ಸುಪ್ರೀಂ ಆದೇಶ ಹಿನ್ನೆಲೆ ಬೆಂಗಳೂರಿನತ್ತ ಮುಖಮಾಡಿದ ಅತೃಪ್ತ ಶಾಸಕರು! ಏರಪೋರ್ಟ್​ನಲ್ಲಿ ಟೈಟ್​ ಸೆಕ್ಯೂರಿಟಿ!!

381

ಸಂಜೆಯೊಳಗೆ ಸ್ಪೀಕರ್ ಮುಂದೇ ಹಾಜರಾಗುವಂತೆ ಅತೃಪ್ತರಿಗೆ ಸುಪ್ರೀಂ ಕೋರ್ಟ್ ಸೂಚಿಸಿರುವ ಬೆನ್ನಲ್ಲೇ ಅತೃಪ್ತ ಶಾಸಕರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಇನ್ನು ಬೆಂಗಳೂರಿಗೆ ಬರುವ ಅತೃಪ್ತರಿಗೆ ಭದ್ರತೆ ನೀಡಲು ಪೊಲೀಸ್ ಇಲಾಖೆ ಸಜ್ಜಾಗಿದ್ದು, ಬಿಜೆಪಿ ನಾಯಕರು ಅತೃಪ್ತರ ರಕ್ಷಣೆಗೆ ಧಾವಿಸುವ ಸಾಧ್ಯತೆ ಇದೆ.


ಸ್ಪೀಕರ್​ಗೆ ರಾಜೀನಾಮೆಯನ್ನು ಬೇಗ ಅಂಗೀಕರಿಸುವಂತೆ ಕೋರಿ ಅತೃಪ್ತರು ಸುಪ್ರೀಂ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಸಂಜೆಯೊಳಗೆ ರಮೇಶ್ ಕುಮಾರ್ ಎದುರು ಹಾಜರಾಗಲು ಸೂಚಿಸಿದೆ. ಹೀಗಾಗಿ ಮಧ್ಯಾಹ್ನ 3 ಗಂಟೆಯೊಳಗೆ ಅತೃಪ್ತರು ಎಚ್ಎಎಲ್​ ವಿಮಾನ ನಿಲ್ದಾಣ ತಲುಪಲಿದ್ದಾರೆ.

ad


ಮುಂಬೈನಿಂದ ನೇರವಾಗಿ ಎಚ್ಎಎಲ್​ ವಿಮಾನ ನಿಲ್ದಾಣಕ್ಕೆ ಬರುವ ಅತೃಪ್ತರು ಅಲ್ಲಿಂದ ಸ್ಪೀಕರ್ ಕಚೇರಿಗೆ ತೆರಳಲಿದ್ದಾರೆ. ಹೀಗೆ ಸ್ಪೀಕರ್ ಕಚೇರಿಗೆ ತೆರಳುವ ಅತೃಪ್ತರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡುವ ಸಾಧ್ಯತೆ ಇರೋದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪಶ್ಚಿಮವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಭದ್ರತೆ ಹೊಣೆ ನೀಡಲಾಗಿದೆ.

ಇದರೊಂದಿಗೆ ಬಿಜೆಪಿ ನಾಯಕರು ಕೂಡ ಅತೃಪ್ತ ಶಾಸಕರನ್ನು ಕಾಂಗ್ರೆಸ್ಸಿಗರಿಂದ ಕಾಪಾಡಿಕೊಳ್ಳುವ ಉದ್ದೇಶದಿಂದ ಏರಪೋರ್ಟ್​ ಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್​ ಏರಪೋರ್ಟ್ ತಲುಪಿದ್ದು ಭದ್ರತೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Sponsored :

Related Articles