ಬೆನ್ನ ಮೇಲೆ ಮೂಡಿ ಬಂದ ಕೌರವ! ಕುರುಕ್ಷೇತ್ರ ರಿಲೀಸ್​ಗೂ ಮುನ್ನವೇ ಅಭಿಮಾನಿಗಳ ಸಂಭ್ರಮ!!

246
9900071610

ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋ ಹೆಗ್ಗಳಿಕೆ ಗಳಿಸಿಕೊಂಡಿರೋ ದರ್ಶನ್​ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳು ದಚ್ಚು ಪ್ರತಿ ಸಿನಿಮಾ ಬಿಡುಗಡೆಗೂ ಮುನ್ನವೇ ತಮ್ಮದೇ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಇದೀಗ ಈ ಸಾಲಿಗೆ ಸೇರಿದೆ ದರ್ಶನ ಬಹುನೀರಿಕ್ಷಿತ ಚಿತ್ರ ಕುರುಕ್ಷೇತ್ರ.

ad


ಬಿಗ್​ ಬಜೆಟ್ ಚಿತ್ರವಾಗಿರುವ ಕುರುಕ್ಷೇತ್ರ, ದರ್ಶನ್​ ಅವರು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೊದಲ ಚಿತ್ರ. ಈ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ, ಅಭಿಮಾನಿಗಳು ಕೂಡ ತಮ್ಮದೇ ರೀತಿಯಲ್ಲಿ ಈ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಹಸ್ತಿನಾಪುರದ ಅರಸ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್​ ಪೋಟೋವನ್ನು ಅಭಿಮಾನಿಯೊಬ್ಬ ಟ್ಯಾಟೂ ಮೂಲಕ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ.


ಹರೀಶ್​ ಎಂಬ ಅಭಿಮಾನಿಯೇ ಹೀಗೆ ಬೆನ್ನಿನ ಮೇಲೆ ಕೆಂಡದತ್ತ ನೋಟದ ರೌದ್ರಾವತಾರದ ದರ್ಶನ್ ಪೋಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಹಿಂದೆಯೂ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲೂ ದರ್ಶನ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಂಡಿದ್ದರು.
ಅಗಸ್ಟ್​ 2 ರಂದು ಈ ಚಿತ್ರ ರಾಜ್ಯದಾದ್ಯಂತ ತೆರೆ ಕಾಣಲಿದ್ದು, ರೆಬೆಲ್​ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ದಿಗ್ಗಜರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Sponsored :


9900071610