ಹೆಲಿಕ್ಯಾಪ್ಟರ್​ನಲ್ಲಿ ಮಂಟಪಕ್ಕೆ ಬಂದ್ಲು ರೈತನ ವಧು! ಇದು ದೇಶದ ಜನರು ನೋಡ್ಲೇಬೇಕಾದ ಸ್ಟೋರಿ!!

3162

ದೇಶದಾದ್ಯಂತ ಕೃಷಿಯಲ್ಲಿ ತೊಡಗಿರುವ ಯುವಕರಿಗೆ ಮದುವೆಗೆ ಯುವತಿಯರೇ ಸಿಗುತ್ತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಈ ಸ್ಟೋರಿ ನೋಡಿದ ಬಳಿಕ ಯುವತಿಯರು ಕೃಷಿಕ ಯುವಕರನ್ನು ಮದುವೆಯಾಗಲು ಕ್ಯೂ ನಿಂತರೂ ಅಚ್ಚರಿ ಇಲ್ಲ. ಹೌದು ಇಲ್ಲೊರ್ವ ಕೃಷಿಕ ಯುವಕ ತನ್ನ ವಧುವನ್ನು ಮಂಟಪಕ್ಕೆ ಕರೆತರಲು ಹೆಲಿಕ್ಯಾಪ್ಟರ್​ ಕಳುಹಿಸಿದ್ದು, ದೇಶದ ಗಮನ ಸೆಳೆದಿದೆ.

ad

ಮಹಾರಾಷ್ಟ್ರದ ಸೊಲ್ಲಾಪುರ ಪಂಡರಾಪುರದ ಉಪ್ಲಾಸಿ ನಿವಾಸಿ ಐಶ್ವರ್ಯ ಎಂಬ ವಿದ್ಯಾವಂತ ವಧುವಿನ ಮದುವೆ, ಕೃಷಿಕ ನಿತಿನ್​ ಎಂಬುವವರೊಂದಿಗೆ ನಿಶ್ಚಯವಾಗಿತ್ತು. ನಿತಿನ್​ ಎಂಬಿಎ ಪದವಿಧರರಾಗಿದ್ದು, ನಗರದಲ್ಲಿ ಸಂಬಳಕ್ಕೆ ದುಡಿಯೋದಕ್ಕಿಂತ ಕೃಷಿಯೇ ಮೇಲು ಎಂದು ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿದ್ದಾರೆ.


ಅಷ್ಟೇ ಅಲ್ಲ ನಿತಿನ್​ ಕುಟುಂಬದ ಕುಲಕುಸುಬು ಕೃಷಿಯಲ್ಲಿ ಅಪಾರ ಯಶಸ್ಸು ಪಡೆದುಕೊಂಡು ಚೆನ್ನಾಗಿ ಹಣ ಗಳಿಸಿದ್ದಾರೆ. ಹೀಗಾಗಿ ತನ್ನ ವಧುವನ್ನು ವಿಭಿನ್ನವಾಗಿ ಮಂಟಪಕ್ಕೆ ಕರೆಯಿಸಿಕೊಳ್ಳುವ ಸಲುವಾಗಿ ನಿತಿನ್​ ವಧುವಿನ ನಿವಾಸಕ್ಕೆ ಹೆಲಿಕ್ಯಾಪ್ಟರ್ ಕಳುಹಿಸಿ ಕೊಟ್ಟಿದ್ದಾನೆ.


ಇನ್ನು ವಧುವಿನ ಗ್ರಾಮದ ಜನ, ಮದುಮಗಳನ್ನು ಮಂಟಪಕ್ಕೆ ಕರೆದೊಯ್ಯಲು ಕಾರು ಬಸ್​ ಬದಲು ಹೆಲಿಕ್ಯಾಪ್ಟರ್​ ಬಂದಿದ್ದನ್ನು ಮೊದಲ ಬಾರಿಗೆ ನೋಡಿ ಥ್ರಿಲ್​ ಆಗಿದ್ದಾರೆ. ಇನ್ನು ಇಂತಹದೊಂದು ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.

Sponsored :

Related Articles