ಗೌರಿ ಹಂತಕರು ಹಿಂದುತ್ವ ಕಾರ್ಯಕರ್ತರಲ್ಲ !! ಎಸ್ ಐಟಿ ಪೊಲೀಸರ ಮಹಾಯಡವಟ್ಟು !!

1170

 

ad

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಮಾಡಿದ್ರಾ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ. ಕೆ.ಟಿ.ನವೀನ್ ಬಿಜೆಪಿ, ಸಂಘ ಪರಿವಾರದ ಸದಸ್ಯನಲ್ಲ ಜೆಡಿಎಸ್​ ಕಾರ್ಯಕರ್ತ ಅಂತಾ ಆತನ ಪತ್ನಿ ರೂಪಾ ಹೇಳಿಕೆ ನೀಡಿದ್ದಾರೆ. ಈ ಅಂಶ ಗೊತ್ತಿದ್ದೇ ಕೆಟಿ ನವೀನ್​​ನನ್ನು ಈ ಪ್ರಕರಣದಲ್ಲಿ ಸಿಲಿಕಿಸಿರೋ ಅನುಮಾನ ಕಾಡ್ತಿದೆ. ಬಿಜೆಪಿ ಜೊತೆ ಜೆಡಿಎಸ್​ ಸೇರಿದೆ ಎಂದು ಜನತೆ ಮುಂದೆ ಬಿಂಬಿಸಲು ಅಂದಿನ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಸೂಚನೆ ಮೇಲೆ ನವೀನ್​ನನ್ನು ಸಿಲುಕಿಸಿರೋ ಮಾಹಿತಿ ಬಯಲಾಗ್ತಿದೆ. ಗೌರಿ ಪ್ರಕರಣದ ಆರೋಪಿಯಾಗಿರುವ ನವೀನ್​ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿ ತಮ್ಮಣ್ಣ ಅವ್ರ ಪರಮ ಅಭಿಮಾನಿಯಾಗಿದ್ದ. ಅದು ಗೊತ್ತಿದ್ದೇ ಸಿಲುಕಿಸಲಾಗಿದೆ ಎಂಬುದು ಇದೀಗ ದಾಖಲೆಗಳಲ್ಲಿ ಬಹಿರಂಗವಾಗಿದೆ. ಅಲ್ಲದೇ ತಾನು ಜೆಡಿಎಸ್​ ಕಾರ್ಯಕರ್ತ ಅನ್ನೋ ಹೇಳಿಕೆಯನ್ನೂ ಕೆ.ಟಿ.ನವೀನ್​​ ನೀಡಿದ್ದ. ಆದ್ರೆ ಸಿಕ್ಕಿ ಬೀಳೋ ಭೀತಿಯಿಂದ ಪೊಲೀಸ್ರು ಇದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿಲ್ಲ.

ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸರು ಮತ್ತೊಂದು ಮಹಾತಪ್ಪು ಎಸಗಿದ್ದಾರೆ. ನವೀನ್​ಗೆ ಬುಲೆಟ್​ ಕೊಟ್ಟೆ ಎಂದು ಹೇಳಿದ್ರೂ ಶಬ್ಬೀರ್​​​ನನ್ನು ಪೊಲೀಸರು ಬಂಧಿಸಿಲ್ಲ. ಒಂದು ವೇಳೆ ಆತ ಅಕ್ರಮವಾಗಿ ಗುಂಡು ಕೊಟ್ಟಿದ್ರೆ, ಶಸ್ತ್ರಾಸ್ತ್ರ ಕಾಯಿದೆ ಅನ್ವಯ ಆರೋಪಿಯಾಗಲಿದ್ದಾನೆ. ಆದ್ರೆ ಅವನನ್ನು ಪೊಲೀಸರು ಹೇಗೆ ಬಿಟ್ಟರು ಎನ್ನುವುದೇ ಭಾರೀ ಅನುಮಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಬೆಂಗಳೂರು ಆರ್ಮರಿ ಗನ್​ ಮಾರಾಟದ ಅಂಗಡಿಯನ್ನೂ ಪೊಲೀಸರು ಮುಚ್ಚಿಸಿಲ್ಲ. ನವೀನ್ ಬಳಿ ಸಿಕ್ಕ ಗನ್​​ ಬೇರೆ,ಗುಂಡುಗಳೇ ಬೇರೆ ಅನ್ನೋದು ಫೋರೆನ್ಸಿಕ್​​​ ವರದಿಯಲ್ಲೂ ಪತ್ತೆಯಾಗಿದೆ. ಮತ್ತೊಂದೆಡೆ ನವೀನ್​​ ಒಪ್ಪಿಗೆ ಇಲ್ಲದೆಯೂ ಮಂಪರು ಪರೀಕ್ಷೆ ನಡೆಸಲಾಗಿದೆ. ಸಿಎಂ ಕುಮಾರಸ್ವಾಮಿಯವ್ರು ಗೃಹ ಇಲಾಖೆ ಮೂಲಕ ಈ ಎಲ್ಲವನ್ನೂ ತನಿಖೆ ನಡೆಸಿ ನವೀನ್​​ಗೆ ನ್ಯಾಯ ಒದಗಿಸುವರೇ ಅನ್ನೋದನ್ನು ಕಾದು ನೋಡ್ಬೇಕಿದೆ.

 

Sponsored :

Related Articles