ ಅಂತರ ಕಡಿಮೆಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಎರಡು ವರ್ಷಗಳ ಹಿಂದೆ ಸಚಿನ್ ಪೈಲಟ್ ತನ್ನ ಗೆಳೆಯನ ಮನೆಗೆ ಭೇಟಿ ನೀಡಿ, ಹಳ್ಳಿಯಲ್ಲಿ ಉಳಿದುಕೊಂಡಿದ್ದರು.

Sponsored :


9900071610