ಹೊನ್ನಾಳಿ ರೇಣುಕಾಚಾರ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ? ಬಿಜೆಪಿಯಲ್ಲೂ ಶುರುವಾಗುತ್ತಾ ಶಾಸಕರ ರಾಜೀನಾಮೆ ಪರ್ವ ?

5566

ಯಡಿಯೂರಪ್ಪ ವಿರುದ್ಧ ಪರಮಾಪ್ತರಿಂದಲೇ ಆಕ್ರೋಶ ಸ್ಫೋಟಗೊಂಡಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗೋ ಪರಿಸ್ಥಿತಿ ಬಂದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ.

ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ರೇಣುಕಾಚಾರ್ಯ ಫುಲ್ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ರೇಣುಕಾಚಾರ್ಯ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿ ಪದವಿ ದಕ್ಕಿದೆ. ಯಾರು ಏನು ಅಂದ್ಕೊಂಡ್ರೂ ಪರವಾಗಿಲ್ಲ, ಓಪನ್ ಆಗಿಯೇ ಹೇಳ್ತೇನೆ. ಆರು ಬಾರಿ ಗೆದ್ದ ಕತ್ತಿ ಇರಲಿಲ್ಲವೇ? ನಾಲ್ಕಾರು ಬಾರಿ ಗೆದ್ದ ಶಾಸಕರಿರಲಿಲ್ಲವೇ? ಗೆದ್ದವರಿಗೆ ಕೊಡದೆ ಸೋತವರಿಗೆ ಕೊಟ್ಟದ್ದು ಸರಿ ಅಲ್ಲವೇ ಅಲ್ಲ. ಹಾಗೇಕೆ ಮಾಡಿದ್ದಾರೆ? ಗೆದ್ದವರನ್ನೇ ಸಚಿವರಾಗಿಸಬಹುದಿತ್ತು. ಎಂದು ನೂತನ ಸಚಿವ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ad

ಇನ್ನೊಂದೆಡೆ ರೇಣುಕಾಚಾರ್ಯ ರಾಜೀನಾಮೆ ಹೇಳಿಕೆಯನ್ನು ಉಮೇಶ್ ಕತ್ತಿ, ರಾಮಪ್ಪ ಲಮಾಣಿ ಸಹ ಅನುಮೋದಿಸಿದ್ದು ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಪದವಿ ದೊರಕದಿದ್ದಲ್ಲಿ ತಾವೂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Sponsored :

Related Articles