ಬಳ್ಳಾರಿಗೆ ಎತ್ತಾಕ್ತೀನಿ-ಪ್ರಾಂಶುಪಾಲಗೆ ಸಚಿವ ಜಿಟಿ ದೇವೇಗೌಡ ತರಾಟೆ

4234

ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿಗೆ ಈವತ್ತು ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಕಾಲೇಜಿನ ಪ್ರಾಂಶುಪಾಲರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳ ಜೊತೆ ಸಮಸ್ಯೆ ಕುರಿತು ಸಚಿವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

   

ad

ಮೂಲ ಸೌಕರ್ಯ ಕೊರತೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಈಗಾಗಲೇ ವಿದ್ಯಾರ್ಥಿ ಗಳು ಪ್ರತಿಭಟನೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲವೆಂದು ಸಚಿವರ ಗಮನ ಸೆಳೆದರು. ಇದರಿಂದಾಗಿ ಸಿಟ್ಟಿಗೆದ್ದ ಸಚಿವರು, ನಿರ್ವಹಣೆ ವಿಷಯವಾಗಿ ಪ್ರಾಂಶುಪಾಲರುಗಳನ್ನು ತರಾಟೆಗೆ ತೆಗೆದುಕೊಂಡರು.

ಯಾವ ಕೊರತೆ ಕಾಲೇಜಿನಲ್ಲಿವೆ ಅನ್ನುವುದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೀರಾ ಅಂತಾ ಪ್ರಾಂಶುಪಾಲರು ಹಾಗೂ ಜಂಟಿ ನಿರ್ದೇಶಕರಿಗೆ ಕಿಡಿಕಾರಿದರು. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಿಮಗೆ ಗೊತ್ತಿಲ್ಲ ಹೀಗಾದ್ರೆ ನಿಮ್ಮನ್ನ ಬಳ್ಳಾರಿಗೆ ಕಾಣಿಸ್ತೀನಿ ಅಂತಾ ಗದರಿದರು. ಇನ್ಮುಂದೆ ಕಾಲೇಜು ನಿರ್ವಹಣೆ ಆಗಬೇಕು ಎಂದು ಜಂಟಿ ನಿರ್ದೇಶಕ ಉದಯಶಂಕರ್​ಗೆ ಸೂಚನೆ ನೀಡಿದರು.

Sponsored :

Related Articles