ಕಾಂಗ್ರೆಸ್​ ಹೈಕಮಾಂಡ್​​ ಭೇಟಿಗೆ ಎಚ್​ಡಿಡಿ! ರಾಜ್ಯ ಕಾಂಗ್ರೆಸ್ಸಿಗರ ಎದೆಯಲ್ಲಿ ನಡುಕ ಮೂಡಿಸಿದ ದೊಡ್ಡಗೌಡರ ಭೇಟಿ!!

2645
9900071610

ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯೊಂದರಲ್ಲಿ  ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿ ರಾಜ್ಯದ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವ ಢವ ಮೂಡಿಸಿದೆ.

ad

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್​​ ಗಾಂಧಿಯವರನ್ನು ಭೇಟಿ ಮಾಡಲು ಹೆಚ್​ಡಿಡಿ ದೆಹಲಿಗೆ ತೆರಳುತಿದ್ದಂತೆ ರಾಜ್ಯದ ಕಾಂಗ್ರೆಸ್​ ನಾಯಕರ ಎದೆಯಲ್ಲಿ ನಡುಕ ಹುಟ್ಟಿದ್ದು, ರಾಜ್ಯದ ವಿದ್ಯಮಾನಗಳ ಕುರಿತು ಹೈಕಮಾಂಡ್​ ಮಟ್ಟದಲ್ಲಿ ನಡೆಯುವ ಚರ್ಚೆ ರಾಜ್ಯದ ನಾಯಕರ ಆತಂಕಕ್ಕೆ ಕಾರಣವಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರೋ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆಪ್ತರ ವರ್ತನೆಗಳ ಬಗ್ಗೆ ಗೌಡರು  ಹೈಕಮಾಂಡ್​ಗೆ ದೂರು ನೀಡಲಿದ್ದಾರೆ ಎನ್ನಲಾಗುತ್ತಿದೆ. ಕರ್ನಾಟಕದ ಸೋಲಿನ ಪರಾಮರ್ಶೆ ಹಾಗೂ ಕಾಂಗ್ರೆಸ್​ ಬಂಡಾಯದ ಬಗ್ಗೆಯೂ ಸೋನಿಯಾ, ರಾಹುಲ್​​ ಜತೆ ಗೌಡರು ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ.

ತುಮಕೂರಿನಲ್ಲಿ ನಾನು  ಸೋತಿದ್ದು ಹೇಗೆ..? ಸೋಲಲು ಕಾರಣ ಯಾರು..?, ಮಂಡ್ಯದಲ್ಲಿ ನಿಖಿಲ್​​ ಸೋತಿದ್ದು ಯಾಕೆ..? ಸೋಲಿನ ಹಿಂದಿರೋರು ಯಾರು..? ಹೀಗೆ ರಾಜ್ಯ ಲೋಕಸಭಾ ಚುನಾವಣೆಯ  ಬಣ್ಣವನ್ನು ಸೋನಿಯಾ, ರಾಹುಲ್​​ ಮುಂದೆ ದೇವೇಗೌಡ್ರು ಬಿಚ್ಚಿಡಲಿದ್ದಾರೆ.

ಇವೆಲ್ಲದರ ನಡುವೆಯೂ ದೋಸ್ತಿ ಸರ್ಕಾರ ಐದು ವರ್ಷ ಪೂರ್ಣಗೊಳಿಸಲು ಇರುವ ದಾರಿಗಳ ಬಗ್ಗೆಯೂ ಗೌಡರು ಸಮಾಲೋಚನೆ ನಡೆ ಸಲಿದ್ದಾರೆ.  ಅಲ್ಲದೆ ಜೆಡಿಎಸ್‌ನ ಒಂದು ಹೆಚ್ಚುವರಿ ಸಚಿವ ಸ್ಥಾನವನ್ನು ಯಾರಿಗೆ ನೀಡುವುದು ಎಂಬುದರ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್​ ಆಟವನ್ನು ಕಟ್ಟಿಹಾಕಲು ದೊಡ್ಡಗೌಡರು ರಣತಂತ್ರಕ್ಕೆ ಮುಂದಾಗಿದ್ದಾರೆ.

Sponsored :


9900071610