ಕೊನೆಗೂ ಪತ್ತೆಯಾಯ್ತು ಹಳದಿ ಸೀರೆ ಸುಂದರಿಯ ಗುರುತು! ಯೆಲ್ಲೋ ಬ್ಯೂಟಿ ಡಿಟೇಲ್ಸ್​ ತಿಳ್ಕೋಳ್ಳೊಕೆ ಮುಗಿಬಿದ್ದ ಫ್ಯಾನ್ಸ್​​!!

80743

ಲೋಕಸಭಾ ಚುನಾವಣೆ ವೇಳೆ ಚುನಾವಣೆಗಿಂತ ಭರ್ಜರಿಯಾಗಿ ಸುದ್ದಿಯಾಗಿದ್ದು, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹಳದಿ ಸೀರೆ ಸುಂದರಿ ಸಿಬ್ಬಂದಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ಹಳದಿ ಸೀರೆಯ ಸುಂದರಿ ಪೋಟೋ ನೋಡಿದ್ದ ಜನರು ಈಕೆ ಸಿಬ್ಬಂದಿಯಾಗಿರುವ ಮತಗಟ್ಟೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಗ್ಯಾರಂಟಿ ಎಂಬ ನಗೆಚಟಾಕಿ ಹಾರಿಸಿದ್ದರು.

ad

ಬಾಲಿವುಡ್​ ಹೀರೋಯಿನ್​​ಗಳನ್ನು ಮೀರಿಸುವಂತಿದ್ದ ಆಕೆ ಯಾವ ರಾಜ್ಯದ ಯಾವ ಮತಗಟ್ಟೆಯ ಸಿಬ್ಬಂದಿ ಎಂಬ ಮಾಹಿತಿ ಲಭ್ಯವಾಗಿರಲೇ ಇಲ್ಲ. ಆಕೆಯ ಪೋಟೋ ನೋಡಿ ಮರುಳಾದವರೆಲ್ಲ ಆಕೆಯ ವಿವರಕ್ಕಾಗಿ ಹುಡುಕಾಟ ನಡೆಸಿ ಸೋತು ಹೋಗಿದ್ದರು.

  

ಹಳದಿ ಸೀರೆಉಟ್ಟು, ಕೂಲಿಂಗ್ ಗ್ಲಾಸ್​, ಕೈಗೆ ಸ್ಟೈಲಿಶ್​ ವಾಚು ಕತ್ತಿಗೆ ಗುರುತಿನ ಚೀಟಿ ಹಾಕಿಕೊಂಡಿರುವ ಈ ಮಹಿಳೆ ಕೈಯಲ್ಲಿ ಇವಿಎಂ ಮೆಷಿನ್​ ಹಿಡಿದು ಮತಗಟ್ಟೆಗೆ ತೆರಳುತ್ತಿದ್ದ ಈ ಪೋಟೋ ನೋಡಿ ಜನರು ಹುಚ್ಚೆದ್ದುಹೋಗಿದ್ದರು.

ಕೊನೆಗೂ ಈಗ ಹಳದಿಸೀರೆ ಸುಂದರಿಯ ಮೂಲ ಪತ್ತೆಯಾಗಿದ್ದು, ಜನರು ವಿವರ ತಿಳಿದುಕೊಳ್ಳಲು ಮುಗಿಬಿದ್ದಿದ್ದಾರೆ. ಹೌದು ಈ ಚುನಾವಣಾಧಿಕಾರಿ ಹೆಸರು ನಳಿನಿ ಸಿಂಗ್‌. ಈಕೆ ರಾಜಸ್ಥಾನದ ಜೈಪುರದಲ್ಲಿರುವ ಕುಮಾವತ್‌ ಶಾಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಧ್ಯಕ್ಕೆ ಇಷ್ಟೇ ವಿವರಗಳು ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ನಳಿನಿಸಿಂಗ್​​ರನ್ನು ಯಾರಾದ್ರೂ ಚಿತ್ರ ನಿರ್ದೇಶಕರು ಸಂಪರ್ಕಿಸಿದರೂ ಅಚ್ಚರಿ ಏನಿಲ್ಲ ಅಂತಿದ್ದಾರೆ ನೆಟ್ಟಿಗರು.

Sponsored :

Related Articles