ಸರ್ಕಾರಿ ರಜೆ ದಿನ ಇಲ್ಲಿ ವೈದ್ಯರು ಕೆಲಸ ಮಾಡೋಲ್ಲ- ಎಲ್ಲಿದೆ ಗೊತ್ತಾ ಈ ಆಸ್ಪತ್ರೆ!

655
9900071610

 

ad

ಮಹಾಲಯ ಅಮವಾಸ್ಯೆ ದಿನ ಒಳ್ಳೆಯ ಕೆಲಸ ಮಾಡೋದಿಕ್ಕೆ ನಿರಾಕರಿಸೋ ಜನರನ್ನು ನೋಡಿರ್ತಿರಾ. ಆದರೇ ವೈದ್ಯರು ಮಹಾಲಸ ಅಮಾವಾಸ್ಯೆ ನೆಪ ಇಟ್ಟುಕೊಂಡು ರೋಗಿಗಳ ಚಿಕಿತ್ಸೆಗೆ ನಿರಾಕರಿಸೋವಂತ ಅಮಾನವೀಯ ಘಟನೆನಾ ಎಲ್ಲಾದ್ರೂ ನೋಡಿದ್ದೀರಾ? ಇಂತಹದೊಂದು ಘಟನೆಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ
ಕುಶಾಲನಗರದಲ್ಲಿ ನಡೆದಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಾಲಯ ಅಮವಾಸ್ಯೆಯಂದು ಧಾಳವ್ವ ಎಂಬ ಮಹಿಳೆ
ಗ್ಯಾಂಗ್ರಿನ್ ರೋಗಿ ಚಿಕಿತ್ಸೆಗೆಂದು ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಇಲ್ಲಿನ ದಾದಿಯೊಬ್ಬರು ರೋಗಿಗೆ ಇಂಜೆಕ್ಷನ್ ನೀಡಿದ್ದಾರೆ. ಆದರೆ ಇದಕ್ಕೆ ತೀವ್ರವಾಗಿ ವಿರೋಧಿಸಿರುವ ವೈದ್ಯ ಡಾ ವಸುಂಧರ, ಇಂದು ಸರ್ಕಾರಿ ರಜೆಯಾಗಿದ್ದು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಸೇವೆ ನೀಡಬೇಕುಎಂದು ದಾದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಗಿ ಧಾಳವ್ವ ಅನಾಥ ಮಹಿಳೆಯಾಗಿದ್ದಾರೆ. ಈ ಹಿನ್ನೆಯಲ್ಲಿ ಸ್ಥಳೀಯರು ಆಸ್ಪತ್ರೆಗೆ ತೆರಳಿ ವೈದ್ಯರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಾ ವಸುಂಧರ, ಇಂದು ಸರ್ಕಾರಿ ರಜೆ ಯಾಗಿದ್ದು ಬೇಕಿದ್ದಲ್ಲಿ ಆಸ್ಪತ್ರೆ ಹೊರಗೆ ಬೋರ್ಡ್​ ನೋಡಿಕೊಳ್ಳಿ ಎಂದು ಧಿಮಾಕಿನ ಉತ್ತರ ನೀಡಿದ್ದಾರೆ. ವೈದ್ಯರ ಈ ವರ್ತನೆ ವ್ಯಾಪಕ ಖಂಡನೆಗೆ ಕಾರಣವಾಗಿದೆ. ಅಲ್ಲದೇ ಮಹಾಲಸ ಅಮಾವಾಸ್ಯೆ ದಿನ ರಜೆ ಇದ್ದ ಮಾತ್ರಕ್ಕೆ ರೋಗಿಗಳ ಜೀವಕ್ಕೂ ಬೆಲೆ ನೀಡದಂತೆ ವೈದ್ಯರು ವರ್ತಿಸಿರೋದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ

Sponsored :


9900071610