ಬಾಹುಬಲಿ ಗಣೇಶನ ಬಳಿಕ ಇದೀಗ ಕೆಜಿಎಫ್ ವಿಘ್ನವಿನಾಯಕ! ಹಬ್ಬದ ಮಾರ್ಕೆಟ್​ನಲ್ಲೂ ಯಶ್​ದೇ ಹವಾ!!

2314
9900071610

ದೇಶಾದ್ಯಂತ ಭಾರೀ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಹಬ್ಬ ವರ್ಷಕ್ಕೊಮ್ಮೆ ಬರುವ ಈ ಗಣೇಶ ಹಬ್ಬ ಎಲ್ಲರಿಗೂ ಅಚ್ಚುಮೆಚ್ಚು. ಏಕೆಂದರೆ ಬೀದಿ ಬೀದಿಗಳಲ್ಲಿ, ಮನೆಗಳಲ್ಲಿ ಗಣೇಶನನ್ನು ಸಕಲ ಸಂಕಷ್ಟವನ್ನು ದೂರ ಮಾಡಿ, ಸರ್ವ ಕಾರ್ಯಗಳು ನಿರ್ವಿಘ್ನದಿಂದ ನಡೆಯಲಿ ಹಾಗೂ ಎಲ್ಲರ ಮನೆ ಮನದಲ್ಲಿ ಸುಖ ಶಾಂತಿ ನೆಮ್ಮದಿ ಎಂದೆಂದಿಗೂ ಇರಲಿ ಎಂದು ಭಕ್ತಿಭಾವದಿಂದ ಪೂಜಿಸುತ್ತಾರೆ.

ad

ಅದರಲ್ಲಿಯೂ ಅಕ್ಕಿ, ಬೇಳೆ ಸೇರಿದಂತೆ ಹಲವು ರೂಪಗಳ, ಮಾದರಿಯ, ವೈರಟಿ ಗಣೇಶನ ಮಾರುಕಟ್ಟೆಗೆ ಬಂದಿರುವುದನ್ನು ಸಹ ನೋಡಿದ್ದೇವೆ. ಆದರೆ ಇದೀಗಾ ವಿಶೇಷ ಎಂಬುವ ರೀತಿಯಲ್ಲಿ ನ್ಯೂ ಸ್ಟೈಲಿಶ್ ಗಣೇಶ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಯಾವುದಪ್ಪಾ ಅದು ಅಂತೀರಾ?

ಹೌದು ಈ ವರ್ಷದ ಸ್ಯಾಂಡಲ್ ವುಡ್ ನ ಬ್ಲಾಕ್ ಬಾಸ್ಟರ್ ಚಿತ್ರ ಕೆಜಿಎಫ್ ಕೇವಲ ಸ್ಯಾಂಡಲ್ ವುಡ್ ಅಲ್ಲದೆ ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್, ಮಾಲಿವುಡ್ ನಲ್ಲಿ ಏಕಕಾಲದಲ್ಲಿ ರೀಲಿಸ್ ಆಗಿ ನ್ಯಾಷನಲ್ ವೈಡ್ ಫೇಮಸ್ ಆದ ಚಿತ್ರ . ಸದ್ಯ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಭುಜದ ಮೇಲೆ ಗುದ್ದಲಿ ಹಿಡಿದುಕೊಂಡು ಮಾಸ್ ಲುಕ್ ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ ರಾಕಿ ಬಾಯ್ ಗೆಟಪ್​​ನಲ್ಲಿಯೇ ಇದೀಗಾ ಗಣಪನ ಮೂರ್ತಿಗಳು ರೆಡಿಯಾಗ್ತಿದ್ದು, ಮಾರುಕಟ್ಟೆಗೆ ಲಗ್ಗೆ ಇಡಲು ರೆಡಿಯಾಗಿದೆ.

ಗಣೇಶನ ಈ ನ್ಯೂ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಮೂರ್ತಿಯನ್ನು ಕೊಳ್ಳೋಕೆ ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಹಂತದಲ್ಲಿದ್ದು ಚಿತ್ರತಂಡದಿಂದ ಗಣೇಶನ ಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಸಿಗುವ ಸಾಧ್ಯತೆಗಳಿದೆ.

ಇನ್ನೂ ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಶಿವಲಿಂಗವನ್ನು ಹೊತ್ತು ಬರುತ್ತಿರುವ ದೃಶ್ಯ ಫೇಮಸ್ ಆಗಿತ್ತು. ಅಲ್ಲದೆ ಪ್ರಭಾಸ್ ಶಿವಲಿಂಗವನ್ನು ಹೊತ್ತು ತರುತ್ತಿದ್ದ ಮಾದರಿಯಲ್ಲಯೇ ಗಣೇಶನ ಮೂರ್ತಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು ಆದರೀಗಾ ಟ್ರೆಂಡ್ ಗೆ ತಕ್ಕಂತೆ ಕೆಜಿಎಫ್ ಮಾದರಿಯ ಗಣೇಶ ಮೂರ್ತಿ ಬರಲಿದೆ.

Sponsored :


9900071610