ರಕ್ಷಿತಾ ಪ್ರೇಮ್ ಜೊತೆ ರಚಿತಾರಾಮ್​ ಸಿನಿಮಾ? ಸ್ಯಾಂಡಲವುಡ್​ನಲ್ಲಿ ಬರ್ತಿರೋ ಹೊಸ ಸುದ್ದಿ ಏನು ಹೇಳ್ತಿದೆ ಗೊತ್ತಾ?!

1143
9900071610

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್​ನ ಡಿಂಪಲ್ ಕ್ವೀನ್ ರಚಿತಾ ರಾಮ್ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಏಕ್ ಲವ್ ಯಾ..’ ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಎಂಬ ಗುಟ್ಟು ರಟ್ಟಾಗಿದೆ. ಈ ಚಿತ್ರದ ಮೂಲಕ ನಟಿ ರಕ್ಷಿತಾ ಸಹೋದರ ಅಭಿಷೇಕ್​ ಸ್ಯಾಂಡಲವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ad

ಈ ಚಿತ್ರಕ್ಕೆ ಕನ್ನಡದ ನಾಯಕಿಯನ್ನೇ ಆಯ್ಕೆ ಮಾಡುವುದಾಗಿ ರಕ್ಷಿತಾ ಈ ಮೊದಲೇ ತಮ್ಮ ಸಾಮಾಜಿಕ ಜಾಲತಾಣ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಯಾರು ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಇದೀಗ, ಮತ್ತೆ ಪೋಸ್ಟ್ ಹಾಕಿರುವ ರಕ್ಷಿತಾ, ನಾಯಕಿ ರಚಿತಾ ರಾಮ್ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.

ರಕ್ಷಿತಾಪ್ರೇಮ್ ಸಹೋದರ ರಾಣಾ ಪಾತ್ರದಲ್ಲಿರುವ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ ‘ಏಕ್ ಲವ್ ಯಾ..’. ಈ  ಸಿನಿಮಾದಲ್ಲಿ ರಚಿತಾ ರಾಮ್ ‘ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋಡಿ ಮಾಡುವ ಭರವಸೆ ಮೂಡಿಸಿದ್ದಾರೆ. ಅಭಿಷೇಕ ಮಾಸ್​ ಲುಕ್​ನಲ್ಲಿ ಮಿಂಚಲಿರುವ ಈ ಚಿತ್ರದಲ್ಲಿ ಡಿಂಪಲ್ ಕ್ವೀನ್​ ರಚಿತಾ ಟಾಮ್ ಬಾಯ್  ಪಾತ್ರದಲ್ಲಿ ಎಂಟ್ರಿಕೊಡಲಿದ್ದಾರೆ.

 

‘ಏಕ್ ಲವ್ ಯಾ’ ಚಿತ್ರವು ಜೋಗಿ ಪ್ರೇಮ್​ರವರ ನಿರ್ದೇಶನ ಹಾಗು ರಕ್ಷಿತಾಪ್ರೇಮು್ ರವರ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು. ಇದೇ ತಿಂಗಳು ಕೊನೆಯಲ್ಲಿ ರಚಿತಾ ‘ಏಕ್ ಲವ್ ಯಾ’ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಸುದೀಪ್-ಶಿವರಾಜ್‌ ಕುಮಾರ್ ನಾಯಕತ್ವದ ‘ದಿ ವಿಲನ್’ ಚಿತ್ರದ ಬಳಿಕ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಏಕಲವ್ಯ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಬಹು ದೊಡ್ಡ ನಿರೀಕ್ಷೆಯನ್ನ ಮೂಡಿಸಿದೆ.

ಅಚ್ಚರಿ ಎಂಬಂತೆ, ಈ ಚಿತ್ರದಲ್ಲಿ ರಚಿತಾ ರಾಮ್ ಮಾತ್ರ ನಾಯಕಿಯಲ್ಲ, ಇನ್ನೊಬ್ಬರು ಸಹ ಇದ್ದಾರೆ ಎಂಬ ಸೀಕ್ರೆಟ್ಟನ್ನೂ ಸಹ ನಿರ್ಮಾಪಕಿ ರಕ್ಷಿತಾ ಬಿಟ್ಟುಕೊಟ್ಟಿದ್ದಾರೆ. ಹಾಗಾದರೆ ಅವರು ಯಾರು ಎಂಬುದನ್ನು ತಿಳಿದುಕೊಳ್ಳಲು ಮತ್ತಷ್ಟು ದಿನ ಕಾಯಬೇಕಾಗಿದೆ.

Sponsored :


9900071610