ಶಾಸಕರ ರಾಜೀನಾಮೆಗೆ ಎಚ್ ಡಿಡಿ ಗರಂ! ನಿಮ್ಮ ಶಾಸಕರಿಂದ ನಮ್ಮವರೂ ಹಾಳಾದ್ರು ಡಿಕೆಶಿ ಎದುರು ಅಸಮಧಾನ ತೋಡಿಕೊಂಡ ದೇವೇಗೌಡರು!!

1378

ಜೆಡಿ ಎಸ್-ಕಾಂಗ್ರೆಸ್ ಶಾಸಕರ ರಾಜೀನಾಮೆ ಯಿಂದ ಕೋಪಗೊಂಡಿರುವ ಮಾಜಿ ಪ್ರಧಾನಿ ದೇವೆಗೌಡರು‌ ತಮ್ಮ ಭೇಟಿಗೆ ಆಗಮಿಸಿದ ಡಿ‌.ಕೆ.ಶಿವಕುಮಾರ್ ಎದುರು ತೀವ್ರ ಅಸಮಧಾನ ತೋಡಿಕೊಂಡಿದ್ದಾರೆ .

ಒಂದು ಹಂತದಲ್ಲಿ ತಾಳ್ಮೆಕಳೆದುಕೊಂಡು ಕೂಗಾಡಿದ ದೇವೇಗೌಡರು‌, ನಿಮ್ಮವರೇ ಸರ್ಕಾರ ಮಾಡಿ ಎಂದು ಬೆಂಬಲ ನೀಡಿ. ಈಗ ರಾಜೀನಾಮೆ ಕೊಡ್ತೀರಾ? ನಿಮ್ಮ ಶಾಸಕರು ತಾವು ಹಾಳಾಗೋದಲ್ಲದೇ ನಮ್ಮ ಶಾಸಕರನ್ನು ಹಾಳು ಮಾಡಿದ್ರು ಎಂದು ರೇಗಿದ್ದಾರೆ ಎನ್ನಲಾಗಿದೆ‌.

ad

ಅಲ್ಲದೇ ಈ ಎಲ್ಲ ಬೆಳವಣಿಗೆಗಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯನವರೇ ನೇರ ಕಾರಣ ಎಂದು ಆರೋಪಿಸಿರುವ ದೊಡ್ಡ ಗೌಡರು, ಸರ್ಕಾರ ಬೀಳಿಸಲು ಅವರು ಹೇಗೆ ಪ್ಲ್ಯಾನ್ ಮಾಡಿದ್ದಾರೆ ನೋಡಿ ಎಂದು ಹರಿಹಾಯ್ದಿದ್ದಾರೆ‌.

ಬಳಿಕ ಡಿಕೆಶಿಯ ಜೊತೆ ಸುಧೀರ್ಘ ಮಾತುಕತೆ ನಡೆಸಿದ ದೇವೆಗೌಡರು ಸರ್ಕಾರ ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ.
ಖರ್ಗೆಯವರಿಗೆ ದೂರವಾಣಿ ಕರೆ ಮಾಡಿದ ಎಚ್ ಡಿಡಿ ಪರಿಸ್ಥಿತಿ ಬಂದರೇ ನೀವು ಸಿಎಂ ಆಗಿ ಸಮ್ಮಿಶ್ರ‌ಸರ್ಕಾರ ಮುನ್ನಡೆಸಿ ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ‌ .

ಅಲ್ಲದೇ ಸಿದ್ಧರಾಮಯ್ಯ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಎಚ್ ಡಿ ಡಿ ಸಿದ್ಧರಾಮಯ್ಯ ಸಿಎಂ ಅದರೇ ಜೆಡಿಎಸ್ ಬೆಂಬಲ ಹಿಂಪಡೆಯುವ ನೇರ ಎಚ್ಚರಿಕೆ ನೀಡಿದ್ದಾರೆ.

ಇನ್ನು ದೇವೇಗೌಡರನ್ನು ಸಚಿವ ಡಿ.ಕೆ.ಶಿವಕುಮಾರ್ ಮನವೊಲಿಸಿದ್ದು ಏನೇ ಆದರೂ ಸರ್ಕಾರ ಉಳಿಸಿಕೊಡುತ್ತೇನೆ ಎಂದು ವಾಗ್ದಾನ ಮಾಡಿ ಸಂಜೆ ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ದೇವೆಗೌಡರ ಅಸಮಧಾನಕ್ಕೆ ಕಾರಣವಾಗಿದ್ದು ಈ ಕೋಪ ಯಾವ ರೂಪ ಪಡೆಯುತ್ತೆ ಕಾದು ನೋಡಬೇಕಿದೆ‌.

Sponsored :

Related Articles