ಇಲ್ಲಿ ದಿನದ 24 ಗಂಟೆಯೂ ಮದ್ಯ ಸಿಗುತ್ತೆ !!

1690

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬೂದಿಗೆರೆ ಗ್ರಾಮದಲ್ಲಿ ಆಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ.

 ಗ್ರಾಮದ ವೆಂಕಟೇಶ್ವರ ವೈನ್​​​​ ಸ್ಟೋರ್​ನಲ್ಲಿ ದಿನದ 24 ಗಂಟೆ ಮದ್ಯ ಮಾರಾಟ ಮಾಡುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಬಕಾರಿ ಸುತ್ತೋಲೆಯಂತೆ ವೈನ್​​​ ಸ್ಟೋರ್​ಗಳು ಹಾಗೂ ಬಾರ್​ಗಳು ಬೆಳಿಗ್ಗೆ 10 ರಿಂದ ರಾತ್ರಿ 11 ವರೆಗೆ ಮಾತ್ರ ತೆಗೆಯಲು ಅನುಮತಿಯಿದೆ.

ad

ಆದ್ರೆ ಈ ಸುತ್ತೋಲೆಯ ನಿಯಮಗಳನ್ನ ಗಾಳಿಗೆ ತೂರಿ​ ವೈನ್​​​ ಸ್ಟೋರ್​ ಮಾಲೀಕರು ದಿನದ 24 ಗಂಟೆಗಳಲ್ಲಿಯೂ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಅಧಿಕಾರಿಗಳೇ ನಮ್ಮ ಜೊತೆ ಇದ್ದಾರೆ ಯಾರು ಏನು ಮಾಡಲು ಸಾಧ್ಯವಿಲ್ಲ ಅಂತ ದರ್ಪದ ಮಾತ್ನಾಡ್ತಾರೆ. ಇದ್ರಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ವೈನ್​​ ಸ್ಟೋರ್​ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸ್ತಿದ್ದಾರೆ.

Sponsored :

Related Articles