ನೀರು ಕೊಡಿ- ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ- ಮಹದಾಯಿ ಹೋರಾಟಗಾರರ ಕೊನೆ ಅಸ್ತ್ರ!

194
9900071610

 

ad

ಜೀವ ಜಲಕ್ಕಾಗಿ ರೈತರು ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದರೂ ಯಾವುದೇ ಬೆಲೆ ಸಿಕ್ಕಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ. ಆದ್ರೆ ಈಗ ನ್ಯಾಯಾಧೀಕರಣದ ಅಂತಿಮ ತೀರ್ಪು ಹೊರಬೀಳಲಿದ್ದು, ರೈತರು ಈಗ ಮಾಡು ಇಲ್ಲವೆ ಮಡಿ ಎನ್ನುವ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಉತ್ತರ ಕರ್ನಾಟಕ ನಾಲ್ಕು ಜಿಲ್ಲೆ ಒಂಬತ್ತು ತಾಲೂಕಿನ ರೈತರು ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಹುಬ್ಬಳ್ಳಿ, ನವಲಗುಂದ, ನರಗುಂದ ಭಾಗದಲ್ಲಿ ನೀರಿಗಾಗಿ ನಿರಂತರವಾಗಿ ಹೋರಾಟ ನಡೆದವು. ನ್ಯಾಯಾಧೀಕರಣದ ಹೊರಗಡೆ ಸಮಸ್ಯೆಯನ್ನು ಬಗೆ ಹರಿಸುವಂತೆ ಎಷ್ಟೇ ಹೋರಾಟ ಮಾಡಿದ್ರು, ಪ್ರಯೋಜನವಾಗಿಲ್ಲ.

ಈಗಮಹದಾಯಿ ಮಹಾ ತೀರ್ಪು ಬರಲಿದ್ದು, ರೈತರು ಮಹಾ ತೀರ್ಪುಗಾಗಿ ರೈತರು ಹೋರಾಟದ ರೂಪರೇಷೆಗಳನ್ನು ತಯಾರು ಮಾಡ್ತಾಯಿದ್ದಾರೆ. ಹಾಗಾಗಿ ಅಗಸ್ಟ್ 11 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಯಾ ಮರಣಕ್ಕೆ ಒತ್ತಾಯಿಸಿ ಹೋರಾಟ ಆರಂಭ ಮಾಡಲಿದ್ದಾರೆ. ಕಳೆದ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದ ತಂಡ ಮಹದಾಯಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ನಮ್ಮ ಪಾಲಿನ ನೀರು ನಮಗೆ ಕೊಡಿಸಿ ಇಲ್ಲವಾದ್ರೆ ನಮಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿದ್ರು.

ಆದ್ರೆ ರಾಷ್ಟ್ರಪತಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ಈವಾಗ ಅಗಸ್ಟ್ ನಲ್ಲಿ ಮಹದಾಯಿ ಮಹಾ ತೀರ್ಪು ಬರಲಿದ್ದು, ಹೋರಾಟವನ್ನ ಉಗ್ರರೂಪದಲ್ಲಿ ಮಾಡಲು ರೈತರು ಚಿಂತನೆ ನಡೆಸಿದ್ದಾರೆ. ತೀರ್ಪು ರೈತ ಪರ ಬಂದ್ರೆ ಬೆಂಗಳೂರಿನಲ್ಲಿ ವಿಜಯೋತ್ಸವ ಮಾಡುತ್ತೇವೆ ಅಥವಾ ವ್ಯತಿರಿಕ್ತವಾಗಿ ಬಂದ್ರೆ ಬೆಂಗಳೂರಿನಲ್ಲಿ ದಯಾ ಮರಣ ನೀಡುವವರಿಗೆ ಸುಮಾರು 1300 ಸಂಘಟನೆಗಳೊಂದಿಗೆ ದಯಾಮರಣ ಹೋರಾಟ ಮುಂದುವರೆಸುತ್ತೇವೆ ಅಂತಾರೆ ರೈತ ಮುಖಂಡರು.

Sponsored :


9900071610