ಇಷ್ಟಕ್ಕೂ ಆತ ಯಮನಾಗಿದ್ದು ಯಾಕೆ ಗೊತ್ತಾ?- ಅಲ್ಲಿದೆ ಒಂದು ಕರುಣಾಜನಕ ಕತೆ!

785

ಆತ ಮೂಲತಃ ರಂಗಭೂಮಿ ಕಲಾವಿದ .ಆತನ ಜೀವನದಲ್ಲಿ ನಡೆದ ಆ ಒಂದು ಘಟನೆ ಆತನ ಜೀವನದ ಗುರಿಯನ್ನೇ ಬದಲಾಯಿಸಿಬಿಡ್ತು. ಕಲಿಯುಗ ಯಮನಾಗಿ ಬದಲಾದವನ ಕಥೆ ಮತ್ತಷ್ಟು ಇಂಟರೆಸ್ಟಿಂಗ್ ಆಗಿದೆ. ಏನು ಆತನ ಸ್ಟೋರಿ ಅಂದ್ರ ನೀವೇ ನೋಡಿ.
ಯಸ್ .ಹೀಗೆ ರಸ್ತೆಯಲ್ಲಿ ರಾಜಾರೋಷವಾಗಿ ಯಮನ ವೇಷ ಧರಿಸಿ ,ಹೌಹಾರುತ್ತ ಸಾರ್ವಜಿಕರಿಗೆ ಸಂಚಾರಿ ನಿಯಮಗಳ ಬಗ್ಗೆ ವಿವರಣೆ ನೀಡ್ತಾ ಇರೋರ ಹೆಸರು ವೀರೇಶ ಮುತ್ತಿನಮಠ. ಎಲ್ಲೆ ಸಂಚಾರಿ ಪೊಲೀಸರಿಂದ ಜಾಗೃತಿ ಅಭಿಯಾನ ನಡೆದ್ರು ಕೂಡ ,ಈ ಯಮರೂಪಿ ಕಲಾವಿದ ಚಾಚುತಪ್ಪದೆ ತನ್ನ ಕೆಲಸವನ್ನ ಪೊಲೀಸ್ ಸಂಚಾರಿ ನಿಯಮಗಳನ್ನ ತನ್ನದೇ ಶೈಲಿಯಲ್ಲಿ ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಿಕೊಂಡು ಬರ್ತಾ ಇದ್ದಾರೆ . ಇವರ ಸಮಾಜಿಕ ಕಾರ್ಯ ವೈಖರಿಗೆ ಬೆಂಗಳೂರು ಪೊಲೀಸ್ ಕಮೀಷನರ್ ಟಿ.ಸುನೀಲ್ ಕುಮಾರ್ ಅವರು ಕೂಡ ಇವರ ಪ್ರತಿಭೆಗೆ ಮೆಚ್ಚಿ 10ಸಾವಿರ ನಗದನ್ನ ನೀಡಿ ಗೌರವಿಸಿದ್ದಾರೆ.

ad

ಇನ್ನು ಇವರು ಈ ಪಾತ್ರ ಮಾಡೋದಕ್ಕೆ ಯಾಕೆ ಒಪ್ಪಿಕೊಂಡ್ರು . ವೃತ್ತಿಯಲ್ಲಿ ರಂಗಭೂಮಿ ಕಲಾವಿದರಾಗಿ ನಟ ಹಾಗೂ ನಿರ್ದೇಶಕರಾದ್ರೂ ಕೂಡ ಇವರು ಯಮನ ರೂಪ ಧರಿಸಿ ಸಾಮಾಜಿಕ ಕಳಕಳಿಯೊಂದಿಗೆ ಸಾರ್ವಜನಿಕರಿಗೆ ಈ ರೀತಿ ಸಂಚಾರಿ ತಿಳುವಳಿಕೆ ನೀಡೋದಕ್ಕೆ ಒಂದು ಬಲವಾದ ಕಾರಣ ಇದೆ. ಅದೇನಪ್ಪ ಅಂದ್ರೆ ಕಳೆದ ವರ್ಷ ಜೂನ್ ತಿಂಗಳಿನಲ್ಲಿ ವೀರೇಶ್ ಮುತ್ತಿನಮಠ ಅವರ ಅಣ್ಣ ಮರಿಸ್ವಾಮಿ ಮುತ್ತಿನಮಠ ಅವರು ಅಪಘಾತಕ್ಕೀಡಾಗ್ತಾರೆ. ಅವರ ತಲೆಗೆ ಬಲವಾದ ಪಟ್ಟು ಬಿದ್ದು ಹಲವು ಆಸ್ಪತ್ರೆಗಳನ್ನ ಸುತ್ತಾಡ್ತಾರೆ .ಆದ್ರೂ ಕೂಡ ಅವರನ್ನ ಉಳಿಸಿಕೊಳ್ಳೋದಕ್ಕೆ ಆಗೋದಿಲ್ಲ. ಏನಾದ್ರು ಅಂದು ಅವರು ಹೆಲ್ಮೆಟ್ ಧರಿಸಿದ್ರೆ ನಿಜಕ್ಕೂ ಅವರು ಇಂದು ನಮ್ಮೊಂದಿಗೆ ಇರ್ತಾ ಇದ್ರು ಅನ್ನೋದು ವಿರೇಶ್ ಮುತ್ತಿನಮಠ ಅವರ ಅಳಲು.
ಹೀಗೆ ತಮಗಾದ ದುರ್ಘಟನೆ ಮತ್ಯಾರಿಗೂ ಆಗದಿರಲಿ ಅನ್ನೋ ನಿಟ್ಟಿನಲ್ಲಿ ಈಗ ಎಲ್ಲೆ ಪೊಲೀಸ್ ಸಂಚಾರಿ ಜಾಗೃತ ಅಭಿಯಾನ ನಡೆದ್ರು ಕೂಡ ಅಲ್ಲಿ ಯಮನ ಪಾತ್ರಧಾರಿ ವೀರೇಶ್ ಮುತ್ತಿನ ಮಠ ಅವರ ವೇಷಾಭೂಷಣ, ನಟನೆ, ಎಲ್ಲವೂ ಕೂಡ ಸಾರ್ವಜಿಕರನ್ನ ಆಕರ್ಷಿಸುತ್ತವೆ. ವಿರೇಶ ಅವರ ಕನ್ನಡ ಹಿಂದಿ,ಇಂಗ್ಲೀಷ್ ಭಾಷೆಯ ಡೈಲಾಗ್ಸ್ ಕೇಳೋದಕ್ಕೆ ಹೇಗಿರುತ್ತೆ ಅನ್ನೋದನ್ನ ನೀವು ನೋಡಿ
ಇನ್ನು ವಿರೇಶ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಕೂಡ ಅವರ ಕಾರ್ಯಕ್ಕೆ ಮೆಚ್ಚಿ ಬಹುಮಾನ ಕೂಡ ನೀಡಿದೆ. ಅವರ ಸ್ನೇಹಿತರು, ಹಿರಿಯರ ಬೆಂಬಲ ಇದೆ. ಇದೇ ರೀತಿ ಸಮಾಜಮುಖಿ ಕಾರ್ಯಗಳನ್ನ ಮಾಡುವ ಹಂಬಲವಿದೆ ಎನ್ನುತ್ತಾರೆ ವಿರೇಶ ಮುತ್ತಿನಮಠ.

Sponsored :

Related Articles