ಹುಟ್ಟು ಹಬ್ಬದ ಪ್ರಯುಕ್ತ ತಿರುಪತಿಗೆ ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಮಾಜಿ ಪ್ರಧಾನಿ- ದೇವೇಗೌಡರಿಗೆ ಶುಭಾಶಯ ಕೋರಿದ ನಮೋ.

412

ಮಾಜಿ ಪ್ರಧಾನಿ ದೇವೆಗೌಡರಿಗೆ ಇಂದು 87ನೇ ವರ್ಷದ ಹುಟ್ಟಹಬ್ಬದ ಸಂಭ್ರಮ. ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟಹುಬ್ಬ ಆಚರಿಸಿಕೊಳ್ಳಲು ಹೆಚ್​.ಡಿ. ದೇವೇಗೌಡರು ಪತ್ನಿ ಚನ್ನಮ್ಮ, ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರಿಯರಾದ ಅನುಸೂಯಾ, ಶೈಲಜಾ, ಚನ್ನರಾಯಪಟ್ಟಣ ಶಾಸಕ ಸಿಎನ್​​ ಬಾಲಕೃಷ್ಣ ಸೇರಿದಂತೆ ಒಟ್ಟು 23 ಸದಸ್ಯರ ಜೊತೆ 2 ವಿಶೇಷ ವಿಮಾನದಲ್ಲಿ ತೆರಳಿದರು.

ad

ಇದು ಮೂರನೇ ಶನಿವಾರ ಆದ ಕಾರಣ ಬೆಳಿಗ್ಗೆ 4 ಗಂಟೆಗೇ ಪೂಜೆ ಆರಂಭವಾಗಿದೆ. ಹಾಗಾಗಿ ನಿನ್ನೆ ಸಂಜೆಯೇ ತಿರುಪತಿಗೆ ತೆರಳಿ ಇಂದು ಮುಂಜಾನೆಯೇ ನಡೆಯುವ ಸುಪ್ರಭಾತ ಸೇವೆಯಲ್ಲಿ ದೇವೇಗೌಡರ ಕುಟುಂಬ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದರು.

ಸದ್ಯ ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡರಿಗೆ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲೆಡೆ ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದೆ. ಅಲ್ಲದೆ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.


ಮಾಜಿ ಪ್ರಧಾನಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಗಳು, ನಾನು ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

 

Sponsored :

Related Articles