ಬ್ಯಾಟ್​ ಬದಲು ಪೇಟಿಂಗ್​ ಬ್ರಷ್​​ ಹಿಡಿಯುವ ಕನಸು! ಕ್ರಿಕೆಟರ್​​ ಧೋನಿ ಇನ್ಮುಂದೆ ಪೇಂಟರ್​​!!

137

ಎಂತಹ ಒಳ್ಳೆಯ ಕ್ರಿಕೆಟರ್​ ಆದ್ರೂ ಒಂದಷ್ಟು ವರ್ಷಗಳ ಬಳಿಕ ನಿವೃತ್ತಿ ಪಡೆಯೋದು ಅನಿವಾರ್ಯ. ದೈಹಿಕ ಸಾಮರ್ಥ್ಯ ಆಧಾರದ ಮೇಲಾದ್ರೂ ನಿವೃತ್ತಿ ಪಡೆಯಬೇಕು. ಇದೀಗ ಈ ಸಾಲಿನಲ್ಲಿ ನಿಂತಿರೋ ಕ್ರಿಕೆಟರ್​​ ಮಹೇಂದ್ರ ಸಿಂಗ್ ಧೋನಿ.

ad

ಧೋನಿ ಕ್ರಿಕೆಟ್ ಮೈದಾನಕ್ಕೆ ಇಳಿದ್ರೆ ಸಾಕು.. ಸಿಕ್ಸ್, ಫೋರ್ ಪಕ್ಕಾ.. ಅವರ ಬ್ಯಾಟಿಂಗ್ ಶೈಲಿಗೆ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣೀತಾರೆ.. ಆದ್ರೆ ಮಹೇಂದ್ರಸಿಂಗ್ ಧೋನಿ ಕ್ರಿಕೆಟ್ ಆಟದಿಂದ ನಿವೃತ್ತಿ ಹೊಂದಿದ ಮೇಲೆ ಏನ್ ಮಾಡ್ತಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೇ ಇದೆ.

ಆದ್ರೀಗ ಅಂತ ಕುತೂಹಲಕ್ಕೆ ಧೋನಿ ತೆರೆ ಎಳೆದಿದ್ದಾರೆ.. ನಿವೃತ್ತಿ ಬಳಿಕ ಧೋನಿ, ಪೇಂಟರ್ ಆಗುವ ಕನಸು ಕಂಡಿದ್ದಾರೆ. ಇನ್ನು, ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳುಗಳಿಂದ ಹರಿದಾಡುತ್ತಿತ್ತು. ಈ ನಡುವೆ ಅವರು ತಾವು ನಿವೃತ್ತಿ ಬಳಿಕ ಚಿತ್ರಕಾರನಾಗುವುದಾಗಿ ತಿಳಿಸಿದ್ದಾರೆ. ಬಾಲ್ಯದಿಂದಲೂ ನನಗೆ ಚಿತ್ರಕಾರನಾಗಬೇಕು ಎನ್ನುವ ಆಸೆಯಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಿವೃತ್ತಿ ಬಳಿಕ ಪೇಟಂರ್ ಆಗುವ ಕನಸು ಕಂಡ ಧೋನಿ

ನಿವೃತ್ತಿ ಬಳಿಕ ಪೇಟಂರ್ ಆಗುವ ಕನಸು ಕಂಡ ಧೋನಿ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 20, 2019

Sponsored :

Related Articles