ಮೈಸೂರಿನಲ್ಲಿ ಪ್ರತಿಷ್ಠಿತ ಜವಳಿ ಕೇಂದ್ರದ ಮೇಲೆ ಐಟಿ ದಾಳಿ!5.8 ಕೋಟಿ ವಶಕ್ಕೆ ಪಡೆದ ಅಧಿಕಾರಿಗಳು!!

1012

ಮೈಸೂರು ನಗರದ ಪ್ರತಿಷ್ಠಿತ ಜವಳಿ ಕೇಂದ್ರದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ 5.80 ಕೋಟಿ ನಗದು ವಶಕ್ಕೆ ಪಡೆದಿದ್ದಾರೆ.ಮೈಸೂರು ನಗರದಲ್ಲಿನ ಧರ್ಮರಾಜ ಚೆಟ್ಟಿ ಅ್ಯಂಡ್ ಸನ್ಸ್ ಎಂಬವರಿಗೆ ಸೇರಿದ 13.75 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮನ್ನಾರ್ಸ್ ಸಿಲ್ಕ್ ಜವಳಿ ಉದ್ಯಮದ ಮಾಲೀಕ ಸಂದೀಪ್ ಖರೀದಿಸಿದ್ದರು.

ad

 

8 ಕೋಟಿಯನ್ನು ಖಾತೆ ಹಾಕಿ ಉಳಿದ ಹಣವನ್ನು ನಗದು ರೂಪದಲ್ಲಿ ನೀಡಿದ್ದರು. ಈ ಬಹುಕೋಟಿ ರುಪಾಯಿ ವ್ಯವಹಾರದ ಬಗ್ಗೆ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಹತ್ತಿ ತನಿಖೆ ಆರಂಭಿಸಿದ್ದರು. ಖಚಿತ ‌ಮಾಹಿತಿ ಮೇಲೆ ನಗರದ ಒಲಂಪಿಯಾ ಚಿತ್ರಮಂದಿರ ಮುಂಭಾಗವಿರುವ ಮನ್ನಾರ್ಸ್ ಸಿಲ್ಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಆಸ್ತಿ ಖರೀದಿಗಾಗಿ ಇಟ್ಡಿದ್ದ 5.80 ಕೋಟಿ ರೂ. ಮೊತ್ತ ಸಿಕ್ಕಿದೆ.

 

ಧರ್ಮರಾಜ ಚೆಟ್ಟಿ ಅ್ಯಂಡ್ ಸನ್ಸ್ ನಿಂದ ಆಸ್ತಿ ಖರೀದಿ ಒಪ್ಪಂದ ಮಾಡಿಕೊಂಡು 8 ಕೋಟಿ ಹಣವನ್ನು ಬ್ಯಾಂಕ್ ಮುಲಕ ನೀಡಿ ಉಳಿದ 5.80 ಕೋಟಿ ರೂಪಾಯಿಯನ್ನು ನಗದು ಮುಲಕ ನೀಡಿ ತೆರಿಗೆ ವಂಚಿಸಲು ಪ್ರಯತ್ನಿಸಿರೋದು ಬಯಲಾಗಿದೆ. ಇದೇ ಮೊದಲ ಬಾರಿಗೆ ಐಟಿ ಇಲಾಖೆ ಸಾಂಸ್ಕೃತಿಕ ನಗರಿಯಲ್ಲಿ ಲೆಕ್ಕ ಕೊಡದ ಭಾರೀ ಮೊತ್ತವನ್ನು ವಶಪಡಿಸಿಕೊಂಡಿದೆ.

Sponsored :

Related Articles