ಪ್ರವಾಹದ ಮಹಿಳಾ ಸಂತ್ರಸ್ಥರನ್ನು ತಲುಪಲಿದೆ ಹರಕೆ ಸೀರೆ!ಒಟ್ಟು 22 ಸಾವಿರ ಸೀರೆ ಹಂಚಿಕೆಗೆ ಸರ್ಕಾರ ನಿರ್ಧಾರ!!

3254
9900071610

ರಾಜ್ಯದ 16 ಜಿಲ್ಲೆಗಳಲ್ಲಿ ಅಬ್ಬರಿಸಿರುವ ವರುಣ ದೇವ ಅಕ್ಷರಷಃ ಜಲಪ್ರಳಯವನ್ನೇ ಸೃಷ್ಟಿಸಿದ್ದಾನೆ. ಹೀಗಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿದ್ದು, ಸರ್ಕಾರ ಸಂತ್ರಸ್ಥರ ಸಹಾಯಕ್ಕೆ ನಿಂತಿದೆ. ಈ ಮಧ್ಯೆ ನೆರೆ ಪ್ರವಾಹದಿಂದ ಮನೆ ಮಠ ಕಳೆದುಕೊಂಡಿರುವ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಒಂದು ವಿಭಿನ್ನ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದು, ರಾಜ್ಯದ ಧಾರ್ಮಿಕ ಇಲಾಖೆಯ ದೇವಾಲಯಗಳಲ್ಲಿ ಸಂಗ್ರಹವಾದ ಸೀರೆ,ವಸ್ತ್ರಗಳನ್ನು ಸಂತ್ರಸ್ಥರಿಗೆ ವಿತರಿಸಲು ನಿರ್ಧರಿಸಿದೆ.

ad


ರಾಜ್ಯದ ಧಾರ್ಮಿಕ ಇಲಾಖೆಯ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಲ್ಲಿ ಜನರು ಹರಕೆ ರೂಪದಲ್ಲಿ ನೀಡುವ ಸೀರೆ, ವಸ್ತ್ರಗಳನ್ನು ಸಂತ್ರಸ್ತರಿಗೆ ವಿತರಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ದೇವಾಲಯಗಳಿಗೆ ಈಗಾಗಲೇ ಸೂಚನೆ ನೀಡಿದೆ.


ಮಳೆಯಿಂದ ಸಂತ್ರಸ್ಥರಾಗಿರುವವರಲ್ಲಿ ಪ್ರಮುಖವಾಗಿ ಮಹಿಳೆಯರು ಉಡುಪುಗಳ ಕೊರತೆಯಿಂದ ನರಳುತ್ತಿದ್ದು, ಸಮಸ್ಯೆಗೀಡಾಗಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸಲು ಚಿಂತನೆ ನಡೆಸಿರುವ ಸರ್ಕಾರ ದೇವಾಲಯಗಳಲ್ಲಿ ಸಂಗ್ರಹವಾಗಿರುವ ಸೀರೆಗಳನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪೊರೈಸಲು ಸೂಚಿಸಿದ್ದು, ಅಲ್ಲಿಂದ ವಿತರಿಸಲು ಪ್ಲ್ಯಾನ್ ಮಾಡಲಾಗಿದೆ.


ಇನ್ನು ಒಟ್ಟು ಎಷ್ಟು ದೇವಾಲಯದಿಂದ ಎಷ್ಟು ಪ್ರಮಾಣದ ಬಟ್ಟೆ ಸಂಗ್ರಹಿಸಲಾಗಿದೆ. ಹೇಗೆ ವಿತರಣೆ ಮಾಡಲಾಗಿದೆ ಎಂದ ಅಂಕಿಅಂಶಗಳನ್ನು ದಾಖಲಿಸಲು ಸೂಚಿಸಲಾಗಿದ್ದು, ಈ ಬಟ್ಟೆಗಳ ಸಾಗಾಣಿಕಾ ವೆಚ್ಚವನ್ನು ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗೂ ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ನಿಧಿಯಿಂದ ಭರಿಸಬೇಕು ಎಂದು ಕಂದಾಯ ಇಲಾಖೆಯ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಈ ನಿರ್ಧಾರ ಶ್ಲಾಘನೆಗೆ ಪಾತ್ರವಾಗಿದೆ.

Sponsored :


9900071610