ವಾಹನ ಸವಾರನಿಗೆ ದಂಡ ಹಾಕಿದ್ದೇ ತಪ್ಪಾಯ್ತು- ಸಚಿವರ ಎದುರೇ ಎಎಸ್​ಐ ಮೇಲೆ ಜಿ.ಪಂ ಅಧ್ಯಕ್ಷನ ದರ್ಪ

1760
Haveri: Zilla Panchayat President's Swank On Police.
Haveri: Zilla Panchayat President's Swank On Police.

ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳಿಗೇ ರಕ್ಷಣೆ ಇಲ್ಲ ಎಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಸಚಿವರ ಎದುರೇ ಜಿ.ಪಂ ಅಧ್ಯಕ್ಷನೊಬ್ಬ ಟ್ರಾಫಿಕ್ ಪೊಲೀಸ್ ಮೇಲೆ ದರ್ಪ ತೋರಿ ಸುದ್ದಿಯಾಗಿದ್ದಾರೆ.

ad

ಹೌದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಎದುರೇ ಜಿ.ಪಂ ಅಧ್ಯಕ್ಷನ ದರ್ಪ ತೋರಿದ್ದರೂ ಸಚಿವರು ಮೌನವಾಗಿರೋದು ರಾಜಕಾರಣಿಗಳ ದರ್ಪಕ್ಕೆ ಸಾಕ್ಷಿ ಒದಗಿಸಿದೆ. ಸೂಕ್ತ ದಾಖಲೆ ಇಲ್ಲದೇ ವಾಹನ ಚಲಾಯಿಸಿದ್ದಕ್ಕೆ ಟ್ರಾಫಿಕ್​ ಎಎಸ್​ಐ ಅಂಬಿಗೇರ್ ವ್ಯಕ್ತಿಯೊಬ್ಬನಿಗೆ ದಂಡ ವಿಧಿಸಿದ್ದರು. ಇದಕ್ಕೆ ಗರಂ ಆದ ಜಿ.ಪಂ ಅಧ್ಯಕ್ಷ ಕೋಟ್ರೇಶಪ್ಪ ಬಸೆಗಣ್ಣಿ ಟ್ರಾಫಿಕ್​ ಎಎಸ್​ಐಯನ್ನು ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಬಾಯಿಗೆ ಬಂದಂತೆ ಬೈಯ್ದಿದ್ದಾರೆ.

ತಪ್ಪು ಮಾಡಿದವನಿಗೆ ಶಿಕ್ಷೆ ವಿಧಿಸಿದ್ದೆ ಪೊಲೀಸ್ ಎಎಸ್​ಐ ಪಾಲಿಗೆ ಮುಳುವಾಗಿದ್ದು, ತನ್ನೂರಿನ ಸವಾರನಿಗೆ ದಂಡ ಹಾಕಿದ್ದೇ ಜಿ.ಪಂ ಅಧ್ಯಕ್ಷ ಕೆರಳಲು ಕಾರಣವಾಗಿದೆ. ಇದೇ ಕಾರಣಕ್ಕೆ ಸಾರ್ವಜನಿಕರು ಹಾಗೂ ಸಚಿವರ ಎದುರೇ ಎಎಸ್​ಐಯನ್ನು ತರಾಟೆಗೆ ತೆಗೆದುಕೊಂಡಿರೋದು ರಾಜಕಾರಣಿಗಳ ದರ್ಪಕ್ಕೆ ಸಾಕ್ಷಿ ಒದಗಿಸಿದೆ.
ಎಎಸ್​​ಐಯನ್ನು ನಿಂದಿಸಿದ ಜಿ.ಪಂ ಅಧ್ಯಕ್ಷ ನಿಂದು ಬಹಳ ಆಗಿದೇ ನೋಡೇ ಬಿಡ್ತಿನಿ ಬಾ ಎಂದು ಅವಾಜ್ ಹಾಕಿದ್ದಾರೆ. ಅಷ್ಟೇ ಅಲ್ಲ ಬಲವಂತವಾಗಿ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ದರ್ಪ ಮೆರೆದಿದ್ದಾರೆ. ಇನ್ನು ಎಎಸ್​ಐ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ನೋಡುತ್ತ ಹಿರಿಯ ಅಧಿಕಾರಿಗಳು ಅಸಹಾಯಕರಾಗಿ ನಿಂತಿದ್ದರು.

Sponsored :

Related Articles