ಹೇಗಿರುತ್ತೆ ಗೊತ್ತಾ ಉಪ್ಪಿ 50 ನೇ ಚಿತ್ರ!!

422

ಕೆದರಿದ ತಲೆಕೂದಲ, ಕುರುಚಲು ಗಡ್ಡದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ಬೀಸಿದ ಬಿರುಗಾಳಿ… ಸ್ಯಾಂಡಲ್​​ವುಡ್​​ನ ಟ್ರೆಂಡ್​​ ಸೆಟ್ಟರ್​​ ನಿರ್ದೇಶಕ. ಯಾಕಂದ್ರೆ ಉಪೇಂದ್ರ ನಿರ್ದೇಶನದ ಮೂಲಕ ಕೊಟ್ಟ ತಿರುವು, ಹೊಸತನ ಕನ್ನಡ ಚಿತ್ರರಂಗಲ್ಲಿ ಸಂಚಲನ ಮೂಡಿಸಿತ್ತು. ಹಳೆಯದನ್ನೆಲ್ಲ ಅಕ್ಷರಶ: ಕಿತ್ತು ಬಿಸಾಡಿ ಹೊಚ್ಚ ಹೊಸ ಮಾದರಿಯೊಂದನ್ನು ತೆರೆಗಿತ್ತ ಸಂಶೋಧಕ. ವಾಸ್ತವ ಜಗತ್ತಿನ ಕ್ರೂರತೆಯನ್ನು ಸಿನಿಮಾದ ಮೂಲಕ ಜನರಿಗೆ ತೋರಿಸಿದವರು ಉಪೇಂದ್ರ.. ಉಪೇಂದ್ರ ನಿರ್ದೇಶಕ ನೂ ಹೌದು ಅತ್ಯುತ್ತಮ ನಟನೂ ಹೌದು.

 ಒಂದು ಪ್ರೇಮಕಥೆಯನ್ನೋ, ಫ್ಯಾಮಿಲಿ ಸೆಂಟಿಮೆಂಟನ್ನೋ ಇಟ್ಕೊಂಡು ನಾರ್ಮಾಲ್​​​​ ಸಿನಿಮಾ ನಿರ್ದೇಶನ ಮಾಡೋದಕ್ಕೆ ಉಪ್ಪಿಗೆ ಸಾಧ್ಯವಿಲ್ವೋ ಏನೋ? ಅವರ ನಿರ್ದೇಶನದ ಸಿನಿಮಾಗಳಲ್ಲಿನ ಕಥೆ ಕೂಡ ಪಕ್ಕಾ ಮೈಂಡ್​​ ಗೇಮ್. ಈ ಎಲ್ಲಾ ಕಾರಣಗಳಿಂದ ಉಪ್ಪಿ ಆ್ಯಕ್ಷನ್​ ಕಟ್​ ಹೇಳಿದ ಸಿನಿಮಾ ಅಂದ್ರೆ ಪ್ರೇಕ್ಷಕರ ನಿರೀಕ್ಷೆ ಬೇರೆಯದ್ದೇ ಮಟ್ಟದಲ್ಲಿರುತ್ತೆ. ಉಪ್ಪಿ ತರ್ಲೆ ನನ್​ ಮಗ ಸಿನಿಮಾದ ಮೂಲಕ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಉಪ್ಪಿ ಶ್​ ಮತ್ತು ಓಂ ಮೂಲಕ ಹೊಸ ಇತಿಹಾಸ ಬರೆದ ನಿರ್ದೇಶಕ. ಹೌದು… ಉಪ್ಪಿ ತಾನೇ ನಟಿಸಿ ನಿರ್ದೇಶಿಸಿದ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಯಾವತ್ತೂ ಮರೆಯೋದಕ್ಕೆ ಸಾಧ್ಯ ಇಲ್ಲ. ಉಪೇಂದ್ರ ನಾಯಕನಟನಾಗಿ ಎಂಟ್ರಿ ಕೊಟ್ಟಿದ್ದು ಎ ಸಿನಿಮಾದ ಮೂಲಕ. ಭಾರೀ ಯಶಸ್ಸನ್ನು, ಸ್ಟಾರ್‌ಗಿರಿಯನ್ನು ತಂದುಕೊಟ್ಟ ಸಿನಿಮಾ ಇದು. ಲವ್​ಸ್ಟೋರಿ ಕಥೆಯೊಂದನ್ನು ಉಪ್ಪಿ ತುಂಬಾ ಡಿಫರೆಂಟ್​ ಆಗಿ ಈ ಚಿತ್ರದಲ್ಲಿ ಕೊಟ್ಟಿದ್ರು.

ad

ಎ ಬಳಿಕ ಉಪೇಂದ್ರ ಇಲ್ಲಿ ತನ್ನ ಹೆಸರನ್ನೇ ಟೈಟಲ್ ಮಾಡಿಕೊಂಡು ಉಪೇಂದ್ರ ಚಿತ್ರದ ಮೂಲಕ ತೆರೆಗೆ ಬಂದಿದ್ದರು. ಸೈಕಲಾಜಿಕಲ್ ತ್ರಿಲ್ಲರ್ ಸಿನಿಮಾದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಹಾಗು ಅವನ ಮೂರು ಭಾವನೆಗಳಾ ಅಹಂ, ಸ್ವಾರ್ಥ, ಆಸೆಯ ಸುತ್ತ ಹೆಣೆದ ಕಥೆಯಾಗಿತ್ತು. ನಾನು ಎಂಬ ಪಾತ್ರದ ಉಪ್ಪಿ ಹುಚ್ಚು ಹಿಡಿಸಿದ್ರು. ಉಪೇಂದ್ರ ಸಿನಿಮಾದ ಬಳಿಕ ನಿರ್ದೇಶನದಿಂದ ಸುದೀರ್ಘ 10 ವರ್ಷಗಳ ವಿಶ್ರಾಂತಿ ಪಡೆದ ಉಪೇಂದ್ರ ಸೂಪರ್​ ಸಿನಿಮಾದ ಮೂಲಕ ಮತ್ತೆ ಎಂಟ್ರಿ ಕೊಟ್ಟರು. ರಾಜಕೀಯದ ಕಥೆ ಇದ್ದ ಸೂಪರ್​​ ಕೂಡ ಉಪ್ಪಿಸಂ ಸಿನಿಮಾ. ಉಪೇಂದ್ರ ಸಿನಿಮಾದ ‘ನಾನು’ ನೀನು ಆದ ಕಥೆಯ ಉಪ್ಪಿ 2 ಸೈಕಲಾಜಿಕಲ್​ ಸಿನಿಮಾ. ಹೀಗೆ ಉಪೇಂದ್ರ ನಟಿಸಿ ನಿರ್ದೇಶಿಸಿದ ಸಿನಿಮಾಗಳ ಒಂದಕ್ಕಿಂತ ಒಂದು ಡಿಫರೆಂಟ್​​. ಬಹುಸ: ಕನ್ನಡದಲ್ಲಿ ಉಪ್ಪಿಗೆ ಹೊಳೆಯೋ ಸಬ್ಜೆಕ್ಟ್​ ಮತ್ಯಾರಿಗೂ ಹೊಳೆಯಲ್ಲ. ಇದೀಗ ಹಾಫ್​ ಸೆಂಚುರಿ ಬಾರಿಸುವ ಸಿದ್ದತೆಯಲ್ಲಿದ್ದಾರೆ. ಸಾಮಾನ್ಯವಾಗಿ ಸ್ಟಾರ್​ ನಟನೊಬ್ಬನ 50ನೇ ಸಿನಿಮಾ ಅಂದ್ರೆ ಅದರಲ್ಲಿ ಏನೋ ವಿಶೇಷತೆ ಇದ್ದೇ ಇರುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. ಹೀಗಾಗಿ ಉಪ್ಪಿ ತನ್ನ ನಟನೆಯ 50ನೇ ಚಿತ್ರಕ್ಕೆ ಅವರೇ ಆ್ಯಕ್ಷನ್​ ಕಟ್​ ಹೇಳ್ತಾರೆ ಅನ್ನುವಾಗ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ.

ಉಪ್ಪಿ ಮತ್ತೆ ಸಿನಿಮಾ ಮಾಡ್ತಾರೆ ಅಂದಾಗ ಪ್ರಜಾಕೀಯ ಏನಾಯ್ತು ಅನ್ನುವ ಪ್ರಶ್ನೆ ನಿಮ್ಮಲ್ಲೂ ಹುಟ್ಟಬಹುದು. ಪ್ರಜಾಕೀಯ ಉಪ್ಪಿಯ ಕನಸು. ಸಿನಿಮಾಕ್ಕೆ ಬಂದಿದ್ರು ತನ್ನ ಗುರಿ ಉದ್ದೇಶ ಪ್ರಜಾಕೀಯ ಅನ್ನೋದನ್ನು ಈ ಮೊದಲೇ ಹೇಳಿದ್ದಾರೆ. ಸದ್ಯ ಮತ್ತೆ ಸಿನಿಮಾದಲ್ಲಿ ತೊಡಗಲಿರುವ ಉಪ್ಪಿ ಮುಂದಿನ ಎಂಪಿ ಎಲೆಕ್ಷನ್​​ ವೇಳೆ ಅಖಾಡಕ್ಕೆ ಇಳಿಯಲಿದ್ದಾರೆ. ಅದರ ಒಳಗೆ ಈ ರಾಜಕೀಯ ಮತ್ತು ಪ್ರಜಾಕೀಯದ ಕಾನ್ಸೆಪ್ಟ್​ ಇರೋ 50ನೇ ಸಿನಿಮಾ ರೆಡಿಯಾಗಲಿದೆ. ಅಂದಹಾಗೆ ಕೆಪಿಜೆಪಿಯಿಂದ ಹೊರಬಂದಿರೋ ಉಪ್ಪಿ ರಾಜ್ಯ ವಿಧಾನಸಭಾ ಚುನಾವಣೆಯಿಂದ ದೂರವೇ ಇರಲಿದ್ದಾರೆ. ಯಾವೊಬ್ಬ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ಮಾಡಲ್ಲ. ಉಪ್ಪಿ ಕಂಪ್ಲೀಟ್​ ಆಗಿ 50ನೇ ಪ್ರಾಜೆಕ್ಟ್​​ ಮೇಲೆ ಫೋಕಸ್​ ಆಗಲಿದ್ದಾರೆ. ಒಟ್ನಲ್ಲಿ ಉಪ್ಪಿಯ 50ನೇ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲ ಈಗಾಗ್ಲೇ ಆರಂಭವಾಗಿದೆ.

Sponsored :

Related Articles