ಎಲ್ಲ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ! ಸಿದ್ಧು ನೇತೃತ್ವದಲ್ಲಿ ಸ್ಪೀಕರ್​ಗೆ ಕಾಂಗ್ರೆಸ್​ ಮನವಿ!!

313

ಸಾಲು-ಸಾಲು ರಾಜೀನಾಮೆಗಳಿಂದ ಕಂಗೆಟ್ಟಿರುವ ಕಾಂಗ್ರೆಸ್​ ತಮ್ಮ ಪಕ್ಷಕ್ಕೆ ಕೈಕೊಟ್ಟಿರುವ 16 ಶಾಸಕರನ್ನು ಅನರ್ಹಗೊಳಿಸಿ ಎಂದು ಸ್ಪೀಕರ್ ಗೆ ಮನವಿ ಮಾಡಿದೆ.


ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸ್ಪೀಕರ್ ಕಚೇರಿಗೆ ಭೇಟಿ ನೀಡಿದ್ದು, ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ನೀಡಿ ಹೋದ ಶಾಸಕರನ್ನು ಅನರ್ಹ ಮಾಡುವಂತೆ ಮನವಿ ಮಾಡಿದ್ದಾರೆ.

ad


ಪಕ್ಷಾಂತರ ಕಾಯಿದೆ ಸೇರಿದಂತೆ 10 ಶೆಡ್ಯುಲ್ ಪ್ಯಾರಾಗ್ರಾಪ್ 7 ರ ಪ್ರಕಾರ ಸದಸ್ಯತ್ವ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ. ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಸದಸ್ಯತ್ವ ರದ್ದತಿಗೆ ಅವಕಾಶ ಇದೆ. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ.


ಹರಿಯಾಣ,ಗೋವಾ,ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿರುವ ಪ್ರಕರಣವನ್ನು ಉಲ್ಲೇಖಿಸಿರುವ ಕಾಂಗ್ರೆಸ್​ ನಾಯಕರು 16 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ. ಇನ್ನು ಕಾಂಗ್ರೆಸ್ ಶಾಸಕರ ಈ ಮನವಿಗೆ ಸ್ಪೀಕರ್ ಸ್ಪಂದಿಸಿದ್ದು, ಮೊದಲು ಶಾಸಕರನ್ನು ಮತ್ತೊಮ್ಮೆ ಕರೆಸಿ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

Sponsored :

Related Articles