ಇಲ್ಲಿ ದೇವರನ್ನು ಬಂಧಿಸಿದ್ದಾರೆ ಪೊಲೀಸರು- ಇಷ್ಟಕ್ಕೂ ದೇವರು ಮಾಡಿದ ತಪ್ಪೇನು ಗೊತ್ತಾ?!

784

ಪೊಲೀಸರು ಯಾರೇ ತಪ್ಪು ಮಾಡಿದರು ಅವರನ್ನು ಬಂಧಿಸಿ ಬಂಧಿಖಾನೆಯಲ್ಲಿ ಇಡುತ್ತಾರೆ. ಅದು ತಪ್ಪು ಮಾಡಿದವರಿಗೆ ಅನ್ವಯಿಸುತ್ತದೆ ಸರಿ… ಆದರೇ ಎನೇ ತಪ್ಪು ಮಾಡಿದರೂ ಅವರನ್ನು ಕ್ಷಮಿಸುವ ಶಕ್ತಿ ಇರುವುದು ದೇವರಿಗೆ ಮಾತ್ರ ಆದರೆ ಇದೀಗ ಪೊಲೀಸರು ದೇವರನ್ನು ಕೂಡ ಬಂಧಿಸಿಟ್ಟಿದ್ದಾರೆ ಅದು ಎಲ್ಲಿ ಅಂತಿರಾ ಹಾಗಾದರೆ ಈ ಸ್ಟೋರಿ ನೋಡಿ.

ad

ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿರುವ ಪೊಲೀಸರಿಂದ ಮಹಾದೇವ ಹಾಗೂ ಗಣಪತಿ ದೇವರುಗಳು ಈಗ ಪೊಲೀಸ ಅತಿಥಿಯಾಗಿದ್ದಾರೆ. ರಾಯಬಾಗ್ ಪಟ್ಟಣದಲ್ಲಿರುವ ಪೊಲೀಸ ಠಾಣೆಯ ಆವರಣದಲ್ಲಿರುವ ದೇವಸ್ಥಾನಕ್ಕೆ ಬೀಗ ಹಾಕಿರುವ ಘಟನೆ ಇದೀಗ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಲವು ದಶಕಗಳ ಹಿಂದೆ  ಶಾಹು ಮಾಹಾರಾಜರು ಈ ಜಾಗವನ್ನು ಕಂದಾಯ ಇಲಾಖೆಗೆ ಬರೆದುಕೊಟ್ಟಿದ್ದರು ಎನ್ನಲಾಗುತ್ತದೆ.ಆದರೆ ಈ ಜಾಗದಲ್ಲಿ ಮೊದಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಠಾಣೆ ಎರಡು ಇದಿದ್ದವು. ಕೆಲವು ವರ್ಷಗಳ ಹಿಂದೆ ಕಂದಾಯ ಇಲಾಖೆ ಬೇರೆ ಕಡೆ ಸ್ಥಳಾಂತರಗೊಂಡಿದರಿಂದ ಪೋಲಿಸ್ ಇಲಾಖೆ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಮೊದಲು ಈ ಇಲಾಖೆಗಳ ಕೆಲಸ ಕಾರ್ಯಗಳಿಗೆ ಬರುವ ಹಾಗೂ ಸ್ಥಳಿಯ ಜನರು ದಿನನಿತ್ಯ ಇಲ್ಲಿಯ ದೇವರುಗಳಿಗೆ  ಪೂಜೆ ಮಾಡಿಸಿ, ಕೈಮುಗಿದು ಮುಂದಿನ ಕಾರ್ಯಗಳನ್ನು ಮಾಡುತ್ತಿದ್ದರು, ಅಲ್ಲದೇ ಇನ್ನೂ ಕೆಲವರು  ವಿಶ್ರಾಂತಿ ಪಡೆಯುತ್ತಿದ್ದರು.

ಈಗ ಇಲ್ಲಿಯ ಪೋಲಿಸ್ ಠಾಣೆಯನ್ನು  ನೂತನವಾಗಿ ನಿರ್ಮಿಸಿದ ಕಟ್ಟಡಕ್ಕೆ ಸ್ಥಳಾಂತರ ಮಾಡಿದ್ದರಿಂದ ಹಳೆಯ ಪೋಲಿಸ್ ಠಾಣೆಗೆ ಬಿಗ್ ಹಾಕಲಾಯಿತು. ಅಲ್ಲದೇ  ಆವರಣದಲ್ಲಿರುವ ಮಹಾದೇವ ಮತ್ತು ಗಣಪತಿ ದೇವಸ್ಥಾನಕ್ಕೂ ಕೂಡ ಬಿಗ್ ಹಾಕಿರುವ ರಾಯಬಾಗ್ ಪೋಲಿಸರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪೊಲೀಸರು ಠಾಣೆ ವರ್ಗಾವಣೆ ಮಾಡಿರುವದರಿಂದ ದೇವರು ದೇವಸ್ಥಾನಕ್ಕೂ ಬೀಗ ಬಿದ್ದಿರುವದರಿಂದ ಪೊಲೀಸರು ದೇವಸ್ಥಾನವನ್ನು ಸಾರ್ವಜನಿಕರಿಗೆ ಬಿಟ್ಟು ಕೊಡದೇ ಬೀಗ ಹಾಕುವ ಕೇಲಸ ಮಾಡಿರುವುದು ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ .
ಈ ಠಾಣೆಯಲ್ಲಿರುವ ದೇವರು  ಪೊಲೀಸರಿಗೆ ಮಾತ್ರನಾ ಎಲ್ಲರಿಗೂ ದೇವರೆ ಅಲ್ವಾ ಎಂದು ಸ್ಥಳಿಯರು ಖಂಡಿಸಿದ್ದಾರೆ. ಇನ್ನಾದರೂ ಪೊಲೀಸರು ದೇವಸ್ಥಾನವನ್ನು ಮುಕ್ತಿಗೊಳಿಸುತ್ತಾರೆ. ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡುತ್ತಾರಾ? ಎನ್ನುವದನ್ನು ಕಾದು ನೋಡಬೇಕಾಗಿದೆ.

 

Sponsored :

Related Articles