ಭಿಕ್ಷೆ ಬೇಡೋ ಕೈಗಳಲ್ಲಿ ನೇಗಿಲು ಹಿಡಿದ ಛಲಗಾತಿಯರು! ಇವರು ನೀವೆಂದೂ ನೋಡದ ವಿಭಿನ್ನ ಮಂಗಳಮುಖಿಯರು!!

656

ಸಾಮಾನ್ಯವಾಗಿ ಮಂಗಳಮುಖಿಯರು ಎಂದಾಕ್ಷಣ ಟ್ರಾಫಿಕ್ ಸಿಗ್ನಲ್‌, ಟೋಲ್‌ ಗೇಟ್​ಗಳಲ್ಲಿ ಭಿಕ್ಷೆ ಬೇಡುವವರು ಲೈಂಗಿಕವೃತ್ತಿಗಳಲ್ಲಿ ತೊಡಗಿದವರೇ  ನೆನಪಾಗುತ್ತಾರೆ. ಆದರೆ ಇಲ್ಲೊಂದು ಮಂಗಳಮುಖಿಯರ ತಂಡ ಮಾತ್ರ ಜಗತ್ತು ಮೆಚ್ಚುವಂತೆ ಬದುಕಿ ಇತರರಿಗೆ ಮಾದರಿಯಾಗಿದ್ದಾರೆ. ಯಾರಿವರು ಅಂದ್ರಾ ಈ ಸ್ಟೋರಿ ಓದಿ.

ad

ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ವಾಸವಿರುವ ಮಂಗಳಮುಖಿಯರು ಬದುಕಿಗಾಗಿ ಯಾರನ್ನು ಅವಲಂಬಿಸಿಲ್ಲ. ಬದಲಾಗಿ ತಾವೇ ಸ್ವಾವಲಂಬನೆಯಿಂದ ದುಡಿದು ವಿಭಿನ್ನವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮದಲ್ಲಿ ಸುಮಾರು 4 ಎಕರೆ ಜಮೀನನ್ನು ಗುತ್ತಿಗೆ ಪಡೆದ 6ಜನ ಮಂಗಳಮುಖಿಯರು ಒಟ್ಟಾಗಿ ಜಮೀನಿನಲ್ಲಿ ಅಪ್ಪಟ ರೈತರಂತೆ ಮೆಕ್ಕೆ ಜೋಳಾ. ಟಮೋಟೊ. ಆಲುಗೆಡ್ಡೆ. ಬದನೆ ಕಾಯಿಯನ್ನು ಬೆಳೆಯುತ್ತಿದ್ದಾರೆ, ಇದರ ಜೊತೆಗೆ ಕುರಿಸಾಕಾಣಿಕೆ, ಹಸುಸಾಕಾಣಿಕೆಯನ್ನು ಮಾಡುವ ಮೂಲಕ ಮಂಗಳ ಮುಖಿಯರೆಂದರೆ ಮೂಗು ಮುರಿಯುವ ಜನರು ತಮ್ಮತ್ತ ಆಶ್ಚರ್ಯದಿಂದ ನೋಡುವಂತೆ ಮಾಡಿದ್ದಾರೆ.

 

ಇವರಿಗೆ ವ್ಯವಸಾಯದ ಬಗ್ಗೆ ಅರಿವಿನ ಸಮಸ್ಯೆ ಇದ್ದುದ್ದರಿಂದ ಆರಂಭದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದ ಮಂಗಳ ಮುಖಿಯರು ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಮನೆಯಲ್ಲಿ  ಕೂಲಿ ಆಳುಗಳ ಕೆಲಸ ನಿರ್ವಹಿಸಿ ವ್ಯವಾಸಾಯದ ಬಗ್ಗೆ ಅರಿವು ಮೂಡಿಸಿಕೊಂಡ ಇವರು ನಂತರ ತಾವೇ ಸ್ವತಃ ಕೆಲಸ ನಿರ್ವಹಿಸಲು ಆರಂಭಿಸಿ ಇದೀಗಾ ಅಪ್ಪಟ ರೈತರಂತಾಗಿದ್ದಾರೆ.

ಒಟ್ನಲ್ಲಿ ಹಳ್ಳಿಗಳನ್ನು ತೊರೆದು ಕೃಷಿಯನ್ನು ಮರೆಯುತ್ತಿರುವ ಇಂದಿನ ಅನೇಕ ಯುವಕರಿಗೆ ಇವರು ಒಂದು ಉತ್ತಮ ಮಾದರಿಯಾಗಿದ್ದಾರೆ.ಅಲ್ಲದೇ ಮಂಗಳಮುಖಿಯರೆಂದರೇ ಅಸಹ್ಯ ಪಡುವ ಜನರಿಗೂ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಬದುಕಿ ತೋರಿಸಿ ನಿಜಾರ್ಥದಲ್ಲಿ ಸಾಧನಾಮುಖಿಯರಾಗಿದ್ದಾರೆ.

Sponsored :

Related Articles