ಶ್ರೀಮಂತರಿಗೊಂದು ನ್ಯಾಯ! ಬಡವರಿಗೊಂದು ನ್ಯಾಯ! ಇದು ಬಿಬಿಎಂಪಿ ನೀತಿ! ಉಳ್ಳವರ ಅಕ್ರಮಕ್ಕಿಲ್ಲ ಕಡಿವಾಣ!!

359

BBMPಯಲ್ಲಿ ಬಡವರಿಗೊಂದು..ಶ್ರೀಮಂತರಿಗೊಂದು ನ್ಯಾಯ ಎನ್ನುವಂತಾಗಿದೆ. ಬಡವರ ಮನೆ ಆದ್ರೆ ಒಂದೇ ನಿಮಿಷದಲ್ಲಿ ನೆಲಸಮ ಮಾಡೋ ಪಾಲಿಕೆ ಅಧಿಕಾರಿಗಳು ಕೋಟಿ ಕೋಟಿ ಕುಳಗಳು ಅಕ್ರಮವಾಗಿ ಬಿಲ್ಡಿಂಗ್​​ ಕಟ್ಟಿದ್ರೂ ಸುಮ್ಮನಿರ್ತಾರೆ. ರಾಜಕೀಯ ಒತ್ತಡದ ನೆಪ ಹೇಳಿ ಶ್ರೀಮಂತರ ರಕ್ಷಣೆ ಮಾಡ್ತಾರೆ.


ಈ ಪ್ರಕರಣಕ್ಕೆ ಸ್ಪಷ್ಟ ಸಾಕ್ಷಿ ಸ್ಯಾಂಕಿ ರೋಡ್​ನ BDA ಕಚೇರಿ ಬಳಿ ನಿರ್ಮಾಣವಾಗ್ತಿರೋ 7 ಅಂತಸ್ತಿನ ಕಟ್ಟಡ. ಈಗಾಗಲೇ ಕಟ್ಟಡ ಡೆಮಾಲಿಷನ್​​ ಮಾಡಲು ಬಿಬಿಎಂಪಿ ಆದೇಶ ನೀಡಿದೆ. ಆದೇಶ ಹಿಡಿದು ತೆರವಿಗೆ ಹೋಗಿದ್ದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಬರಿಗೈಲಿ ವಾಪಸ್​ ಬಂದಿದ್ದಾರೆ. ಅಶ್ವಿನ್​​​​​ ಪದಚೂರಿ ಒಡೆತನದ ಜಗದೀಶ್​ ಟೂರ್ಸ್​ ಸಂಸ್ಥೆ ಮೂರು ಅಂತಸ್ತಿನ ಕಟ್ಟಡ ಕಟ್ಟಲು ಪೂರ್ವ ವಲಯ ಟೌನ್​ ಪ್ಲಾನಿಂಗ್​​​ನಿಂದ 2016ರಲ್ಲಿ ಅನುಮತಿ ಪಡೆದಿದ್ರು. ಆದ್ರೆ ನಿಯಮ ಮೀರಿ 7 ಅಂತಸ್ತು ನಿರ್ಮಾಣ ಮಾಡಲಾಗ್ತಿತ್ತು.

ad


ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವಸಂತನಗರ ಉಪವಿಭಾಗ ಎಇಇ ದೇವರಾಜ್​​​ ನೋಟಿಸ್​ ನೀಡಿದ್ದರು. ಮಾಲೀಕ ಉತ್ತರ ಕೊಡದೇ ಹೋದಾಗ ಶಿವಾಜಿನಗರ ವಿಭಾಗದ ಪ್ರಭಾರ ಎಕ್ಸಿಕ್ಯೂಟಿವ್​​ ಎಂಜಿನಿಯರ್​​​ ಮರಡಿ ರಂಗಪ್ಪ ಡೆಮಾಲಿಷನ್​ಗೆ ಕೆಎಂಸಿ ಕಾಯ್ದೆಯಡಿ ಅನುಮತಿಯನ್ನೂ ನೀಡಿದ್ರು. ಆದ್ರೆ ತೆರವಿಗೆ ಹೋದಾಗ ರಾಜಕೀಯ ಒತ್ತಡ ಬಂತೆಂದು ಕಟ್ಟಡವನ್ನು ಹಾಗೇ ಬಿಡಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ನಿಮ್ಮದೇ ಆದೇಶ ಜಾರಿ ಮಾಡಲು ವಿಳಂಬ ಏಕೆ. ಬಡವರ ಮನೆ ಒಡೆದಂತೆ ಶ್ರೀಮಂತರ ಅಕ್ರಮ ಕಟ್ಟಡ ಡೆಮಾಲಿಷ್ ಮಾಡಿ ಅನ್ನೋ ಆಗ್ರಹ ಕೇಳಿ ಬರ್ತಿದೆ.

Sponsored :

Related Articles