ಅಗಲಿದ ತಂದೆಗೆ ಭಾವನಾತ್ಮಕ ಬರಹದ ನಮನ! ಪೇಸ್​ಬುಕ್​​ ಕಾರ್ನಾಡ್​​ರ ಕೊನೆಯ ಕ್ಷಣಗಳನ್ನು ನೆನೆದ ಪುತ್ರ!!

8930

ಸ್ವರ್ಣಕಮಲ ಪುರಸ್ಕೃತ, ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಸಾಹಿತಿ, ನಟ,ನಾಟಕಕಾರ.ಎಡಪಂಥೀಯ ಚಿಂತಕ ಗಿರೀಶ್ ಕಾರ್ನಾಡ್​ ಅವರ ನಿಧನದ ಮೂರು ದಿನಗಳ ಬಳಿಕ ಅವರ ಪುತ್ರ ರಘು, ತಂದೆಯ ಕೊನೆಯ ಕ್ಷಣಗಳ ಮಾಹಿತಿ ಹಂಚಿಕೊಂಡಿದ್ದು, ಸಾಂತ್ವನ ಹೇಳಿದ ಎಲ್ಲರನ್ನು ಸ್ಮರಿಸಿದ್ದಾರೆ.


ತಮ್ಮ ಪೇಸ್​ಬುಕ್​ನಲ್ಲಿ ತಂದೆಯೊಂದಿಗಿನ ನೆನಪುಗಳನ್ನು ಬಿಚ್ಚಿಟ್ಟಿರುವ ರಘು, ಸೋಪಾದ ಮೇಲೆ ಕುಳಿತು, ವಿಸ್ಕಿಯ ಗ್ಲಾಸ್ ಹಿಡಿದು, ಇತಿಹಾಸ,ಹಾಡು,ತತ್ವಜ್ಞಾನ,ಜಾನಪದ ಕತೆಗಳ ಕುರಿತು ಮಾತನಾಡುತ್ತಿದ್ದ ತಂದೆಯ ಚಿತ್ರ ನನ್ನ ಮನಸ್ಸಿನಲ್ಲಿ ಬೇರೂರಿದೆ. ನಾನು ಅಪಾರವಾಗಿ ಪ್ರೀತಿಸುವ ವ್ಯಕ್ತಿ ಅವರು ಎಂದಿದ್ದಾರೆ.

ad


ಅಲ್ಲದೇ, ಜೂನ್ 10 ರಂದು ಅವರ ನಿಧನರಾದ ದಿನದ ಬೆಳವಣಿಗೆಗಳನ್ನು ಉಲ್ಲೇಖಿಸಿರುವ ರಘು, ಹಿಂದಿನ ವಾರ ನಾನು ಮತ್ತು ನನ್ನ ಸಹೋದರಿ ಇಬ್ಬರೂ ಸ್ನೇಹಿತರೊಬ್ಬರ ಮದುವೆ ಸಲುವಾಗಿ ಮನೆಯಲ್ಲೇ ಇದ್ದೇವು. ಶನಿವಾರ ರಾತ್ರಿ ಅವರು, ಅರ್ಶಿಯಾ ಸತ್ತರ್​ಗೆ ಆಡಿಯೋ ಸಂದರ್ಶನ ನೀಡಿ ಮುಗಿಸಿದ್ದರು. ಭಾನುವಾರ ನಾವೆಲ್ಲರೂ ಟೆರೇಸ್​ನಲ್ಲಿ ಫ್ಯಾಮಿಲಿ ಟೈಂ ಕಳೆದೆವು. ನಾನು ಅವರಿಗೆ ಪಿಸಿಯೋಥೆರಪಿ ಮಾಡಿದೆ. ನನ್ನ ಸಹೋದರಿ ಅವರ ಉಗುರುಗಳನ್ನು ಕತ್ತರಿಸಿದಳು. ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವು. ಆದರೆ ಅತ್ಯಂತ ದುಃಖದ ವಿಚಾರವೆಂದರೇ, ಸೋಮವಾರ ಬೆಳಗ್ಗೆ ಅವರು ನಿಧನರಾದರು ಎಂದು ಬರೆದಿದ್ದಾರೆ.


ಅಲ್ಲದೇ ಅಂದಿನಿಂದ ನಮ್ಮ ಮನೆಯಲ್ಲಿ ಅವರ ನೆನಪಿಗಾಗಿ ಕೊಂಕಣಿ, ಕನ್ನಡ,ತಮಿಳು,ಮಲಯಾಳಂ,ಇಂಗ್ಲೀಷ್ ,ಹಿಂದಿ ಭಾಷೆಯ ಸುರುಳಿಸುತ್ತುತ್ತಿದೆ. ಅವರ ಅಗಲಿಕೆಗೆ ನೀವೆಲ್ಲ ಕಳುಹಿಸಿದ ಸಂದೇಶ, ಸಾಂತ್ವನದ ನುಡಿ ಪತ್ರಗಳಿಗೆ ನಾವು ಆಭಾರಿಯಾಗಿದ್ದೇವೆ. ಇದರಿಂದ ಗಿರೀಶ್ ಕಾರ್ನಾಡರಿಂದ ನೀವೆಲ್ಲ ಎಷ್ಟು ಪ್ರಭಾವಿತರಾಗಿದ್ದೀರಿ ಎಂಬುದು ತಿಳಿಯುತ್ತದೆ ಎಂದು ಉಲ್ಲೇಖಿಸಿದ್ದಾರೆ.


ಅವರ ಬದುಕು, ಅವರ ಗುರುಗಳು, ಶಿಕ್ಷಕರು, ಬಂಧುಗಳು, ಒಡಹುಟ್ಟಿದವರು, ಸ್ನೇಹಿತರು, ನಿರ್ದೇಶಕರು, ವಿದ್ಯಾರ್ಥಿಗಳು,ನಟರು, ಓದುಗರು, ವಿರೋಧಿಗಳು ಹೀಗೆ ಎಲ್ಲರಿಂದಲೂ ಶ್ರೀಮಂತವಾಗಿದೆ. ಇಂಥ ಅಸಾಧಾರಣ ವ್ಯಕ್ತಿಯ ಬದುಕಿನಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ರಘು ಬರಹ ಆಪ್ತವಾಗಿದ್ದು, ಕಾರ್ನಾಡ್ ಅಭಿಮಾನಿಗಳು, ವಿದ್ಯಾರ್ಥಿಗಳು ಇದನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

Sponsored :

Related Articles