ಎಚ್​ಡಿಕೆ ಸಚಿವ ಸಂಪುಟದ ಸಚಿವರು ಸಿದ್ದು ಚಮಚಾಗಳು! ದೋಸ್ತಿಯಲ್ಲಿ ಸಂಚಲನ ಮೂಡಿಸಿದ ವಿಶ್ವನಾಥ ಹೇಳಿಕೆ!!

699
9900071610

ಲೋಕಸಭೆ ಚುನಾವಣೆಗೂ ಮುನ್ನವೇ ದೋಸ್ತಿ ಸರ್ಕಾರದಲ್ಲಿ ಅಸಮಧಾನ ಭುಗಿಲೇಳುವ ಮುನ್ಸೂಚನೆ ದೊರೆತಿದೆ. ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್​.ವಿಶ್ವನಾಥ ಹೇಳಿಕೆ ಕಾಂಗ್ರೆಸ್​ ಪಾಳಯದ ಅಸಮಧಾನಕ್ಕೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತವಾಗತೊಡಗಿದೆ.

ad


ಹಾವೇರಿಯಲ್ಲಿ ಮಾತನಾಡಿದ್ದ ಎಚ್​.ವಿಶ್ವನಾಥ, ಹೆಚ್​ಡಿಕೆ ಸಿಎಂ ಆಗಿ ದಕ್ಷಕಾರ್ಯನಿರ್ವಹಣೆ ಮಾಡ್ತಿದ್ದಾರೆ. ಆದರೆ ಎಚ್​ಡಿಕೆ ಸಂಪುಟದಲ್ಲಿದ್ದುಕೊಂಡು ಸಚಿವರುಗಳು ಸಿದ್ಧು ಚಮಚಾಗಿರಿ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ನೇರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧವೇ ಹರಿಹಾಯ್ದಿದ್ದ ವಿಶ್ವನಾಥ, ಗೃಹಸಚಿವರು ಚಮಚಾಗಿರಿ ಮಾಡುತ್ತಿದ್ದಾರೆ ಎಂದಿದ್ದರು.

ವಿಶ್ವನಾಥ ಅವರ ಚಮಚಾಗಿರಿ ಹೇಳಿಕೆ ದೋಸ್ತಿ ನಾಯಕರ ನಡುವಿನ ಅಸಮಧಾನಕ್ಕೆ ಕಾರಣವಾಗಿದ್ದು, ವಿಶ್ವನಾಥ ಯಾವ ಅರ್ಥದಲ್ಲಿ ಈ ಶಬ್ದ ಬಳಸಿದ್ದಾರೆ ಎಂಬುದು ಅರ್ಥವಾಗದೇ ಕಾಂಗ್ರೆಸ್​ ನಾಯಕರು ಮುಜುಗರ ಎದುರಿಸುತ್ತಿದ್ದಾರೆ.

ಆದರೆ ವಿಶ್ವನಾಥ ಈ ಹೇಳಿಕೆ ಕಾಂಗ್ರೆಸ್​ ನಾಯಕರು, ಶಾಸಕರು ಹಾಗೂ ಸಚಿವರುಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಿಎಂ ಕುಮಾರಸ್ವಾಮಿ ಬಳಿಯೇ ಸಚಿವರುಗಳು ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿರುವಾಗಲೇ ಕೆಲ ಕಾಂಗ್ರೆಸ್ ನಾಯಕರು ಸಿದ್ಧರಾಮಯ್ಯನವರು ಸಿಎಂ ಆಗುವ ಬಗ್ಗೆ ಮಾತನಾಡಿದ್ದರಿಂದ ವಿಶ್ವನಾಥ ಆಕ್ರೋಶದಿಂದ ಹೀಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

Sponsored :


9900071610