ಅಜಾತ ಶತ್ರು ಅಟಲ್​ ಆರೋಗ್ಯ ಗಂಭೀರ- ದೇಶದ ಎಲ್ಲೆಡೆ ಚೇತರಿಕೆಗೆ ಪ್ರಾರ್ಥನೆ- ಏಮ್ಸನತ್ತ ಮುಖಮಾಡಿದ ಗಣ್ಯರು!

274

ದೇಶಕಂಡ ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್​​ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ವಾಜಪೇಯಿ, ಇದೀಗ ಉಸಿರಾಟ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ.
ಇನ್ನು ವಾಜಪೇಯಿಯವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಏಮ್ಸ್ ಆಸ್ಪತ್ರೆಯ ಒಪಿಡಿ ಸೇರಿದಂತೆ ಎಲ್ಲಾ ವಿಭಾಗಗಳನ್ನು ಬಂದ್​ ಮಾಡಲಾಗಿದ್ದು, ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರಿಗೆ ಆಸ್ಪತ್ರೆಗೆ ಬರಲು ಸೂಚಿಸಲಾಗಿದೆ.

ad

ಇನ್ನು ಆಸ್ಪತ್ರೆಗೆ ಬಂದ ವಾಜಪೇಯಿ ಕುಟುಂಬಸ್ಥರು ದುಃಖ ಮಡುವಿನಲ್ಲಿದ್ದು, ದೇಶದಾದ್ಯಂತ ಹಲವು ದೇವಾಲಯ,ಮಸೀದಿ,ಚರ್ಚ್​ಗಳಲ್ಲಿ ವಾಜಪೇಯಿಯವರ ಆರೋಗ್ಯ ಸುಧಾರಿಸಲಿ ಎಂದು ಪೂಜೆ,ಪ್ರಾರ್ಥನೆ ನಡೆದಿದೆ. ಇನ್ನು ಬಿಜೆಪಿ ಪಕ್ಷ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ರಾಜ್ಯದಲ್ಲೂ ಬಿಜೆಪಿ ಎಲ್ಲ ಪಕ್ಷದ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ್​ ದೆಹಲಿಗೆ ದೌಡಾಯಿಸಿದ್ದಾರೆ.
ಇನ್ನು ಏಮ್ಸ್​ ಆಸ್ಪತ್ರೆಯತ್ತ ಗಣ್ಯರ ದಂಡೇ ಹರಿದು ಬರುತ್ತಿದ್ದು.ಎಲ್.ಕೆ.ಅಡ್ವಾಣಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್​​​, ಸುಷ್ಮಾ ಸ್ವರಾಜ್​​-ರಾಜನಾಥ್​ ಸಿಂಗ್​ ಸೇರಿದಂತೆ ಗಣ್ಯರ ದಂಡು ಏಮ್ಸ್​ ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಇದಲ್ಲದೇ ಬಿಹಾರ ಮುಖ್ಯಮಂತ್ರಿ ನಿತೀಶ್​ಕುಮಾರ್​​ ಕೂಡ ಏಮ್ಸನತ್ತ ಆಗಮಿಸುತ್ತಿದ್ದಾರೆ.

ಇನ್ನು ಆಸ್ಪತ್ರೆಯ ಎದುರು ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಮೂರು ಹಂತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. 11.30 ಕ್ಕೆ ಏಮ್ಸ್​ ಹಿರಿಯ ವೈದ್ಯರ ತಂಡ ಮೀಟಿಂಗ್ ಬಳಿಕ ಹೆಲ್ತ್​ ಬುಲೆಟಿನ್​ ರಿಲೀಸ್ ಮಾಡಿದ್ದು, ವಾಜಪೇಯಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ನಿನ್ನೆ ಯಾವ ಸ್ಥಿತಿಯಲ್ಲಿದ್ದರೋ ಅದೇ ಸ್ಥಿತಿಯಲ್ಲಿ ಮುಂದುವರೆದಿದ್ದಾರೆ.ಜೀವ ರಕ್ಷಕ ಸಹಾಯದಲ್ಲೇ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಏಮ್ಸ್​ನ ಮಾಧ್ಯಮ ವಿಭಾಗದ ಡಾ.ಆರತಿ ವಿಜ್​ ಮಾಹಿತಿ ನೀಡಿದ್ದಾರೆ.

 

Sponsored :

Related Articles