ಉತ್ತರ ಪ್ರದೇಶದಲ್ಲಿ ದಾಖಲೆಯ ಬೆಲೆಗೆ ಮಾರಾಟವಾದ ಸಲ್ಮಾನ್​ ಖಾನ್​!! ಬ್ಯಾಡ್​ ಬಾಯ್​ ರೇಟ್​ ಎಷ್ಟಿತ್ತು ಗೊತ್ತಾ??

1833
9900071610

ಬಾಲಿವುಡ್ ಬ್ಯಾಡ್​ಬಾಯ್​, ಸುಲ್ತಾನ್ ಸಲ್ಮಾನ್ ಖಾನ್​ ಬೆಲೆ ಎಷ್ಟು ಗೊತ್ತಾ? ಆರೇ ಇದೇನಿದು ಸಲ್ಮಾನ್ ಖಾನ್ ಬೆಲೆ ಎಷ್ಟು ಅಂತಿದ್ದಾರೆ. ಇಷ್ಟಕ್ಕೂ ಸಲ್ಮಾನ್ ಖಾನ್ ಗೆ ಬೆಲೆ ಯಾಕೆ ನಿಗದಿಯಾಗಿದೆ ಬ್ಯಾಡ್​ ಬಾಯ್ ಮಾರಾಟಕ್ಕಿದ್ದಾರಾ? ಅನ್ನೋ ಅನುಮಾನ ನಿಮ್ಮನ್ನು ಕಾಡ್ತಿದ್ಯಾ? ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ad

 

ಹೌದು ಒಂದೊಂದು ಚಿತ್ರ, ಜಾಹೀರಾತಿಗೂ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವ  ಸಲ್ಮಾನ್ ಖಾನ್ ಬೆಲೆ ಕೇವಲ 8 ಲಕ್ಷ ರೂಪಾಯಿ. ಅರೇ ಇದೇನಿದು ಸಲ್ಮಾನ್ ಖಾನ್ ಬೆಲೆ ಕೇವಲ 7 ಲಕ್ಷ ನಾ ಅಂದ್ರಾ? ಅದು ಬಾಲಿವುಡ್​ ಸಲ್ಮಾನ್ ಖಾನ್​ರದ್ದಲ್ಲ. ಬದಲಾಗಿ ಗೋರಖ್​ ಪುರದಲ್ಲಿ ಬಕ್ರೀದ್​ ಹಬ್ಬದ ಪ್ರಯುಕ್ತ ಮಾರಾಟವಾದ  ಸಲ್ಮಾನ್ ಖಾನ್ ಹೆಸರಿನ ಮೇಕೆಯ ಬೆಲೆ ಇದು.

ಮುಸಲ್ಮಾನ್ ಬಾಂಧವರ ಪವಿತ್ರವಾದ ಬಕ್ರೀದ್ ಹಬ್ಬಕ್ಕೆ ಸಲ್ಮಾನ್, ಶಾರುಖ್, ಸೇರಿದಂತೆ ಬಾಲಿವುಡ್ ಸ್ಟಾರ್ ನಟರ ಹೆಸರಿನ ಕುರಿ, ಮೇಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಹುಟ್ಟುತ್ತದೆ. ಬಕ್ರೀದ್ ಗಾಗಿ ಬಜಾರಿನಲ್ಲಿ ಮಾರಾಟ ಮಾಡಲು ವಿಶೇಷವಾಗಿ ಮೇಕೆಗಳನ್ನು ಸಾಕಲಾಗುತ್ತದೆ.

ಹೀಗೆ  ಸ್ಟಾರ್ ನಟರ ಹೆಸರನ್ನು ಹೊಂದಿರುವ ಮೇಕೆ ಗಳಿಗೆ ನಟರಂತೆ ಹೈಬಜೆಟ್ ಕೊಟ್ಟು ಖರೀದಿ ಮಾಡಬೇಕು. ಹೀಗಾಗಿ ಹಬ್ಬದ ವಿಶೇಷವಾಗಿ ಸುಮಾರು 95 ರಿಂದ 100 ಕೆಜಿ ತೂಗುವ ‘ಸಲ್ಮಾನ್’ ಖಾನ್​  ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ.!

ಇನ್ನು ಪತ್ರಕರ್ತರೊಂದಿಗೆ ಮಾತನಾಡಿದ ಸ್ಮಾರ್ಟ್​ ಮೇಕೆ ಸಲ್ಮಾಖಾನ್ ಒಡೆಯ ನಿಜಾಮುದ್ದೀನ್, “ಹ್ಯಾಂಡ್ ಸಮ್ ಸ್ಟಾರ್ ನಟನಂತೆ ನಮ್ಮ ಮೇಕೆಯೂ ನೋಡಲು ಸುಂದರವಾಗಿದೆ. ದಷ್ಟಪುಷ್ಟವಾಗಿದೆ. ಸಲ್ಮಾನ್ ಹೆಸರಿರುವುದಕ್ಕೆ ಮಾತ್ರ ಮೇಕೆ ಬೆಲೆ ಹೆಚ್ಚಾಗಿಲ್ಲ. ಈ ಮೇಕೆ ಮೇಲಿರುವ ಕಪ್ಪು ಬಣ್ಣದ ಮಚ್ಚೆಗಳು ಕಾರಣವಾಗಿದೆ” ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಈಗಾಗಿ ಇಷ್ಟೊಂದು ವಿಶೇಷತೆಯನ್ನೊಂದಿರುವ ನನ್ನ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಈ ಮೇಕೆಯನ್ನು ಸಾಕಲು ದಿನಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದಾರಂತೆ. ಅಲ್ಲದೆ ಮೇಕೆಗೆ ತಿನ್ನಲು ಹುಲ್ಲು. ಎಲೆಗಳನ್ನು ಕೊಡದೆ. ಮನೆಯವರು ಸಾಮಾನ್ಯವಾಗಿ ತಿನ್ನುವ ಚಿಪ್ಸ್, ಟಾಫಿ, ಒಣ ಹಣ್ಣುಗಳನ್ನ ನೀಡಿದ್ದಾರಂತೆ. ಮನೆಯ ಸದಸ್ಯನಂತೆ ಸಾಕಿದ್ದ ಸಲ್ಲುಗೆ ಮಲಗಲು ವಿಶೇಷ ದಿಂಬು ಹಾಸಿಗೆಯ ಸೌಲಭ್ಯವನ್ನು ಒದಗಿಸಿದ್ದರಂತೆ. ಈಗೆ ಬಹಳ ಮುದ್ದಾಗಿ ಸಾಕಿರುವ ಈ ಸಲ್ಲು ಇದೀಗಾ ಬರೋಬ್ಬರಿ 95 ರಿಂದ 100 ಕೆಜಿ ತೂಕ ಹೊಂದಿದ್ದು. ಮಾರ್ಕೆಟ್ ನಲ್ಲಿ ಸಖತ್ ಹವಾ ಕ್ರಿಯೆಟ್ ಮಾಡುತ್ತಿದೆ.

Sponsored :


9900071610