ಸಚಿವರ ವಿರುದ್ಧ ಮಾತಾಡಿದ್ರೆ ಬೀಳುತ್ತೆ FIR! ಸೆಲ್ಪಿ ವಿಡಿಯೋದಲ್ಲಿ ಸಂತ್ರಸ್ಥನ ಆರೋಪ! ಮೈಸೂರಿನಲ್ಲಿ ಖಾಕಿ ಅಂಧಾದರ್ಬಾರ!!

165
9900071610

ರಾಜ್ಯದಲ್ಲಿ ಪೊಲೀಸರ ಅಂಧಾದರ್ಬಾರ ಎಲ್ಲೇ ಮೀರಿದ್ದು, ಮಂತ್ರಿ ವಿರುದ್ಧ ಮಾತನಾಡಿದ್ರೆ ಜೈಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೌದು ಸಚಿವ ಸಾ.ರಾ.ಮಹೇಶ್ ತಮ್ಮ ಪ್ರಭಾವ ಬಳಸಿ ವ್ಯಕ್ತಿಯೊರ್ವನನ್ನು ಜೈಲಿಗೆ ಹಾಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ad


ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷರೊರ್ವರು ಸಚಿವರ ವಿರುದ್ಧ ಆರೋಪ ಮಾಡಿದ್ದು, ನನ್ನ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಈ ರೀತಿ ಸಚಿವರು ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ಥ ವ್ಯಕ್ತಿ ಆರೋಪಿಸಿದ್ದಾರೆ.


ಪೊಲೀಸ್ ಠಾಣೆಯಲ್ಲೇ ಸಚಿವ ಸಾ.ರಾ.ಮಹೇಶ್​ ವಿರುದ್ಧ ವಿಡಿಯೋ ಮಾಡಿರೋ ಕೆ.ಆರ್​​​.ನಗರ ತಾಲೂಕಿನ ಲಾಲದೇವನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ನನ್ನ ಮನೆಯಲ್ಲಿ ಯಾವುದೇ ಗಲಾಟೆ ಆಗದೇ ಇದ್ರೂ ಸಚಿವ್ರು ಪ್ರಭಾವ ಬಳಸಿ ನನ್ನನ್ನು ಜೈಲಿಗೆ ಕಳಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಕೌಟುಂಬಿಕ ಕಲಹ ಸಂಬಂಧ ಚಂದ್ರಶೇಖರ್​ ಮೇಲೆ ಅಣ್ಣ ವಸಂತ್​ ದೂರು ನೀಡಿದ್ದರು ಎನ್ನಲಾಗಿದೆ. ಆದ್ರೆ ನನ್ನ ಮೇಲಿನ ದ್ವೇಷದಿಂದ ಸಚಿವರು ಅರೆಸ್ಟ್ ಮಾಡಿಸಿದ್ದಾರೆ. ನನಗೇನಾದ್ರೂ ಆದ್ರೆ ಸಚಿವ, ದೂರುದಾರ ಮತ್ತು ಕೆ.ಆರ್​​​.ನಗರ ಠಾಣೆ ಪೊಲೀಸರೇ ಹೊಣೆ ಎಂದು ಚಂದ್ರಶೇಖರ್​​ ಆರೋಪಿಸಿದ್ದಾರೆ.

Sponsored :


9900071610