ಗಂಟಲಿಗೆ ಪ್ಲಾಸ್ಟಿಕ್ ಆಟಿಕೆ ಸಿಲುಕಿ ಕಿರುತೆರೆ ನಟನ ಪುತ್ರಿ ಸಾವು! ದುರಂತಕ್ಕೆ ಕಂಬನಿ ಮಿಡಿದ ಸಹನಟರು!!

81430

ಆಟವಾಡುತ್ತಿದ್ದ ವೇಳೆ ಪ್ಲ್ಯಾಸ್ಟಿಕ್​ ಆಟಿಕೆ ಅಕಸ್ಮಾತಾಗಿ ಗಂಟಲಲ್ಲಿ ಸಿಲುಕಿದ ಪರಿಣಾಮ ಪುಟ್ಟ ಮಗು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.

ad

ಕಿರುತೆರೆಯ ಪ್ರಸಿದ್ಧ ಕಲಾವಿದ ನಟ ಪ್ರತೀಷ್​ ವೋರಾ ಅವರ 2 ವರ್ಷದ ಪುತ್ರಿ ಹೀಗೆ ದುರಂತ ಸಾವನ್ನಪ್ಪಿದ ಬಾಲಕಿ. ತಮ್ಮ ಅಪಾರ್ಟಮೆಂಟ್​ನಲ್ಲಿ ಆಟವಾಡುತ್ತಿದ್ದ ವೇಳೆ ಈ ಪುಟ್ಟ ಮಗು ಪ್ಲಾಸ್ಟಿಕ್​ ಚೂರೊಂದನ್ನು ಬಾಯಿಗೆ ಹಾಕಿಕೊಂಡಿದ್ದು, ಗಂಟಲಿನಲ್ಲಿ ಸಿಲುಕಿ ಉಸಿರಾಡಲಾಗದ ಕಾರಣ ಮಗು ಸಾವನ್ನಪ್ಪಿದೆ.

ನಟ ಪ್ರತೀಷ್​ ವೋತಾರ್​ ಸಧ್ಯ ಪ್ಯಾರ್​ ಕೆ ಪಾಪಡ್​​ ಧಾರವಾಹಿಯಲ್ಲಿ ನಟಿಸುತ್ತಿದ್ದು, ಘಟನೆಯನ್ನು ದುಃಖದಿಂದ ಹಂಚಿಕೊಂಡಿದ್ದಾರೆ. ಅವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಹಿಂದಿಕಿರುತೆರೆ ಲೋಕ, ಸಹನಟರು ಸಂತೈಸಿದ್ದಾರೆ.

Sponsored :

Related Articles