ನನ್ನ ಎದೆಯಿಂದ ಸಿದ್ಧರಾಮಯ್ಯನವರನ್ನು ಹೊರಹಾಕಿದ್ದೇನೆ….! ಹಾಗಿದ್ದರೇ ಈಗ ಎಂಟಿಬಿ ಎದೆ ಬಗೆದರೇ ಕಾಣಿಸೋದು ಯಾರು ಗೊತ್ತಾ?!

952

ರಾಜ್ಯ ರಾಜಕಾರಣದಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ತಮ್ಮ ನೇರ ಮಾತಿನ ಶೈಲಿಯಿಂದಲೇ ಹೆಸರಾದವರು. ಹಿಂದೊಮ್ಮೆ ಚುನಾವಣೆ ವೇಳೆ ನನ್ನ ಎದೆ ಬಗೆದರೇ ಅಲ್ಲಿ ನಿಮಗೆ ಸಿದ್ಧರಾಮಯ್ಯ ಕಾಣುತ್ತಾರೆ ಎಂದಿದ್ದ ಮಾಜಿ ಸಚಿವ ಹಾಗೂ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಇದೀಗ ನನ್ನ ಎದೆಯಲ್ಲಿದ್ದ ಸಿದ್ಧರಾಮಯ್ಯನವರನ್ನು ಕಿತ್ತು ಹಾಕಿದ್ದೇನೆ ಎಂದಿದ್ದಾರೆ.


ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಅನರ್ಹ ಶಾಸಕರನ್ನು ಕಡೆಗಣಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಡಾ.ಸುಧಾಕರ್ ಮನೆಯಲ್ಲಿ ಸಭೆ ಇಂದು 17 ಅನರ್ಹ ಶಾಸಕರ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಎಂಟಿಬಿ ನಾಗರಾಜ್​, ಸಭೆ ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತಿದ್ದರು.

ad


ಈ ವೇಳೆ ಸಿದ್ಧರಾಮಯ್ಯನವರ ಕುರಿತು ಮಾತನಾಡಿದ ಎಂಟಿಬಿ, ಈ ಹಿಂದೆ ನನ್ನ ಎದೆ ಬಗೆದರೆ ಸಿದ್ಧರಾಮಯ್ಯ ಕಾಣುತ್ತಾರೆ ಎಂದಿದ್ದೆ. ಆದರೆ ಈಗ ನನ್ನ ಎದೆಯಲ್ಲಿ ಸಿದ್ಧರಾಮಯ್ಯನವರಿಗೆ ಸ್ಥಾನ ಇಲ್ಲ. ಬದಲಾಗಿ ಆ ಸ್ಥಳದಲ್ಲಿ ನನ್ನನ್ನು ಗೆಲ್ಲಿಸುವ ಮತದಾರರಿಗೆ ಸ್ಥಾನ ನೀಡಿದ್ದೇನೆ ಎಂದರು.


ಮುಂಬರುವ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದಿಂದ ಪುತ್ರ ಕಣಕ್ಕಿಳಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ಸುಪ್ರೀಂ ಕೋರ್ಟ್​ನ ತೀರ್ಪಿಗಾಗಿ ಕಾಯುತ್ತಿದ್ದೇವೆ. ಸುಪ್ರೀಂ ತೀರ್ಪಿನ ಬಳಿಕ ಯಾರು ಕಣಕ್ಕಿಳಿಯುತ್ತಾರೆ ಎಂಬುದನ್ನು ನಿರ್ಧರಿಸುತ್ತೇವೆ ಎಂದರು.

Sponsored :

Related Articles