ನೂತನ ಸಚಿವರಿಗೆ ಮುಖ್ಯಮಂತ್ರಿಗಳು ನೀಡಿದ ಮೊದಲ ಅಸೈನ್ಮೆಂಟ್ ಏನು ಗೊತ್ತಾ ? ಇಂದು ಫೀಲ್ಡಿಗಿಳಿಯಲಿದ್ದಾರೆ ಸಚಿವರು !!

317

ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗಿರದ ಕಾರಣ, ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಜನರು ನಿರಾಶ್ರಿತರಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು, ಸಂತ್ರಸ್ಥರ ಗೋಳು ಕೇಳಲು ಅವರ ಕ್ಷೇತ್ರದಲ್ಲಿ ಒಬ್ಬ ಜನಪ್ರತಿನಿಧಿಯು ಇರಲಿಲ್ಲ.

ನಿನ್ನೆ ಬಿಜೆಪಿ ಸಚಿವ ಸಂಪುಟ ರಚನೆಯಾಗಿದೆ. ಇದರ ಬೆನ್ನಲ್ಲೇ ನೆರೆ ಸಂತ್ರಸ್ತರ ನೆರವಿಗೆ ನಿಂತಿರುವ ರಾಜ್ಯದ ಬಿಜೆಪಿ ನೂತನ ಸಚಿವರು ಇಂದಿನಿಂದ 2ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನೂತನ ಸಚಿವರಿಗೆ ಇಂತಿಷ್ಟು ಜಿಲ್ಲೆಗಳ ಹೊಣೆ ನೀಡಿದ್ದರು.

ad

ಇಂದು ನೂತನ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಲಿದ್ದಾರೆ. ಗದಗ ಮತ್ತು ಕೊಪ್ಪಳ ಜಿಲ್ಲೆಯ ಜವಾಬ್ದಾರಿಯನ್ನು ಸಿ.ಸಿ ಪಾಟೀಲ್​ಗೆ ನೀಡಿದ್ರೆ. ಬಳ್ಳಾರಿ, ರಾಯಚೂರು ಜಿಲ್ಲೆಗಳನ್ನ ಶ್ರೀರಾಮುಲುಗೆ ನೀಡಲಾಗಿದೆ.

ಕೊಡಗು-ಸುರೇಶ್​ ಕುಮಾರ್​​, ಚಾಮರಾಜನಗರ- ಸೋಮಣ್ಣ, ದಕ್ಷಣ ಕನ್ನಡ, ಉಡುಪಿಯ ಹೊಣೆಯನ್ನು ಕೋಟಾ ಶ್ರಿನಿವಾಸ್​ ಪೂಜಾರಿಗೆ ನೀಡಲಾಗಿದೆ. ಬೆಳಗಾವಿಗೆ ಲಕ್ಷ್ಮಣ್​ ಸವದಿ, ಚಿಕ್ಕೋಡಿಗೆ ಶಶಿಕಲಾ ಜೊಲ್ಲೆ, ಬಾಗಲಕೋಟೆಗೆ ಈಶ್ವರಪ್ಪ, ವಿಜಯಪುರಕ್ಕೆ ಗೋವಿಂದ್​ ಕಾರಜೋಳ, ಹಾವೇರಿ – ಬಸವರಾಜ್ ಬೊಮ್ಮಾಯಿ, ಧಾರವಾಡ, ಉತ್ತರ ಕನ್ನಡ – ಜಗದೀಶ್ ಶೆಟ್ಟರ್, ಯಾದಗಿರಿಗೆ ಶ್ರೀರಾಮುಲು, ಮತ್ತು ಚಿಕ್ಕಮಗಳೂರುಗೆ ಪ್ರಭು ಚೌಹಾಣ್, ಹಾಸನದ ಜವಾಬ್ದಾರಿಯನ್ನು ಸಿಟಿ ರವಿಗೆ ನೀಡಲಾಗಿದೆ.

Sponsored :

Related Articles