ಮಾಜಿ ಸಚಿವ ಡಿಕೆಶಿ ಪುತ್ರಿ ಐಶ್ವರ್ಯ ವಿಚಾರಣೆ ಅಂತ್ಯ…..! ಎನ್ಕ್ವೈರಿ ಮುಗಿಸಿ ನಗರಕ್ಕೆ ವಾಪಸ್ಸಾದ ಐಶ್ವರ್ಯ…!!

19841

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಇಡಿ ಅಧಿಕಾರಿಗಳ ಸಮನ್ಸ್ ಬೆನ್ನಲ್ಲೇ ಇಡಿ ವಿಚಾರಣೆಗೆ ಹಾಜರಾಗಿದ್ದ ಡಿಕೆಶಿ ಪುತ್ರಿ ಐಶ್ವರ್ಯಾ ದೆಹಲಿಯಿಂದ  ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ad

ನಿನ್ನೆ ಇಡಿ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ಐಶ್ವರ್ಯ ದಾಖಲೆಗಳ ಜೊತೆಗೆ ವಿಚಾರಣೆಯನ್ನು ಸಮರ್ಥವಾಗಿ ಎದುರಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ  ಐಶ್ವರ್ಯ ಅತ್ಯಂತ  ಧೈರ್ಯವಾಗಿ ಆಗಿ ಉತ್ತರಿಸಿದ್ದಾರೆ. ಇನ್ನು ಐಶ್ವರ್ಯ ಉತ್ತರದಿಂದ ಅಧಿಕಾರಿಗಳು ಸಮಾಧಾನಗೊಂಡಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯ, ನನಗೆ ಗೊತ್ತಿರುವ ಮತ್ತು ನೆನಪಿನಲ್ಲಿರುವ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನನಗೆ ತಿಳಿಯದಿರದ ಪ್ರಶ್ನೆಗಳಿಗೆ ದಾಖಲೆ ನೋಡಿ ಮತ್ತು ಚಾರ್ಟೆಡ್ ಅಕೌಂಟಂಟ್ ಬಳಿ ಕೇಳಿ ಹೇಳುತ್ತೇನೆ. ನನಗೆ ಗೊತ್ತಿಲ್ಲದೇ ಯಾವ ವ್ಯವಹಾರಗಳು ನಡೆದಿಲ್ಲ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ. ಅಲ್ಲದೆ ನನ್ನ ಎಲ್ಲ ವ್ಯವಹಾರಗಳಿಗೆ ತಂದೆಯ ಆರ್ಥಿಕ ನೆರವು ಇದೆ. ಎಲ್ಲ ವ್ಯವಹಾರಗಳನ್ನು ಘೋಷಿಸಿಕೊಂಡು ತೆರಿಗೆಯನ್ನು ಪಾವತಿಸಿದ್ದೇನೆ. ತಂದೆ ಜೊತೆ ನಾನು ವ್ಯವಹಾರಗಳನ್ನು ನಿರ್ವ ಹಿಸುತ್ತಿದ್ದೇನೆ. ಎಂದು ಸಮರ್ಪಕವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.

ಹೀಗೆ ಇಡಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೂ ಐಶ್ವರ್ಯ ನೀಡಿದ ಸೂಕ್ತ ಉತ್ತರದಿಂದ ಇಡಿ ಅಧಿಕಾರಿಗಳು ಸಮಾಧಾನಗೊಂಡು ಐಶ್ವರ್ಯರವರನ್ನು ಕಳೆದ ರಾತ್ರಿಯೇ ಬೆಂಗಳೂರಿಗೆ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.

ಇಡಿಯಿಂದ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವ್ರ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಹೀಗಾಗಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವ್ರನ್ನ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಡಿಕೆಶಿಯವರನ್ನು ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ. ಇದೇ ವೇಳೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ. ಡಿಕೆ ಶಿವಕುಮಾರ್​​​ಗೆ ಬೇಲ್ ಸಿಗುತ್ತೋ, ಇಲ್ವೋ ಅನ್ನೋ ಕುತೂಹಲವಿದೆ.

Sponsored :

Related Articles