ಕೆಲಸಕ್ಕೆ ಹೋದರೇ ರೆಸಾರ್ಟ್​​ಗೆ ಬಾ ಅಂತಾನೆ….! ಪ್ರತಿಷ್ಠಿತ ಕಂಪನಿ ಮುಖ್ಯಸ್ಥನ ಕಾಮುಕತನಕ್ಕೆ ನೊಂದು ಮಹಿಳಾ ಆಯೋಗದ ಮೊರೆ ಹೋದ ಮಹಿಳೆ…!

4714

ಪ್ರತಿಷ್ಠಿತ ಹಿಮಾಲಯ್ ಡ್ರಗ್​ ಕಂಪನಿ ಮುಖ್ಯಸ್ಥನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಉತ್ತರ ತಾಲೂಕಿನ ಮಾಕಳಿಯಲ್ಲಿರುವ ಹಿಮಾಲಯ ಡ್ರಗ್ ಕಂಪನಿಯ ಕಾಮುಕನೊಬ್ಬನ ಮುಖ ಇದೀಗ ಹೊರಗೆ ಬಂದಿದ್ದೆ. ಹೌದು ಪ್ರಸಿದ್ದ ಹಿಮಾಲಯ ಕಂಪನಿಯ ಮುಖ್ಯಸ್ಥನ ವಿರುದ್ಧ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳದ ಆರೋಪದಡಿ ಮಹಿಳಾ ಆಯೋಗದಲ್ಲಿ ದೂರು ದಾಖಲಿಸಿದ್ದಾರೆ .

ಹಿಮಾಲಯ ಡ್ರಗ್​ ಕಂಪನಿ ಮುಖ್ಯಸ್ಥನ ಸುಂದರಂ ರಾಮಚಂದ್ರನ್ ಎಂಬ ವ್ಯಕ್ತಿಯು ಅಲ್ಲಿಯೇ ರಿಸರ್ಚ್​ ಅಸೋಸಿಯೇಟ್​ ಆಗಿದ್ದ ಮಹಿಳೆಯೊಬ್ಬರಿಗೆ ಪ್ರತಿನಿತ್ಯವೂ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದು , ಆತನನ ವಿರುದ್ಧ ಮಾಕಳಿ ಪೊಲೀಸರು ಎಫ್​​ಐಆರ್​ ದಾಖಲಿಸಲಾಗಿದೆ.

ad

ಹಿಮಾಲಯ ಡ್ರಗ್ ಕಂಪೆನಿಯಲ್ಲಿ ರಿಸರ್ಚ್​ ಅಸೋಸಿಯೇಟ್​ ಆಗಿದ್ದ ಮಹಿಳೆಗೆ ಪ್ರತಿನಿತ್ಯವು ತನ್ನೊಂದಿಗೆ ಡೇಟಿಂಗ್​ಗೆ ಬರುವಂತೆ ಪೀಡಿಸುತ್ತಿದ್ದಾನೆ ಅಲ್ಲದೆ ಮನೆಗೆ ಡ್ರಾಪ್​ ನೀಡುವ ನೆಪದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಜೊತೆಗೆ ನಿನ್ನ ಗಂಡನನ್ನು ಬಿಟ್ಟು ನನ್ನ ಜೊತೆ ಬಾ. ರೆಸಾರ್ಟ್​ನಲ್ಲಿ ಖಷಿಯಿಂದ ಕಾಲ ಕಳೆಯೋಣ ಎಂದೆಲ್ಲಾ ಕಾಡುತ್ತಿದ್ದಾನೆ. ಇನ್ನೂ ಈ ವಿಚಾರವಾಗಿ ಎಲ್ಲಾದರೂ ಧ್ವನಿ ಎತ್ತಿದ್ದರೆ ಇದರಿಂದ ನಿನಗೆ ತೊಂದರೆಯಾಗುತ್ತದೆ. ಅದರಲ್ಲೂ ಪೊಲೀಸರಿಗೆ ದೂರು ನೀಡಿದರೆ ನೀನೇ ಕೋರ್ಟ್​ ಕಚೇರಿ ಎಂದೆಲ್ಲಾ ಅಲೆಯಬೇಕಾಗುತ್ತದೆ ಎಚ್ಚರಿಕೆ ಎಂದು ಬೆದರಿಸುತ್ತಿದ್ದ.

ಕೊನೆಗೆ  ಕಾಮುಕ ಸುಂದರಂ ರಾಮಚಂದ್ರನ್ ವರ್ತನೆಗೆ ಬೇಸತ್ತು ಮಹಿಳಾ ಆಯೋಗಕ್ಕೆ ಸಂತ್ರಸ್ತೆ ದೂರು ದಾಖಲಿಸಿದ್ದರು, ಇನ್ನೂ ಈ ದೂರಿಗೆ ಸಂಬಂಧಿಸಿದಂತೆ ಆತನ ವಿಚಾರಣೆ ನಡೆಸಿದಾಗ ಆಯೋಗದ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣ ಕುರಿತಂತೆ ಮಹಿಳೆ ಮಾದನಾಯಕನಹಳ್ಳಿ ಪೊಲೀಸರಿಗೂ ದೂರು ನೀಡಿದ್ದು, ಎಫ್​ಐಆರ್​ ದಾಖಲಿಸಲಾಗಿದೆ.

Sponsored :

Related Articles