ಹನುಮ ಜಯಂತಿ ಆಚರಣೆ ಹೇಗೆ? ಅದರ ಫಲಗಳೇನು?

1701
9900071610

ಭಕ್ತಿ ಎಷ್ಟು ಪರಿಶುದ್ದವಾಗಿ ಇರಬೇಕು ? ಭಕ್ತನ ನಂಬಿಕೆ ಭಗವಂತನ ಮೇಲೆ ಯಾವ ಪರಿಯಲ್ಲಿ ಇರಬೇಕು ಎನ್ನುವುದಕ್ಕೆ ನಮಗೆ ಸಿಗುವ ಅತ್ಯುತ್ತಮ ಉದಾಹರಣೆ ಹನುಮಂತ ಎಂದರೆ ತಪ್ಪಾಗಲಾರದು. ಶ್ರೀ ರಾಮನೇ ಪರಬ್ರಹ್ಮ ಸ್ವರೂಪ ಶ್ರೀ ರಾಮನೇ ಪರಾಮತ್ಮ ಎಂಬುದ ಜಗತ್ತಿಗೆ ಸಾರಿದವರಲ್ಲಿ ಹನುಮಂತ ಅಗ್ರಜ. ಉಂಬಾಗ ತಿಂಬಾಗ ನೆಡೆವಾಗ ನುಡಿವಾಗ ಬಾಗುವಾಗ ತೇಗುವಾಗ ಸಾಗುವಾಗ ಎಲ್ಲ ಸಮಯದಲ್ಲಿಯೂ ಭಗವಂತನಾದ ಶ್ರೀ ರಾಮನ ನಾಮ ಸ್ಮರಣೆ ಮಾಡುತ್ತಾ ಸ್ವತಃ ಭಕ್ತನಿಂದ ತಾನೇ ಭಗವಂತನಾದವ ಭಕ್ತಾಗ್ರೇಸರನಾದ ಹನುಮಂತ. ಹನುಮಂತನಿಗೆ ಸಕಲ ಶಾಸ್ತ್ರಗಳನ್ನೂ ಓದಿ ಸಕಲ ವೇದಗಳನ್ನೂ ತಿಳಿದು ತಿಳಿಯಬೇಕಾದ ವಸ್ತು, ಜಾಪಕರ ಜಾಪ್ಯ ಧ್ಯಾನ ಮಾಡುವವರ ಧ್ಯೇಯ ಸಕಲ ಜೀವನದ ಸರ್ವಸ್ವವು ಶ್ರೀ ರಾಮನೇ ಆಗಿದ್ದ. ಅಂಥ ಶ್ರೇಷ್ಠ ಭಕ್ತಾಗ್ರೇಸರ ಆಂಜನೇಯನ ಪೂಜಿಸುವ ಉತ್ತಮ ದಿನ ಇಂದು ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಅಂದರೆ ಹನುಮದ್ವರತದ ದಿನ.

ad


ಭಯ ಎಂಬ ಶಬ್ದಕ್ಕೆ ಹಲವರು ಹಲವು ವಿಧದ ವ್ಯಾಖ್ಯಾನ ನೀಡುತ್ತಾರೆ ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ವಯಕ್ತಿಕ ಕಾರಣಗಳಿಂದ ಅವರಿಗಿರುವ ಭಯದಲ್ಲಿ ವಿಭಿನ್ನತೆ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಒಂದು ವಿಚಾರದಲ್ಲಿ ಭಯ ಇರುತ್ತದೆ. ಕೆಲವರಿಗೆ ಎಲ್ಲ ವಿಚಾರಗಳಲ್ಲಿಯೂ ಭಯ ಕಾಡುತ್ತದೆ! ಆದರೆ ಈ ಭಯ ಎಂಬ ಪದದ ಅರ್ಥ ತಿಳಿಯದವ ಅಂದರೆ ನಮ್ಮ ಹನುಮಂತ. ಅಷ್ಟೇ ಅಲ್ಲ ಅವನ ಆರಾಧಿಸುವ ಪೂಜಿಸುವವರಿಗೆ ಇರುವ ಸಕಲ ವಿಧದ ಭಯ ನಿವಾರಕ ಸಹ ಈ ಹನುಮಂತನೆ! ಅಂಥ ಪರಮ ಶ್ರೇಷ್ಠ ಶಕ್ತಿವಂತ ದೇವರು ನಮ್ಮ ಪ್ರೀತಿಯ ಹನುಮ ದೇವರು. ಇಂದು ಆ ಸ್ವಾಮಿಯ ಪೂಜಿಸುವ ಅವನ ಕುರಿತು ವೃತ ಮಾಡುವ ಶುಭ ದಿನ.


ಆಚರಣೆ

ಇಂದು ನೀವು ಮನೆಯಲ್ಲಿ ಅಥವಾ ಹತ್ತಿರದ ಹನುಮನ ದೇಗುಲದಲ್ಲಿ ಪೂಜೆ ಸಲ್ಲಿಸಬಹುದು ಆದರೆ ಒಂದು ಪ್ರಮುಖವಾಗಿ ಗಮನಿಸ ಬೇಕಾದ ವಿಚಾರ ಅಂದರೆ ಹನುಮಂತ ರಾಮ ದೂತ ಎಲ್ಲಿ ರಾಮನೋ ಅಲ್ಲಿ ಹನುಮನು ಆದುದರಿಂದ ನಾವು ಆಂಜನೇಯ ಸ್ವಾಮಿಯ ಪೂಜಿಸುವ ಮೊದಲು ಶ್ರೀ ರಾಮ ಧ್ಯಾನ ಮಾಡಬೇಕು. ಶ್ರೀ ರಾಮನನ್ನು ಪೂಜಿಸ ಬೇಕು. ರಾಮನ ಪೂಜೆ ಮಾಡಿ ಆ ರಾಮ ದೇವರ ಪ್ರಸಾದ ಹೂವನ್ನು ಹನುಮ ದೇವರ ಮೇಲೆ ಹಾಕಿ ನಂತರ ಹನುಮಂತನ ಪೂಜಿಸಿದರೆ ಆಗ ಆಂಜನೇಯ ಸ್ವಾಮಿಯ ವಿಶೇಷ ಸಾನಿಧ್ಯ ನಮ್ಮ ಪೂಜೆಯಲ್ಲಿ ಇರುತ್ತದೆ. ಇನ್ನು ಮನೆಯಲ್ಲಿ ಹನುಮಂತ ದೇವರ ವಿಗ್ರಹ ಇದ್ದಲ್ಲಿ ಆ ವಿಗ್ರಹಕ್ಕೆ ರಾಮ ದೇವರ ಪ್ರಸಾದ ಹಾಕಿ ನಂತರ ಆ ವಿಗ್ರಹದ ಪೂಜೆ ಪೂಜೆ ಫಲ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತ ನಾಮ ಪೂಜೆ ಇತ್ಯಾದಿ ಆಗಿ ಶೋಡಶೋಪಚಾರ ಪೂಜೆ ಮಾಡಬಹುದು. ಇನ್ನು ಮನೆಯಲ್ಲಿ ಆಗದವರು ಇದೇ ಪೂಜೆಗಳನ್ನು ಹತ್ತಿರದ ಆಂಜನೇಯ ದೇಗುಲದಲ್ಲಿ ಮಾಡಿಸಬಹುದು. ನೈವೇದ್ಯ ಮಾಡುವಾಗ ಅದರಲ್ಲಿ ಉದ್ದಿನ ವಡೆ ಹಾಗೂ ಮೊಸರನ್ನ ಮಾಡಿ ನೈವೇದ್ಯ ಮಾಡಿದರೆ ಅತ್ಯುತ್ತಮ ಎನ್ನಬಹುದು. ಇನ್ನು ಇಂದು ಪಂಡಿತರ ಮುಖಾಂತರ ಸುಂದರಾಕಾಂಡ ಪಾರಾಯಣ ಮಾಡಿಸುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ದೇಗುಲಗಳಲ್ಲಿ ಶ್ರೀ ರಾಮ ತಾರಕ ಹವನ ಮಾಡಿಸುವುದರಿಂದ ಆಂಜನೇಯ ಸ್ವಾಮಿಯ ವಿಗ್ರಹದಲ್ಲಿ ಶಕ್ತಿ ವೃದ್ದಿ ಆಗುತ್ತದೆ ಹಾಗು ತನ್ಮೂಲಕ ಭಕ್ತರ ಅಭೀಷ್ಟ ಬೇಗ ಸಿದ್ದಿಸುತ್ತದೆ, ದೇಗುಲಗಳಲ್ಲಿ ವೀಳ್ಯದೆಲೆ ಅಲಂಕಾರ ಮಾಡಿ ಉದ್ದಿನ ವಡೆ ಹಾರ ಮಾಡಿ ದೇವರಿಗೆ ಹಾಕುವ ಸಂಪ್ರದಾಯ ಇದೆ. ಇದರಿಂದ ಸ್ವಾಮಿ ಪ್ರಸನ್ನನಾಗುತ್ತಾನೆ ಎಂಬ ಪ್ರತೀತಿ ಇದೆ.


ಫಲ

ನಾನು ಈ ಹಿಂದೆ ಹೇಳಿದಂತೆ ಇಂದು ಆಂಜನೇಯ ಸ್ವಾಮಿಯ ಪೂಜಿಸುವವರಿಗೆ ಸಕಲ ವಿಧದ ಭಯವೂ ನಿವಾರಣೆ ಆಗುತ್ತದೆ. ವಿದ್ಯೆಯ ವಿಚಾರದಲ್ಲಿ ಭಯ ಇರುವ ವಿದ್ಯಾರ್ಥಿಗಳಿಗೆ ವಿದ್ಯೆಯ ಭಯ ನಿವಾರಣೆ ಎಂಬ ಚಿಕ್ಕ ವಿಷಯದಿಂದ ಆರಂಭಿಸಿ ಜೀವನದಲ್ಲಿ ಹೇಗಪ್ಪಾ ? ಹೇಗೆ ಜೀವಿಸಲಿ ಎಂದು ಭಯ ಪಡುವ ಯಾರೇ ಇರಲಿ ಅವರು ಸನ್ಮಾರ್ಗದಲ್ಲಿ ಇದ್ದವರಾದಲ್ಲಿ ಅವರ ಭಯವನ್ನು ಆಂಜನೇಯನ ಆರಾಧನೆಯಿಂದ ಭಯ ನಿವಾರಣೆ ಆಗುತ್ತದೆ. ಇನ್ನು ಈ ಮಾಟ ಮಂತ್ರ ಭೂತ ಪ್ರೇತ ಪಿಶಾಚಿ ಇತ್ಯಾದಿ ಯಾವುದೇ ದುಷ್ಟ ಅರಿಷ್ಟ ಬಾಧೆಗಳಿಂದ ನರಳುತ್ತಾ ಭಯದಲ್ಲಿ ಜೀವನ ಮಾಡುತ್ತಾ ಇರುವವರಿಗೆ ಇಂದು ಆಂಜನೇಯನ ಆರಾಧನೆ ಮಾಡುವುದರಿಂದ ಎಲ್ಲಾ ಬಾಧಗಳಿಂದ ಮುಕ್ತಿ ಸಿಗುವಲ್ಲಿ ಸಂಶಯ ಬೇಡ.
ಸ್ವಾಮಿ ನಿಷ್ಠೆ, ಭಕ್ತಿ ಶಕ್ತಿ ಮುಗ್ಧತೆ ದಯೆ ಇತ್ಯಾದಿ ಎಲ್ಲಾ ಸದ್ಗುಣಗಳ ಬಂಡಾರ ಆದ ಆಂಜನೇಯ ಸ್ವಾಮಿಯ ವ್ರತ ಪೂಜೆ ಮಾಡುವ ಈ ಶ್ರೇಷ್ಟ ದಿನವನ್ನು ಯಾವುದೇ ಕಾರಣದಲ್ಲಿಯೂ ಸಹ ತಪ್ಪಿಸಿಕೊಳ್ಳದೇ ನಿಮ್ಮ ಶಕ್ತ್ಯಾನುಸಾರ ಭಕ್ತ್ಯಾನುಸಾರ ಸ್ವಾಮಿಯ ಪೂಜಿಸಿ ಭಜಿಸಿ ಸಮಯ ಹೆಚ್ಚು ಇಲ್ಲದಿರೆ ಸದಾ ಧ್ಯನಿಸಿ ಸಾಕು. ನಿಮ್ಮ ಸಾಸಿವೆಯಷ್ಟು ಭಕ್ತಿಗು ಸದಾಕಾಲ ಕರುಣಿಸುವ ಸಾಕಾರ ಮೂರ್ತಿ ಆಂಜನೇಯ ಆದರೆ ಅವನಿಗೆ ನಿಮ್ಮಲ್ಲಿ ನಿಶ್ಕಲ್ಮಶ ಮನಸ್ಸು ಬೇಕು ಅದು ನಿಮಗೆ ಇದೆಯೇ….?
ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು

9845682380

Sponsored :


9900071610