ಕರಾವಳಿಯಲ್ಲಿ ಕೈ-ಕಮಲ ನಾಯಕರ ಕಾದಾಟ. ಇದಕ್ಕೆ ಕಾರಣವೇನು ಗೊತ್ತಾ?

247
9900071610

ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ದಗೊಂಡಿರೋ ಬೆನ್ನಲ್ಲೇ ರಾಜಕೀಯ ಪಕ್ಷಗಳು ಪರಸ್ಪರ ಕಾದಾಟಕ್ಕೆ ಇಳಿದಿವೆ. ಅದ್ರಲ್ಲೂ ಕರಾವಳಿಯಲ್ಲಿ ವಿಜಯ ಬ್ಯಾಂಕ್ ವಿಲೀನ ವಿಚಾರವೇ ಕೈ-ಕಮಲ ನಾಯಕರ ಕಾದಾಟಕ್ಕೆ ವೇದಿಕೆಯಾಗಿದೆ. ಜಿಲ್ಲೆಯ ಬಹುಸಂಖ್ಯಾತ ಬಂಟ ಸಮುದಾಯದ ನಾಯಕರೊಬ್ಬರು ಸ್ಥಾಪಿಸಿದ ಬ್ಯಾಂಕನ್ನ ಬೇರೆ ಬ್ಯಾಂಕ್ ಜೊತೆ ವಿಲೀನಕ್ಕೆ ಮುಂದಾಗಿರೋದು ಸದ್ಯ ವಿವಾದದ ವಸ್ತುವಾಗಿದೆ. ಹೀಗಾಗಿ ಬಂಟ ಮತಗಳನ್ನ ಸೆಳೆಯೋಕೆ ಎರಡು ಪಕ್ಷಗಳು ಬಹಿರಂಗ ಗುದ್ದಾಟಕ್ಕೆ ಇಳಿದಿದೆ…ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ad

   

ವಿಜಯ ಬ್ಯಾಂಕ್….1931ರ ವೇಳೆಗೆ ಕರಾವಳಿಯಲ್ಲಿ ಹುಟ್ಟು ಪಡೆದ ಈ ಬ್ಯಾಂಕ್ ಸದ್ಯ ದೇಶದ ಬ್ಯಾಂಕಿಂಗ್ ಕ್ಷೇತ್ರದ ಅಗ್ರಗಣ್ಯ ಬ್ಯಾಂಕ್​ಗಳಲ್ಲಿ ಒಂದು. ಆದ್ರೆ ಕೇಂದ್ರ ಸರ್ಕಾರ ಸದ್ಯ ಈ ಬ್ಯಾಂಕನ್ನ ನಷ್ಟದ ನೆಪವೊಡ್ಡಿ ಗುಜರಾತ್​​ನ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಕ್ಕೆ ಮುಂದಾಗಿದೆ. ಆದ್ರೆ ಸದ್ಯ ಈ ವಿಚಾರ ಕರಾವಳಿ ಭಾಗದಲ್ಲಿ ಪ್ರತಿಷ್ಠೆಯ ಗುದ್ದಾಟಕ್ಕೆ ವೇದಿಕೆಯಾಗಿದ್ದು, ಕೈ-ಕಮಲದ ಮಧ್ಯೆ ರಾಜಕೀಯ ಸೆಣೆಸಾಟ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಜಯ ಬ್ಯಾಂಕ್ ಬರೋಡಾ ಬ್ಯಾಂಕ್ ಜೊತೆ ವಿಲೀನವಾಗಲಿದೆ. ಹೀಗಾಗಿ ಇದಕ್ಕೆಲಾ ಕೇಂದ್ರ ಸರ್ಕಾರವೇ ಕಾರಣ ಅಂತ ಆರೋಪಿಸಿರೋ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರು ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ದ ಹೋರಾಟಕ್ಕೆ ಇಳಿದಿದ್ದಾರೆ. 1931 ರ ಅಕ್ಟೋಬರ್ 23 ರಂದು ವಿಜಯ ಬ್ಯಾಂಕನ್ನು ಮಂಗಳೂರಿನಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ ಅನ್ನುವವರ ಸ್ಥಾಪಿಸಿದ್ರು. ಹೀಗಾಗಿ ಜಿಲ್ಲೆಯ ಬಹುಸಂಖ್ಯಾತ ಬಂಟ ಸಮುದಾಯಕ್ಕೂ ಈ ಬ್ಯಾಂಕ್ ಪ್ರತಿಷ್ಠೆಯ ಕಣ. ಈ ಹಿನ್ನೆಲೆಯಲ್ಲಿ ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ದ ಹೋರಾಟಕ್ಕೆ ಇಳಿದಿದೆ. ನಳಿನ್ ಅಸಮರ್ಥ ಸಂಸದ ಅನ್ನೋ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ಮುಂದಿಟ್ಟುಕೊಂಡು ನಳಿನ್ ವಿರುದ್ದ ಜಿಲ್ಲೆಯಾದ್ಯಂತ ಕಾಂಗ್ರೆಸ್ ಹೋರಾಟ ನಡೆಸ್ತಿದೆ. ಆದ್ರೆ ಈ ಮಧ್ಯೆ ನಳಿನ್ ಮಾತ್ರ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ ಈ ಹಿಂದಿನ ಯುಪಿಎ ಸರ್ಕಾರದ ಕೂಸು ಅಂತ ಕಿಡಿ ಕಾರಿದ್ಧಾರೆ. ಅಲ್ಲದೇ ಈಗಿನ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರೋ ಜಿಲ್ಲೆಯವ್ರೇ ಆದ ಕಾಂಗ್ರೆಸ್ ಸಂಸದ ವೀರಪ್ಪ ಮೊಯಿಲಿಯೇ ವಿಜಯ ಬ್ಯಾಂಕ್ ವಿಲೀನಕ್ಕೆ ಶಿಫಾರಸ್ಸು ಮಾಡಿದ್ಧಾರೆ ಅನ್ನೋ ಗಂಭೀರ ಆರೋಪದ ಮೂಲಕ ಕಾಂಗ್ರೆಸ್​​ಗೆ ತಿರುಗೇಟು ನೀಡಿದ್ಧಾರೆ.

 

ಇನ್ನು ವಿಜಯದಶಮಿಯ ದಿನದಂದು ಆರಂಭವಾದ ಈ ಬ್ಯಾಂಕಿಗೆ ವಿಜಯ ಬ್ಯಾಂಕ್ ಅಂತಾ ಹೆಸರಿಡಲಾಗಿತ್ತು. ಪ್ರಾಥಮಿಕವಾಗಿ ಸಣ್ಣಮಾಣದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ 2 ವರ್ಷ ಲಾಸ್ ಅದ್ರು ಉಳಿದ ಸುಮಾರು 80 ವರ್ಷಗಳ ಕಾಲ ಕೋಟ್ಯಾಂತರ ರೂಪಾಯಿ ಲಾಭದಲ್ಲಿ ನಡೆಯುತ್ತಾ ಬಂದಿದೆ. ಸದ್ಯ 200 ಕೋಟಿ ಲಾಭದಲ್ಲಿ ನಡೆಯುತ್ತಿರುವ ಬ್ಯಾಂಕನ್ನು 2000 ಕೋಟಿ ನಷ್ಟದಲ್ಲಿ ನಡೆಯುತ್ತಿರುವ ಬರೋಡ ಬ್ಯಾಂಕಿಗೆ ವಿಲೀನ ಮಾಡುತ್ತಿರೋದು ಈಗ ಕರಾವಳಿಗರ ಆಕ್ರೋಶಕ್ಕೆ ಕಾರಣ. ಇನ್ನು ಸಂಸದ ನಳಿನ್ ಮಾಡಿರೋ ಆರೋಪ ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ. ಹೀಗಾಗಿ ಸ್ವತಃ ಸಂಸದ ವೀರಪ್ಪ ಮೊಯಿಲಿ ನಳಿನ್​ಗೆ ಪತ್ರ ಬರೆಯೋ ಮೂಲಕ ಬಹಿರಂಗವಾಗಿಯೇ ಕಿಡಿ ಕಾರಿದ್ಧಾರೆ. ತಮ್ಮ ಪತ್ರದಲ್ಲಿ, ನಾನು ಅಧ್ಯಕ್ಷನಾಗಿರೋ ಸಮಿತಿ ವಿಜಯ ಬ್ಯಾಂಕನ್ನು ಯಾವುದೇ ಬ್ಯಾಂಕ್​ನೊಂದಿಗೆ ವಿಲೀನಕ್ಕೆ ಶಿಫಾರಸ್ಸು ಮಾಡಿಲ್ಲ. ತಾವು ಸತ್ಯ ವಿಚಾರ ಅರಿಯದೇ ಅಪಪ್ರಚಾರ ಮಾಡಿದ್ದೀರಿ. ಇದು ನಿಮ್ಮ ಪಾರ್ಲಿಮೆಂಟ್ ಸದಸ್ಯತ್ವಕ್ಕೆ ಸೂಕ್ತವಲ್ಲ. ನಿಮ್ಮ ಹೆಸರಿನ ಮುಂದಿರೋ ಕಟೀಲ್ ಅನ್ನೋದು ಪವಿತ್ರ ಸ್ಥಳವಾಗಿದೆ. ಹೀಗಾಗಿ ನೀವು ಕ್ಷಮೆಯಾಚಿಸಬೇಖು. ಪಾರ್ಲಿಮೆಂಟ್ ಸದಸ್ಯರಾಗಿ ಅನಕ್ಷರಸ್ಥರಂತೆ ಪಪ್ರಚಾರಕ್ಕೆ ಇಳಿದಿರೋದು ಸೂಕ್ತವಲ್ಲ ಅಂತ ಮೊಯಿಲಿ ಪತ್ರದ ಮೂಲಕ ಕಿಡಿ ಕಾರಿದ್ದಾರೆ. ಅಲ್ಲದೇ ದ.ಕ ಜಿಲ್ಲಾ ಕಾಂಗ್ರೆಸ್ ಕೂಢ ಸಂಸದ ನಳಿನ್ ತಪ್ಪು ಮುಚ್ಚೋಕೆ ಈ ರೀತಿ ದಾರಿ ತಪ್ಪಿಸ್ತಿದ್ದಾರೆ ಅಂತ ದೂರಿದ್ದಾರೆ.

ಒಟ್ಟಾರೆ ವಿಜಯ ಬ್ಯಾಂಕ್ ವಿಚಾರ ಸದ್ಯ ಕರಾವಳಿ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ಸ ಇದನ್ನೇ ಮುಂದಿಟ್ಟುಕೊಂಡು ಈ ಬಾರಿ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ. ಈ ಮೂಲಕ ಪ್ರತಿಷ್ಠೆಯ ಕಣವಾಗಿರೋ ಕರಾವಳಿಯಲ್ಲಿ ಈ ಬಾರಿ ವಿಜಯ ಬ್ಯಾಂಕ್ ಕೂಡ ಭಾವಚನಾತ್ಮಕವಾಗಿ ಮತ ಸೆಳೆಯೋ ಅಸ್ತ್ರವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ…

ವರದಿ: ಶರತ್ ಪುತ್ತೂರು ಬಿಟಿವಿ ನ್ಯೂಸ್ ಮಂಗಳೂರು

Sponsored :


9900071610