ಪ್ರಾಣ ಉಳಿಸಿದ ವೀರಯೋಧರಿಗೆ ವಿಶೇಷ ವಿದಾಯ! ಚಿಕ್ಕೋಡಿ,ಚಿಕ್ಕಮಗಳೂರಿನ ಮಹಿಳೆಯರು ಏನು ಮಾಡಿದ್ರು ಗೊತ್ತಾ?!

784
9900071610

ಉತ್ತರ ಕರ್ನಾಟಕದಲ್ಲಿ ಸುರಿದ ವಿಪರೀತ ಮಳೆಯಿಂದ ರಾಜ್ಯ ಅರ್ಧಕ್ಕೆ ಅರ್ಧದಷ್ಟು ಭಾಗ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಇನ್ನೂ ಪ್ರವಾಹದಿಂದಾಗಿ ಸಾವಿರಾರು ಜನ ತಮ್ಮ ಮನೆಮಠ ಕಳೆದುಕೊಂಡು ಬೀದಿ ಪಾಲಾಗಿ, ಊಟ ನೀರಿಲ್ಲದೆ ಪರದಾಡಿದರು. ಅಷ್ಟಲ್ಲದೆ ಪ್ರವಾಹದಿಂದಾಗಿ ಸಾವಿರಾರು ಮೂಕಪ್ರಾಣಿಗಳು ಸಾವನ್ನಪ್ಪಿದ್ದವು. ಜೊತೆಗೆ ಪ್ರವಾಹಕ್ಕೆ ಸಿಲುಕಿ ಇದುವರೆಗೂ 45ಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಇನ್ನೂ ನೂರಾರು ಜನರನ್ನು ಈ ರಣಭೀಕರ ಪ್ರವಾಹದಿಂದ ರಕ್ಷಣೆ ಮಾಡಿದ ಸೈನಿಕರಿಗೆ ಚಿಕ್ಕೋಡಿ ಜನತೆ ವಿಶೇಷ ರೀತಿಯಲ್ಲಿ ಬೀಳ್ಕೋಡುಗೆ ನೀಡಿದ್ದಾರೆ.

ad

ಹೌದು ರಾಜ್ಯದಲ್ಲಿ ನಡೆದ ರಣಭೀಕರ ಮಳೆಯಿಂದ ಲಕ್ಷಾಂತರ ಮಂದಿ ತತ್ತರಿಸಿ ಹೋಗಿದ್ದರು. ಅಲ್ಲದೇ ಸಾವಿರಾರು ಮಂದಿ ಪ್ರವಾಹದಲ್ಲಿ ಸಿಲುಕಿದ್ದರು , ಇನ್ನೂ ಈ ಮಂದಿಯನ್ನು ಪ್ರವಾಹದಿಂದ ಹಗಲು ರಾತ್ರಿ ಎನ್ನದೆ ಪಾರು ಮಾಡಿ ಸುರಕ್ಷಿತ ಸ್ಥಳಕ್ಕೆ ತಲುಪಿಸಲು ನಮ್ಮ ಯೋಧರು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಹೆಗಲ ಮೇಲೆ ಹೊತ್ತುಕೊಂಡು, ವೃದ್ಧರು, ಗರ್ಭಿಣಿಯರು , ಬಾಣಂತಿಯರು, ಮೂರುನಾಲ್ಕು ತಿಂಗಳ ಮಗು, ಮೂಕಪ್ರಾಣಿಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸುವಲ್ಲಿ ನಮ್ಮ ಯೋಧರು ಅವರ ಜೀವವನ್ನು ಸಹ ಲೆಕ್ಕಿಸದೆ ಪ್ರಾಣವನ್ನೇ ಪಣಕ್ಕಿಟ್ಟು ಸಾವಿರಾರು ಜನರನ್ನು ರಕ್ಷಣೆ ಮಾಡಿದ್ದಾರೆ.

ಇಂತಹ ಯೋಧರಿಗೆ ಅಭೂತ ಪೂರ್ವ ಧನ್ಯವಾದ ಸಲ್ಲಿಸುವ ಮೂಲಕ ಚಿಕ್ಕಮಗಳೂರು ಹಾಗೂ  ಚಿಕ್ಕೋಡಿ ಜನತೆ ವಿಶೇಷ ರೀತಿಯಲ್ಲಿ ಬೀಳ್ಕೊಡುಗೆ ನೀಡಿದ್ದಾರೆ. ಹೌದು ಜೀವ ಹೋಗುವ ಸಂದರ್ಭದಲ್ಲಿ ದೇವರ ಪ್ರತಿರೂಪದಂತೆ ಬಂದು ಯೋಧರು ತಮ್ಮ ಪ್ರಾಣ ಹೊತ್ತೆ ಇಟ್ಟು ನೂರಾರು ಜನರನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ ಚಿಕ್ಕಮಗಳೂರಿನಲ್ಲಿ ಮಳೆ ಪ್ರಮಾಣ ತಗ್ಗಿರೋದರಿಂದ ಸೈನಿಕರು ವಾಪಸ್ಸಾಗುತ್ತಿದ್ದಾರೆ. ಚಿಕ್ಕೋಡಿಯಿಂದಲೂ ಸೈನಿಕರು ಹಿಂತಿರುಗುತ್ತಿದ್ದಾರೆ. ಈ ವೇಳೆ ಪ್ರತಿಯೊಬ್ಬ ಸೈನಿಕರಿಗೂ ಚಿಕ್ಕಮಗಳೂರು ಹಾಗೂ  ಚಿಕ್ಕೋಡಿ ಗ್ರಾಮಸ್ಥರು ಭಾರತ್ ಮಾತಾಕೀ ಜೈ ಎಂಬ ಘೋಷಣೆ ಕೂಗುತ್ತಾ ಗೌರವಿಸಿ, ಅಲ್ಲಿನ ಹೆಂಗಸರು ಯೋಧರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆದಿದ್ದಾರೆ. ತಾವು ತಂದಿದ್ದ ಹಣ್ಣು, ಬಿಸ್ಕೆಟ್, ಪಾನೀಯಗಳನ್ನು ಜನರಿಗೆ ನೀಡಿ ಪ್ರಾಣ ರಕ್ಷಿಸಿದ ಯೋಧರಿಗೆ ತಮ್ಮ ಅಣ್ಣನ ಸ್ಥಾನವನ್ನು ಪ್ರೀತಿಯಿಂದ ನೀಡುವ ಮೂಲಕ ಕಣ್ಣೀರು ಹಾಕಿ ಭಾವುಕರಾಗಿ  ಬೀಳ್ಕೊಡುಗೆ ನೀಡಿದ್ದಾರೆ.

 

 

Sponsored :


9900071610