ಡಾ.ರಾಜ್​ ಪುಣ್ಯಸ್ಮರಣೆಗೂ ತಟ್ಟಿದ ನೀತಿಸಂಹಿತೆ ಬಿಸಿ- ಅನ್ನದಾಸೋಹಕ್ಕೆ ಬ್ರೇಕ್ !

345
9900071610

ರಾಜ್ಯದಲ್ಲಿ ಚುನಾವಣೆ ಪೂರ್ವಭಾವಿಯಾಗಿ ಜಾರಿಯಾಗಿರುವ ನೀತಿಸಂಹಿತೆ ಜನಜೀವನ- ಚಿತ್ರಬದುಕಿನ ಮೇಲೂ ಪ್ರಭಾವ ಬೀರಿದೆ. ನೀತಿಸಂಹಿತೆಯ ಬಿಸಿ ವರನಟ ಡಾ.ರಾಜ್​ಕುಮಾರ್​​​​ ಪುಣ್ಯಸ್ಮರಣೆಗೂ ತಟ್ಟಿದ್ದು, ಪುಣ್ಯಸ್ಮರಣೆ ಅಂಗವಾಗಿ ನಡೆಯುತ್ತಿದ್ದ ಊಟ ವ್ಯವಸ್ಥೆಗೂ ಬ್ರೇಕ ಬಿದ್ದಿದೆ. ಪ್ರತಿವರ್ಷ ಡಾ.ರಾಜ್​ ಸ್ಮಾರಕದ ಬಳಿ ಶಾಮಿಯಾನ ಹಾಕಿ, ಹೂವಿನ ಅಲಂಕಾರ ಮಾಡಿ ಅದ್ದೂರಿಯಾಗಿ ಪುಣ್ಯಸ್ಮರಣೆ ಆಚರಿಸಿ ಅಂದಾಜು 5-6 ಸಾವಿರ ಜನರಿಗೆ ಊಟ-ಉಪಹಾರ-ಸಿಹಿತಿಂಡಿ ವಿತರಿಸಲಾಗುತ್ತಿತ್ತು. ಆದರೇ ಈ ವರ್ಷ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇವೆಲ್ಲಕ್ಕೂ ಬ್ರೇಕ್​ ಬಿದ್ದಿದ್ದು, ಕೇವಲ ಪೂಜೆ ಮಾತ್ರ ನಡೆದಿದೆ.

ad

ಹೀಗಾಗಿ ರಾಜ್​ಕುಮಾರ್​​ ಪುಣ್ಯಸ್ಮರಣೆ ಅಂಗವಾಗಿ ಡಾ.ರಾಜ್​ಕುಮಾರ್ ಕುಟುಂಬದ ಸದಸ್ಯರು ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಅಲ್ಲದೇ ಮನೆಯಲ್ಲೇ ತಯಾರಿಸಿ ತಂದಿದ್ದ ಸಿಹಿತಿನಿಸುಗಳನ್ನು ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ, ರಾಘವೇಂದ್ರ ರಾಜ್​ಕುಮಾರ್​, ಅಪ್ಪಾಜಿಯನ್ನು ಇಂದಿಗೂ ತುಂಬಾ ಮಿಸ್ ಮಾಡ್ಕೋತೇವೆ. ಅಪ್ಪಾಜಿ ಹಾಗೂ ಅಮ್ಮನ ನೆನಪಿನಲ್ಲಿ ಒಂದು ಯೋಗ ಮಂದಿರ ಸ್ಥಾಪಿಸುತ್ತಿದ್ದೇವೆ. ಜಗತ್ತಿನಲ್ಲೇ ಅಪರೂಪವಾದ ಯೋಗ ಕೇಂದ್ರ ಇದಾಗಲಿದೆ ಎಂದರು.

Sponsored :


9900071610