ಆಪರೇಷನ್ ಬಳಿಕ ಶಿವಣ್ಣನ ಪ್ಲ್ಯಾನ್ ಏನು! ಲೈವ್ ಬರ್ತಿನಿ ಅಂದಿದ್ಯಾಕೆ ಸೆಂಚುರಿ ಸ್ಟಾರ್?!

459

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಡಾ ಶಿವರಾಜ್ ಕುಮಾರ್ ಹಲವು ದಿನಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಈ ವಿಚಾರವಾಗಿ ಶಸ್ತ್ರ ಚಿಕಿತ್ಸೆಗೆಂದು ಡಾ ಶಿವರಾಜ್ ಕುಮಾರ್ ಲಂಡನ್ ತೆರಳಿದ್ದು, ಇದೀಗಾ ಶಸ್ತ್ರ ಚಿಕಿತ್ಸೆ ಮುಗಿದಿದ್ದು ಅಭಿಮಾನಿಗಳಿಗೆ ಸಂದೇಶವನ್ನು ನೀಡಲು ಇಂದು ಮಧ್ಯರಾತ್ರಿ 12 ಗಂಟೆಗೆ ತಮ್ಮ ಆಫಿಷಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬರುವುದಾಗಿ ತಿಳಿಸಿದ್ದಾರೆ.

ad

ಹೌದು ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಬಲ ಭುಜದ ಶಸ್ತ್ರ ಚಿಕಿತ್ಸೆಗೆಂದು ಕೆಲವು ದಿನಗಳ ಹಿಂದೆ ಲಂಡನ್ ಗೆ ತೆರಳಿದ್ದರು. ಈ ಹಿಂದೆ ಎಸ್. ಎಂ. ಕೃಷ್ಣ ಹಾಗೂ ಸಚಿನ್ ತೆಂಡೂಲ್ಕರ್​ ರವರಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದ ಅದೇ ಆಸ್ಪತ್ರೆಯಲ್ಲಿ ಅದೇ ವೈದ್ಯರು ಶಿವಣ್ಣನವರಿಗೂ ಆಪರೇಷನ್ ನಡೆಸಿದ್ದಾರೆ. ಅಲ್ಲದೆ ನಿನ್ನೆ ಅಷ್ಟೇ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆ ನಡೆದಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ಇನ್ನೂ ನಾಳೆ ಶಿವರಾಜ್ ಕುಮಾರ್ ಹುಟ್ಟುಹಬ್ಬವಿದ್ದು, ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಾಗದಿದ್ದರಿಂದ ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳಲಿರುವ ಶಿವಣ್ಣ ಸದ್ಯ ನಾಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಲಿದ್ದು, ಬಳಿಕ ಜುಲೈ 17ರಂದು ಪೋಸ್ಟ್ ಸರ್ಜಾರಿ ಫಾಲೋ ಅಪ್ ಮಾಡಲಾಗುತ್ತದೆ‌. ಇನ್ನು, 18ನೇ ತಾರೀಖು ದುಬೈಗೆ ಪ್ರಯಾಣ ಮಾಡಲಿರೋ ಶಿವಣ್ಣ ಜುಲೈ 22ರವರೆಗೆ ಅಲ್ಲಿಯೇ ಹಾಲಿಡೇ ಎಂಜಾಯ್ ಮಾಡಲಿದ್ದಾರೆ. ದುಬೈ ರೌಂಡ್ಸ್ ಬಳಿಕ 23 ರಂದು ಬೆಂಗಳೂರಿಗೆ ಶಿವರಾಜ್ ಕುಮಾರ್ ರಿರ್ಟನ್ ಆಗಲಿದ್ದಾರೆ.

ಜೊತೆಗೆ ತಮ್ಮ ಟ್ವೀಟರ್ ಖಾತೆಯಲ್ಲಿ ನಿಮ್ಮೆಲರ ಪ್ರೀತಿ ಹಾರೈಕೆ ಆಪರೇಷನ್ successful and ನಿಮ್ಮ ಶಿವಣ್ಣ safe.ನಾನಿನ್ನು ಲಂಡನ್ನಲ್ಲೆ ಇರುವ ಕಾರಣ ಈ ಹುಟ್ಟುಹಬಕ್ಕೆ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುವೆ. ಆದಷ್ಟು ಬೇಗ ವಾಪಸ್ ಬರುವೆ, ಹಾಗೆ ಇಂದು ಮಧ್ಯರಾತ್ರಿ 12ಕ್ಕೆ ನನ್ನ ಈ official facebook pageನಲ್ಲಿ LIVE ಬರುವೆ ಎಂದು ಬರೆದುಕೊಂಡಿದ್ದಾರೆ

Sponsored :

Related Articles