ಬೆಳ್ಳಂಬೆಳಗ್ಗೆ ಎಸಿಬಿ ಭರ್ಜರಿ ಬೇಟೆ- ಕೆಐಡಿಬಿಯ ದೊಡ್ಡ ತಿಮಿಂಗಲವನ್ನೇ ಭೇಟೆಯಾಡಿದ ಅಧಿಕಾರಿಗಳು- ದಾಳಿ ವೇಳೆ ಚೀಲಗಟ್ಟಲೇ ದುಡ್ಡು ಕಂಡು ಬೆಚ್ಚಿಬಿದ್ದ ಎಸಿಬಿ!

2806
9900071610

ad

KIADB ಚೀಫ್​​​ ಎಂಜಿನಿಯರ್​​​​​ ಟಿ.ಆರ್. ಸ್ವಾಮಿ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಂಗಳೂರಿನ ಮಂತ್ರಿಗ್ರಿನ್ಸ್​ ಅಪಾರ್ಟಮೆಂಟ್​ನಲ್ಲಿ ಸ್ವಾಮಿ ಆಸ್ತಿ-ಪಾಸ್ತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದಾಳಿ ವೇಳೆ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ, ಬೆಲೆಬಾಳುವ ಕಾರ್​ಗಳು ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲಾತಿಗಳು ಪತ್ತೆಯಾಗಿವೆ.

ಇನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ವಾಮಿ, ಮಂತ್ರಿ ಗ್ರಿನ್ಸ್​ ಅಪಾರ್ಟಮೆಂಟ್​ನ ಕಿಡಕಿಯಿಂದ 2 ಕೋಟಿ ರೂಪಾಯಿ ಹಣವಿದ್ದ ಬ್ಯಾಗ್​ನ್ನು ಎಸೆದಿದ್ದು, ಇತರ ಅಪಾರ್ಟಮೆಂಟ್​ ನಿವಾಸಿಗಳ ಮಾಹಿತಿ ಮೇರೆಗೆ ಅಧಿಕಾರಿಗಳು ಆ ಬ್ಯಾಗ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸ್ವಾಮಿಮನೆಯಲ್ಲಿ ಪರಿಶೀಲನೆ ನಡೆದಿದೆ.

 

 

ಕೇವಲ ಟಿ,ಆರ್,ಸ್ವಾಮಿ ಮಾತ್ರವಲ್ಲದೇ,ಅದೇ ಅಪಾರ್ಟಮೆಂಟ್​ನಲ್ಲಿ ವಾಸವಾಗಿದ್ದ ಅವರ ಸಹೋದರಿ ಮನೆಯಲ್ಲೂ ಮೂಟೆ-ಮೂಟೆ ಹಣ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಗಳು ಎರಡು ಹಣ ಎಣಿಕೆ ಮೆಷಿನ್​ ತರಿಸಿದ್ದು, ಹಣ ಎಣಿಕೆಯಲ್ಲಿ ತೊಡಗಿದ್ದಾರೆ. 15 ಕ್ಕೂ ಹೆಚ್ಚು ಅಧಿಕಾರಿಗಳು ಅವರ ಮನೆಯಲ್ಲಿ ದಾಖಲೆ ಪರಿಶೀಲನೆ, ಆಭರಣ,ನಗದು ಸಂಗ್ರಹಿಸುತ್ತಿದ್ದಾರೆ.

 

 

ಇನ್ನು ಟಿ.ಆರ್.ಸ್ವಾಮಿಗೆ ಸೇರಿದ ಅಪಾರ್ಟಮೆಂಟ್​​ನ ಬೇಸ್​ಮೆಂಟ್​ನಲ್ಲಿ ಅವರಿಗೆ ಸೇರಿದ ವಾಹನದಲ್ಲೂ ಕೂಡ ಅಪಾರಪ್ರಮಾಣದ ದಾಖಲೆಗಳು ಪತ್ತೆಯಾಗಿದೆ. ಅಲ್ಲದೇ ಮಿನಿಕೂಪರ್ ಸೇರಿದಂತೆ ಸ್ವಾಮಿ ಹಾಗೂ ಆತನ ಮಗಳು,ಮಗ ಬಳಸುತ್ತಿದ್ದ ಬೆಲೆಬಾಳುವ ಕಾರ್​ಗಳು ಪತ್ತೆಯಾಗಿವೆ. ಇದಲ್ಲದೇ ದಾಳಿ ವೇಳೆ ಸ್ವಾಮಿ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಸ್ವಾಮಿ ಪಡೆದುಕೊಂಡ ಹಾಗೂ ನೀಡಿದ ಲಂಚದ ಮಾಹಿತಿ ವಿವರ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭರ್ಜರಿ ತಿಮಿಂಗಲವೊಂದನ್ನು ಭೇಟೆಯಾಡಿದ್ದು, ಸಂಜೆ ವೇಳೆಗೆ ದಾಳಿಯಲ್ಲಿ ದೊರೆತ ಒಟ್ಟು ಆಸ್ತಿಯ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

Sponsored :


9900071610