ಚಿಕಿತ್ಸೆಗಾಗಿ ಮೂರು ಗಂಟೆ ಅಲೆದಾಡಿದ ಗರ್ಭಿಣಿ.

294
9900071610

ವೈದ್ಯರ ಮುಷ್ಕರ ಆರಂಭವಾದ ಕೆಲವೇ ಗಂಟೆಗಳಲ್ಲಿ ಗರ್ಭಿಣಿಯೊಬ್ಬಳು ಚಿಕಿತ್ಸೆ ಸಿಗದೇ ಪರದಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್ಲ ನಗರದ ಘಟನೆ ನಡೆದಿದ್ದು, ಚಿಕ್ಕಕೊಡಗಲಿ ತಾಂಡಾದ ಚೈತ್ರಾ ಚಿಕಿತ್ಸೆ ಸಿಗದೇ ಪರದಾಡಿದ ಮಹಿಳೆ.

ad

ಮೊದಲೆರಡು ಹೆರಿಗೆಯಲ್ಲಿ ಮಗು ಕಳೆದುಕೊಂಡಿರುವ ಚೈತ್ರಾ ಮೂರನೇ ಹೆರಿಗೆಯ ನೋವು ಕಾಣಿಸಿಕೊಂಡ ಬಳಿಕ ತಾವು ಯಾವಾಗಲೂ ಚಿಕಿತ್ಸೆ ಮಾಡಿಸಿಕೊಂಡಿದ್ದ ಇಳಕಲ್ ಆಸ್ಪತ್ರೆಗೆ ತೆರಳಿದ್ದರು. ಆದರೇ ಅಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಚ್ಚಿದ್ದರಿಂದ ಬೆಳಗ್ಗೆ 7.30 ರಿಂದ 10 ಗಂಟೆಯ ತನಕ 108 ವಾಹನದಲ್ಲೇ ಚಿಕಿತ್ಸೆಗಾಗಿ ಹಲವೆಡೆ ಓಡಾಡಿದ್ದಾರೆ. ಆದರೇ ಯಾರು ಚಿಕಿತ್ಸೆಗೆ ಸ್ಪಂದಿಸುವ ಸೌಜನ್ಯ ತೋರಿಲ್ಲ.

ಕೊನೆಗೆ ಗರ್ಭಿಣಿಯ ಪರದಾಟ ನೋಡಿ ಮಾನವೀಯತೆ ಮೆರೆದ ಬಾಗಲಕೋಟೆ ನಗರದ ಶ್ರೀ ಹಾನಗಲ್ ಕುಮಾರೇಶ್ವರ ಖಾಸಗಿ ಆಸ್ಪತ್ರೆ ವೈದ್ಯ ಡಾ.ಮನೋಹರ ಟಂಕಸಾಲಿಯವರು ಮಹಿಳೆಗೆ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಚೈತ್ರಾ ಗಂಡುಮಗುವಿಗೆ ಜನ್ಮನೀಡಿದ್ದು, ತಾಯಿ ಮಗು ಸುರಕ್ಷಿತವಾಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರಿಗೆ ಚೈತ್ರಾ ಕುಟುಂಬಸ್ಥರು ಧನ್ಯವಾದ ಅರ್ಪಿಸಿದ್ದು, ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ವೈದ್ಯರ ಹೆಸರನ್ನು ಮಗುವಿಗೆ ಇಡಲು ಚೈತ್ರಾ ಕುಟುಂಬಸ್ಥರು ನಿರ್ಧರಿಸಿದ್ದಾರೆ.

 

Sponsored :


9900071610