ಮಂಡ್ಯದಲ್ಲಿ ಸುಮಲತಾ ಹವಾಗೆ ‘ಟ್ರಬಲ್​ ಶೂಟರ್ ‘DK – ಶಿವಕುಮಾರ್ ಬ್ರೆಕ್…!

14291

ಮಂಡ್ಯದಲ್ಲಿ ಸುಮಲತಾ ಅಂಬರೀಶ್​ ಅವರಿಗೆ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಬಿಗ್ ಶಾಕ್ ಕೊಟ್ಟಿದ್ದಾರೆ. ಸುಮಲತಾ ಅವರ ಪರವಾಗಿ ಚುನಾವಣೆಯಲ್ಲಿ ಯಾರು ನಿಲ್ಲುವಂತಿಲ್ಲ ಹಾಗೆಯೇ ‘ಜೈಕಾರ ಹಾಕುವಂತ್ತಿಲ್ಲ ಎಂದು ಹೇಳಿದ್ದಾರೆ. ಮಂಡ್ಯ ಲೋಕಸಭಾ ಅಖಾಡಕ್ಕೆ ಜಲ ಸಂಪನ್ಮೂಲ ಸಚಿವ ‘ಟ್ರಬಲ್​ ಶೂಟರ್ ಡಿಕೆ – ಶಿವಕುಮಾರ್ ಎಂಟ್ರಿ ಕೊಡುತ್ತಿದ್ದಾರೆ.  ಇಂದು ಸಂಜೆ 5 ಗಂಟೆಗೆ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಸಿಎಂ ಹೆಚ್​ ಡಿ ಕುಮಾರಸ್ವಾಮಿ ಮನವಿ ಮೇರೆಗೆ ಡಿಕೆ – ಶಿವಕುಮಾರ್ ಅವರ ನೇತೃತ್ವದ ಇಂದು ಸಂಜೆ ಮಹತ್ವದ ಸಭೆಯನ್ನು ಆಯೋಜನೆ ಮಾಡಲಾಗಿದೆ.

ad

ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್​ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್, ಮುಂಚೂಣಿ ನಾಯಕರುಗಳು , ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ಸಭೆ ಸಂಜೆ 5 ಗಂಟೆಗೆ ನಡೆಯಲಿದೆ. ಸಭೆಯ ನಂತರ ಎಲ್ಲಾ ಮುಖಂಡರುಗಳು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಿಖಿಲ್ ಕುಮರಸ್ವಾಮಿಗೆ ಬೆಂಬಲವನ್ನು ಘೋಷಣೆ ಮಾಡಲಿದ್ದಾರೆ. ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪೂರ್ಣ ಚುನಾವಣಾ ಉಸ್ತುವಾರಿಯನ್ನ ಡಿಕೆ ಶಿವಕುಮಾರ್ ಅವರ ಹೆಗಲಿಗೆ ವಹಿಸಿ ಕೊಟ್ಟಿದ್ದಾರೆ. ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ಎಂಟ್ರಿಯಿಂದ ಸುಮಲತಾ ಅವರು ಏಕಾಂಗಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡರು ನೀಡಿದ್ದ ಬೆಂಬಲದಿಂದ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದ ಸುಮಲತಾ ಅಂಬರೀಶ್ ಆದರೆ ಇದೀಗ ಡಿಕೆ ಶಿವಕುಮಾರ್  ಅವರ ಎಂಟ್ರಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೆ.

Sponsored :

Related Articles