ದೇಶದೆಲ್ಲೆಡೆ ಇಂದು ‘ಕನಸಿಗೆ ಬಣ್ಣತುಂಬುವ ರಂಗು ರಂಗಿನ ಹೋಳಿ ಹಬ್ಬದ ಸಡಗರ…!

90

ದೇಶದೆಲ್ಲಡೆ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕಿನ ಮಹದೇವಪುರ ಕ್ಷೇತ್ರದ ಹೂಡಿಯಲ್ಲಿ ಜನ್​​ ಸಹಯೋಗ ಸಂಘಟನೆ ವತಿಯಿಂದ ರಂಗಿನ ಹಬ್ಬವನ್ನು ಆಚರಿಸಿದರು. ವೈಟ್​ಫೀಲ್ಡ್​​, ಐಟಿಪಿಎಲ್​​ ಬಸವಣ್ಣನಗರ ಸೇರಿದಂತೆ ಸುತ್ತಮುತ್ತಲಿನ ಜನರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ.

ad

ಪಂಜಾಬ್​​ನ ಬಾರ್ಡರ್​ ಸೆಕ್ಯೂರಿಟಿ ಪೋರ್ಸ್​​ ಸಿಬ್ಬಂದಿ ಕಾಮಣ್ಣ ದಹಿಸೋ ಮೂಲಕ ಹೋಳಿ ಹಬ್ಬವನ್ನು ಆಚರಿಸಿಕೊಂಡರು. ಇನ್ನು ಉತ್ತರ ಪ್ರದೇಶದ ರಿಷಿಕೇಶಿಯಲ್ಲಿ 40ಕ್ಕೂ ಹೆಚ್ಚು ದೇಶಗಳ ಪ್ರಜೆಗಳು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಿದರು. ಕಾನ್ಪುರ, ಲಕ್ನೋನದಲ್ಲಿ ಕಾಮಣ್ಣನ ದಹನಮಾಡೋ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದರು.

Sponsored :

Related Articles