ಚಿರತೆಯನ್ನೇ ಬೇಟೆಯಾಡಿದ ನಾಯಿಗಳು! ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯಿತು ಅಚ್ಚರಿಯ ಘಟನೆ!!

2766

ಚಿರತೆ ಪ್ರಾಣಿ ಹಾಗೂ ಮನುಷ್ಯರ ಮೇಲೆ ದಾಳಿ ಮಾಡೋದು ಕಾಮನ್. ಆದರೆ ಇಲ್ಲಿ ಗುಂಪಾಗಿ ದಾಳಿ ಮಾಡಿದ ನಾಯಿಗಳ ಅಟ್ಟಹಾಸಕ್ಕೆ ಚಿರತೆಯೊಂದು ಬಲಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ad

ಚಾಮರಾಜನಗರ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಸುಲ್ತಾನ್​​​ ಬತ್ತೇರಿ ಎಂಬಲ್ಲಿ ಕಾಣಿಸಿಕೊಂಡ ಚಿರತೆಯನ್ನು ನಾಯಿಗಳು ಕಚ್ಚಿ ಎಳೆದಾಡಿ ಸಾಯಿಸಿವೆ.ಇತ್ತೀಚಿಗೆ ಸುಲ್ತಾನ್ ಬತ್ತೇರಿ ಭಾಗದಲ್ಲಿ ಚಿರತೆ ಕಾಟ ಅತಿಯಾಗಿದ್ದು, ಎರಡು ಸಾಕು ನಾಯಿಗಳನ್ನು ಚಿರತೆ ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

ಈ ಘಟನೆ ಬಳಿಕ ಕೇರಳಕ್ಕೆ ಸೇರಿದ್ದ ಅರಣ್ಯ ಪ್ರದೇಶದಲ್ಲಿ ಏಳಕ್ಕೂ ಹೆಚ್ಚು ನಾಯಿಗಳು ಚಿರತೆ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಚಿರತೆಗೆ ಚೇತರಿಸಿಕೊಳ್ಳುವ ಅವಕಾಶವನ್ನು ನೀಡದೇ ಕಚ್ಚಿ ಎಳೆದಾಡಿ ಕೊಂದು ಹಾಕಿದೆ. ಸ್ಥಳಕ್ಕೆ ಕೇರಳ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ನಾಯಿಗಳ ಏಕಾಏಕಿ ದಾಳಿಗೆ ಚಿರತೆ ಸಾವು

ನಾಯಿಗಳ ಏಕಾಏಕಿ ದಾಳಿಗೆ ಚಿರತೆ ಸಾವು

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಜೂನ್ 13, 2019

Sponsored :

Related Articles